ಭಾರತದ 100ಕ್ಕೂ ಹೆಚ್ಚು ವಿಮಾನದಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷ, ಬೋಯಿಂಗ್ ಅಲರ್ಟ್

Published : Sep 28, 2026, 11:00 AM IST
flight (representational image)

ಸಾರಾಂಶ

ತಾಂತ್ರಿಕ ದೋಷ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಭಾರತದಲ್ಲಿ 100ಕ್ಕೂ ಹೆಚ್ಚು ವಿಮಾನ ಹಾರಾಟದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ದಿಢೀರ್ ಕಾಣಿಸಿಕೊಂಡ ಸಮಸ್ಯೆಯಿಂದ ಪ್ರಯಾಣಿಕರು ಪರದಾಡುವಂತಾಗಿದೆ.

ನವದೆಹಲಿ (ಸೆ.28) ಭಾರತದಲ್ಲಿ 100ಕ್ಕೂ ಹೆಚ್ಚು ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿದೆ. ಪ್ರಮುಖವಾಗಿ ಬೋಯಿಂಗ್ 737 MAX ವಿಮಾನದಲ್ಲಿ ಕಾಣಿಸಿಕೊಂಡಿರುವ ತಾಂತ್ರಿಕ ದೋಷದಿಂದ ಹಾರಾಟದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ . ಆಟೋಮೇಟೆಡ್ ಫ್ಲೈಟ್ ಗೈಡೆನ್ಸ್ ಸಿಸ್ಟಮ್‌ನಲ್ಲಿ ದೋಷ ಕಾಣಿಸಿಕೊಂಡಿದೆ. ಸದ್ಯ ಬೋಯಿಂಗ್ ಈ ಸಮಸ್ಯೆ ಪರಿಹರಿಸುವಲ್ಲಿ ಕಾರ್ಯನಿರತವಾಗಿದೆ. ಆದರೆ ಭಾರತದಲ್ಲಿ 100ಕ್ಕೂ ಹೆಚ್ಚು ಬೋಯಿಂಗ್ 737 MAX ವಿಮಾನ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಈ ವಿಮಾನ ಸೇವೆಗಳಲ್ಲಿ ವ್ಯತ್ಯಯ ಸಾಧ್ಯತೆ ಇದೆ.

ಏರ್ ಇಂಡಿಯಾ ಸೇರಿದಂತೆ ಹಲವು ಸಂಸ್ಥೆಗಳ ವಿಮಾನ ಹಾರಾಟ ವ್ಯತ್ಯಯ

ಬೋಯಿಂಗ್ 737 MAX ವಿಮಾನವನ್ನು ಭಾರತದಲ್ಲಿ ಅತೀ ಹೆಚ್ಚು ಬಳಸುತ್ತಿರುವ ವಿಮಾಯಾನ ಸಂಸ್ಥೆ ಏರ್ ಇಂಡಿಯಾ. ಇನ್ನು ಅಕಸಾ ಏರ್ ಕೂಡ ಬೋಯಿಂಗ್ 737 MAX ವಿಮಾನ ಬಳಸುತ್ತಿದೆ. ಏರ್ ಇಂಡಿಯಾ ಹಾಗೂ ಅಕಾಸ ಏರ್ ಒಟ್ಟು 96ಕ್ಕೂ ಹೆಚ್ಚು ಬೋಯಿಂಗ್ 737 MAX ವಿಮಾನ ಬಳಸುತ್ತಿದೆ.

ಬೋಯಿಂಗ್ ಹೇಳಿದ್ದೇನು?

ಕಳೆದ ತಿಂಗಳು ಬೋಯಿಂಗ್ 737 MAX ವಿಮಾನದಲ್ಲಿ ತಾಂತ್ರಿತ ದೋಷಗಳು ಕಾಣಿಸಿಕೊಂಡಿತ್ತು. ಬೋಯಿಂಗ್ ವಿಮಾನ ಲ್ಯಾಂಡಿಂಗ್ ವೇಳೆ ಎದುರಿಸಿದ ಸಮಸ್ಯೆಯಿಂದ ಪತ್ತೆಯಾಗಿತ್ತು. ಕಳೆದ ತಿಂಗಳು ಈ ಕುರಿತು ಎಲ್ಲಾ ಬೋಯಿಂಗ್ ಆಪರೇಟರ್ಸ್‌ಗೆ ಸೂಚನೆ ನೀಡಲಾಗಿತ್ತು. ಈ ಕುರಿತು ಬೋಯಿಂಗ್ ಎಂಜಿನೀಯರ್ಸ್, ಅಧಿಕಾರಿಗಳು ಕಳೆದೊಂದು ತಿಂಗಳಿನಿಂದ ಸಮಸ್ಯೆ ಪರಿಹರಿಸಲು ಕಾರ್ಯನಿರ್ವಹಿಸಿದ್ದಾರೆ. ಇದೀಗ ಸಾಫ್ಟ್‌ವೇರ್ ಅಪ್‌ಡೇಟ್ ನಡೆಯಲಿದೆ. ಶಾಶ್ವತ ಪರಿಹಾರ ಕಂಡುಕೊಳ್ಳಲಾಗಿದೆ. ಸಾಫ್ಟ್‌ವೇರ್ ಅಪ್‌ಡೇಟ್ ಬಳಿಕ ಬೋಯಿಂಗ್ 737 MAX ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದು ಬೋಯಿಂಗ್ ಹೇಳಿದೆ.

ಏರ್ ಇಂಡಿಯಾ ಬಳಿಕ 53 ಬೋಯಿಂಗ್ 737 MAX ಹಾಗೂ ಅಕಾಸ ಬಳಿ 43 ಬೋಯಿಂಗ್ 737 MAX ವಿಮಾನಗಳಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಅಕಾಸ ಏರ್, ಅಕಾಸ ಏರ್ ಆಪರೇಶನ್‌ನಲ್ಲಿ ಯಾವುದೇ ಸುರಕ್ಷತಾ ಆತಂಕ ಎದುರಾಗಿಲ್ಲ. ಬೋಯಿಂಗ್ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಅಕಸಾ ವಿಮಾನಗಳು ಯಾವುದೇ ಸಮಸ್ಯೆಯಿಲ್ಲದೆ ಕಾರ್ಯನಿರ್ವಹಿಸುತ್ತಿದೆ. ಬೋಯಿಂಗ್ ಸೂಚನೆಯಂತೆ ವಿಮಾನ ಆಪರೇಟರ್ ನಡೆಯುತ್ತಿದೆ ಎಂದಿದೆ. ಇತ್ತ ಏರ್ ಇಂಡಿಯಾ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಜಾಗತಿಕ ಮಟ್ಟದಲ್ಲಿ 2400 ಬೋಯಿಂಗ್ 737 MAX ವಿಮಾನಗಳು ಕಾರ್ಯನಿರ್ವಹಿಸುತ್ತಿದೆ. ಸದ್ಯ ಎಲ್ಲಾ ಬೋಯಿಂಗ್ 737 MAX ವಿಮಾನಗಳ ಸಾಫ್ಟ್‌ವೇರ್ ಅಪ್‌ಡೇಟ್ ಕಾರ್ಯಗಳು ನಡೆಯುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಘಪತ್ ಕದನದ 5 ವರ್ಷ ಬಳಿಕ ಹಸಿರು ಚಟ್ನಿ ಯುದ್ಧ, ಉದ್ರಿಕ್ತರ ಗುಂಪಿನಿಂದ ಅಂಗಡಿ ಮೇಲೆ ದಾಳಿ
ರಸ್ತೆ ಅಗಲೀಕರಣಕ್ಕಾಗಿ ತಮ್ಮ ಪೂರ್ವಜರು ವಾಸವಿದ್ದ ಮನೆಯನ್ನೇ ಕೆಡವಿ ಹಾಕಿದ ಮುಖ್ಯಮಂತ್ರಿ!