Supreme Court: ದೊಡ್ಡಮ್ಮನಿಗಿಂತ ಅಜ್ಜ-ಅಜ್ಜಿಗೆ ಮಕ್ಕಳ ಮೇಲೆ ಹೆಚ್ಚು ಪ್ರೀತಿ!

Published : Jun 10, 2022, 03:00 AM IST
Supreme Court: ದೊಡ್ಡಮ್ಮನಿಗಿಂತ ಅಜ್ಜ-ಅಜ್ಜಿಗೆ ಮಕ್ಕಳ ಮೇಲೆ ಹೆಚ್ಚು ಪ್ರೀತಿ!

ಸಾರಾಂಶ

ಅಜ್ಜ-ಅಜ್ಜಿಯು ಮೊಮ್ಮಕ್ಕಳನ್ನು ಇತರೆ ಯಾರಿಗಿಂತಲೂ ಹೆಚ್ಚಿಗೆ ಪ್ರೀತಿಸುತ್ತಾರೆ ಎಂದಿರುವ ಸುಪ್ರೀಂಕೋರ್ಟ್, ಕೋವಿಡ್‌ಗೆ ತನ್ನ ಇಬ್ಬರೂ ಪೋಷಕರನ್ನು ಕಳೆದುಕೊಂಡು ಅನಾಥನಾಗಿದ್ದ 6 ವರ್ಷದ ಬಾಲಕನನ್ನು, ಆಕೆಯ ದೊಡ್ಡಮ್ಮನ ವಶದಿಂದ ಅಜ್ಜ-ಅಜ್ಜಿಯ ವಶಕ್ಕೆ ಒಪ್ಪಿಸಿದೆ.

ನವದೆಹಲಿ (ಜೂ.10): ಅಜ್ಜ-ಅಜ್ಜಿಯು ಮೊಮ್ಮಕ್ಕಳನ್ನು ಇತರೆ ಯಾರಿಗಿಂತಲೂ ಹೆಚ್ಚಿಗೆ ಪ್ರೀತಿಸುತ್ತಾರೆ ಎಂದಿರುವ ಸುಪ್ರೀಂಕೋರ್ಟ್, ಕೋವಿಡ್‌ಗೆ ತನ್ನ ಇಬ್ಬರೂ ಪೋಷಕರನ್ನು ಕಳೆದುಕೊಂಡು ಅನಾಥನಾಗಿದ್ದ 6 ವರ್ಷದ ಬಾಲಕನನ್ನು, ಆಕೆಯ ದೊಡ್ಡಮ್ಮನ ವಶದಿಂದ ಅಜ್ಜ-ಅಜ್ಜಿಯ ವಶಕ್ಕೆ ಒಪ್ಪಿಸಿದೆ.

ಏನಿದು ಪ್ರಕರಣ?: ಬಾಲಕ ಕಳೆದ ವರ್ಷದ ಮೇ 13 ಮತ್ತು ಜೂ.12ಕ್ಕೆ ತನ್ನ ಪೋಷಕರನ್ನು ಕಳೆದುಕೊಂಡಿದ್ದ. ಈ ವೇಳೆ ಮಗುವಿನ ವಶಕ್ಕಾಗಿ ಬಾಲಕನ ತಾಯಿಯ ಅಕ್ಕ ಮತ್ತು ಬಾಲಕನ ತಂದೆಯ ತಂದೆ ಮತ್ತು ತಾಯಿ (ಅಜ್ಜ-ಅಜ್ಜಿ ) ಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಗುಜರಾತ್‌ ಹೈಕೋರ್ಟ್, ಬಾಲಕನ ದೊಡ್ಡಮ್ಮ ಅವಿವಾಹಿತೆ, ಕೇಂದ್ರ ಸರ್ಕಾರಿ ನೌಕರಿಯಲ್ಲಿದ್ದಾರೆ, ಜೊತೆಗೆ ಅವಿಭಕ್ತ ಕುಟುಂಬದಲ್ಲಿದ್ದಾರೆ. ಹೀಗಾಗಿ ಅವರೇ ಬಾಲಕನ ಪೋಷಣೆಗೆ ಸೂಕ್ತ ಎಂದು ಹೇಳಿ ಬಾಲಕನನ್ನು ಅವರ ವಶಕ್ಕೆ ಒಪ್ಪಿಸಿತ್ತು.

ಸಿಬಿಐ ಪ್ರಕಾರ ಮೃತಪಟ್ಟಿದ್ದ ಮಹಿಳೆ ಕೋರ್ಟ್‌ನಲ್ಲಿ ದಿಢೀರ್‌ ಪ್ರತ್ಯಕ್ಷ: ಕೋರ್ಟ್‌ ಛೀಮಾರಿ

ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ‘ನಮ್ಮ ಸಮಾಜದಲ್ಲಿ ಅಜ್ಜ-ಅಜ್ಜಿ ಯಾವಾಗಲೂ ಮೊಮ್ಮಕ್ಕಳ ಬಗ್ಗೆ ವಿಶೇಷ ಕಾಳಜಿ ಹೊಂದಿರುತ್ತಾರೆ. ಮೊಮ್ಮಕ್ಕಳನ್ನು ನೋಡಿಕೊಳ್ಳುವ ಅಜ್ಜ-ಅಜ್ಜಿ ಸಾಮರ್ಥ್ಯದ ಬಗ್ಗೆ ಯಾರೂ ಅನುಮಾನ ಹೊಂದಿರಬಾರದು. ಭಾವನಾತ್ಮಕವಾಗಿಯೂ ಅವರು ಹೆಚ್ಚು ಕಾಳಜಿ ಹೊಂದಿರುತ್ತಾರೆ. ಹಾಗೆಂದು ಬಾಲಕನ ದೊಡ್ಡಮ್ಮ ಮಗುವನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ ಎಂದು ಅರ್ಥವಲ್ಲ. ಆದರೂ ಮಕ್ಕಳ ಪೋಷಣೆಗೆ ಅಜ್ಜ-ಅಜ್ಜಿಯೇ ಹೆಚ್ಚು ಸೂಕ್ತ. ಈ ವಿಷಯದಲ್ಲಿ ತೀರ್ಪು ನೀಡುವಲ್ಲಿ ಗುಜರಾತ್‌ ಹೈಕೋರ್ಟ್ ತಪ್ಪು ಮಾಡಿದೆ’ ಎಂದು ಹೇಳಿ ಬಾಲಕನನ್ನು 71 ವರ್ಷದ ಅಜ್ಜ-ಅಜ್ಜಿಯ ವಶಕ್ಕೆ ನೀಡಿದೆ. ಜೊತೆಗೆ ದೊಡ್ಡಮ್ಮನಿಗೆ ತಿಂಗಳಿಗೆ ಒಮ್ಮೆ ಭೇಟಿಯ ಅವಕಾಶ ಕಲ್ಪಿಸಿದೆ.

ರಾಷ್ಟ್ರೀಯ ಉದ್ಯಾನ ಸುತ್ತ ಗಣಿ, ಕಟ್ಟಡ ನಿರ್ಮಾಣಕ್ಕೆ ಸುಪ್ರೀಂ ಬ್ರೇಕ್‌: ರಾಷ್ಟ್ರೀಯ ಉದ್ಯಾನಗಳು ಹಾಗೂ ವನ್ಯಜೀವಿ ರಕ್ಷಿತಾರಣ್ಯಗಳ ಸುತ್ತಲಿನ 1 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ‘ಬಫರ್‌ ವಲಯ’ ಎಂದು ಪರಿಗಣಿಸಬೇಕು ಎಂದು ಆದೇಶಿಸಿರುವ ಸರ್ವೋಚ್ಚ ನ್ಯಾಯಾಲಯ, ಈ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ನಡೆಯಬಾರದು ಹಾಗೂ ಕಾರ್ಖಾನೆಗಳು, ಕಾಯಂ ಕಟ್ಟಡಗಳು ತಲೆಯೆತ್ತಕೂಡದು ಎಂಬ ಮಹತ್ವದ ಸೂಚನೆ ನೀಡಿದೆ. ಅರಣ್ಯ ರಕ್ಷಣೆ ಕುರಿತಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾ| ಎಲ್‌. ನಾಗೇಶ್ವರರಾವ್‌ ನೇತೃತ್ವದ ತ್ರಿಸದಸ್ಯ ಪೀಠ ಈ ಆದೇಶ ಹೊರಡಿಸಿದೆ.

'ಕೋರ್ಟ್ ಆದೇಶ ಪಾಲಿಸದವರ ಮೇಲೆ ನಾನೇ ಗುಂಡಿಟ್ಟು ಹೊಡೆಯುತೇನೆ'

‘ರಾಷ್ಟ್ರೀಯ ಉದ್ಯಾನಗಳು ಹಾಗೂ ವನ್ಯಜೀವಿ ರಕ್ಷಿತಾರಣ್ಯಗಳ ಸುತ್ತಲಿನ 1 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ (ಇಎಸ್‌ಝಡ್‌) ಎಂದು ಪರಿಗಣಿಸಬೇಕು. ಇಲ್ಲಿ ಗಣಿಗಾರಿಕೆಗೆ ಅನುಮತಿಸಕೂಡದು. ಕಾರ್ಖಾನೆ ಹಾಗೂ ಕಾಯಂ ಕಟ್ಟಡಗಳ ನಿರ್ಮಾಣ ನಡೆಯಬಾರದು. ಈ ವ್ಯಾಪ್ತಿಯಲ್ಲಿ ಈಗಾಗಲೇ ಕಟ್ಟಡಗಳು ತಲೆಯೆತ್ತಿದ್ದರೆ ಅಂಥ ಕಟ್ಟಡಗಳ ಪಟ್ಟಿಯನ್ನು ಎಲ್ಲ ರಾಜ್ಯಗಳ ಅರಣ್ಯ ಸಂರಕ್ಷಣಾಧಿಕಾರಿಗಳು ಸಿದ್ಧಪಡಿಸಬೇಕು ಹಾಗೂ ಇನ್ನು 3 ತಿಂಗಳ ಒಳಗೆ ನಮಗೆ ವರದಿ ಸಲ್ಲಿಸಬೇಕು’ ಎಂದು ನಿರ್ದೇಶಿಸಿತು. ‘ಸರ್ಕಾರದ ಸಹಾಯ ಪಡೆದು ಉಪಗ್ರಹ ಚಿತ್ರಗಳನ್ನು ಆಧರಿಸಿ ಅಥವಾ ಡ್ರೋನ್‌ ಮೂಲಕ ಚಿತ್ರೀಕರಣ ನಡೆಸಿ ಈ ಸಮೀಕ್ಷೆಯನ್ನು ಅರಣ್ಯ ಸಂರಕ್ಷಕರು ನಡೆಸಬಹುದು’ ಎಂದು ಕೋರ್ಟ್ ಸಲಹೆ ನೀಡಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

25 ಜನರು ಸಾವನ್ನಪ್ಪಿದ ಪಬ್‌ ಮಾಲೀಕರ ರೆಸಾರ್ಟ್‌ ಧ್ವಂಸ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ