PM ಕೇರ್ಸ್ ಫಂಡ್‌ನಿಂದ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಗೆ ಹಣ ವರ್ಗಾವಣೆ ಅರ್ಜಿ ವಜಾಗೊಳಿಸಿದ ಸುಪ್ರೀಂ!

By Suvarna News  |  First Published Aug 18, 2020, 5:37 PM IST

ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ PM ಕೇರ್ಸ್ ಫಂಡ್ ಮೂಲಕ ದಾನಿಗಳಿಂದ ಹಣ ಸಂಗ್ರಹಣೆ ಮಾಡಿತ್ತು. ಸಾರ್ವಜನಿಕರು, ಸೆಲೆಬ್ರೆಟಿಗಳು, ಕ್ರಿಕೆಟಿಗರು ಸೇರಿದಂತೆ ಹಲವರು ಪ್ರಧಾನಿ ಕೇರ್ಸ್ ಫಂಡ್‌ಗೆ ದೇಣಿಗೆ ನೀಡಿದ್ದರು. ಇದೀದ ಈ ಹಣವನ್ನು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಗೆ ವರ್ಗಾಯಿಸಬೇಕೆಂಬ ಮನವಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.


ದೆಹಲಿ(ಆ.18):  ಕೊರೋನಾ ವೈರಸ್ ಸಾಂಕ್ರಾಮಿಕರ ರೋಗ ಭಾರತದಲ್ಲಿ ಆತಂಕ ಸೃಷ್ಟಿಸಲು ಆರಂಭಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಪಿಎಂ ಕೇರ್ಸ್ ಫಂಡ್(ಪ್ರಧಾನ ಮಂತ್ರಿ ಪರಿಹಾರ ನಿಧಿ) ತೆರೆದು ದೇಣಿಗೆ ಸಂಗ್ರಹಿಸಿದೆ. ಪ್ರಧಾನಿ ಕೇರ್ಸ್ ಫಂಡ್ ಪಾರದರ್ಶಕತೆ ಕುರಿತು ವಿಪಕ್ಷಗಳು  ಆಕ್ಷೇಪ ವ್ಯಕ್ತಪಡಿಸುತ್ತಲೇ ಇದೆ. ಇದರ ಬೆನ್ನಲ್ಲೇ ಇದೀಗ ಸುಪ್ರೀಂ ಕೋರ್ಟ್ ಪಿಎಂ ಕೇರ್ಸ್ ನಿಧಿಯನ್ನು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಗೆ ಠೇವಣಿ ಇರಿಸಲು ಅಥವಾ ವರ್ಗಾಯಿಸಲು ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

'ಪಿಎಂ ಕೇರ್‌ ಫಂಡ್‌ಗೆ ಚೀನಾ ಕಂಪನಿಯಿಂದ ಕೋಟಿ ಕೋಟಿ ಹಣ'.

Tap to resize

Latest Videos

ಪಿಎಂ ಕೇರ್ಸ್ ಫಂಡ್‌ಗೆ ಬಂದಿರುವ ಹಣವನ್ನು ಸದ್ಯ ಎದುರಿಸುತ್ತಿರುವ ಪ್ರವಾಹ, ಭೂಕುಸಿತ ಸೇರಿದಂತೆ ರಾಷ್ಟ್ರೀಯ ವಿಪತ್ತುಗೆ ಬಳಸಿಕೊಲ್ಳಲು ಕೋರ್ಟ್ ಅನುಮತಿ ನೀಡಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು.  ಹಿರಿಯ ವಕೀಲ ದುಶ್ಯಂತ್ ಡೇವ್ ಮತ್ತು ವಕೀಲ ಪ್ರಶಾಂತ್ ಭೂಷಣ್ ಅವರು ಪ್ರತಿನಿಧಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ  ಅರ್ಜಿಯನ್ನು  ನ್ಯಾಯಾಲಯವು ಆಲಿಸಿ ತೀರ್ಪು ನೀಡಿದೆ.

ಕೂಡಿಟ್ಟ ಹಣ, ಪಿಎಂ ಕೇರ್ಸ್ ಫಂಡ್‌ಗೆ ದಾನ ಮಾಡಿದ ಹುತಾತ್ಮ ಯೋಧನ ಪತ್ನಿ!.

ಪಿಎಂ ಕೇರ್ಸ್ ಫಂಡ್ ನಿಧಿಯನ್ನು NRDRF ವರ್ಗಾಯಿಸು ಕೇಂದ್ರ ಸರ್ಕಾರ ಮುಕ್ತವಾಗಿದೆ ಎಂದು ನ್ಯಾಯಮೂರ್ತಿಗಳಾದ ಅಶೋಕ್ ಬೂಷಣ್, ಆರ್. ಸುಭಾಷ್ ರೆಡ್ಡಿ ಹಾಗೂ ಎಂ.ಆರ್.ಎನ್ ಶಾ ಆದೇಶಿಸಿದ್ದಾರೆ. 

ತುರ್ತು ಪರಿಸ್ಥಿತಿ ಎದುರಿಸಲು ಪಿಎಂ ಕೇರ್ಸ್ ರೀತಿಯ ನಿಧಿ ಸ್ಥಾಪಿಸಲಾಗಿದೆ. ಇದಕ್ಕೆ ಪ್ರಧಾನ ಮಂತ್ರಿಗಳು ಅಧ್ಯಕ್ಷರಾಗಿರುತ್ತಾರೆ. ಇಷ್ಟೇ ಅಲ್ಲ ಹಿರಿಯ ಕ್ಯಾಬಿನೆಟ್ ಸದಸ್ಯರು ಈ ನಿಧಿಯ ಟಸ್ಟಿಗಳಾಗಿರುತ್ತಾರೆ. 

click me!