18ನೇ ವಯಸ್ಸಿಗೆ ಸೈನಿಕನಾದ, 24ನೇ ವಯಸ್ಸಿಗೆ ದೇಶಕ್ಕಾಗಿ ಪ್ರಾಣ ಅರ್ಪಿಸಿದ ಯೋಧ!

By Suvarna NewsFirst Published Aug 18, 2020, 5:02 PM IST
Highlights

ಜಮ್ಮು- ಕಾಶ್ಮೀರದ ಬಾರಾಮುಲ್ಲಾದಲ್ಲಿ ಸೋಮವಾರ ಉಗ್ರರ ದಾಳಿ| ಇಬ್ಬರು ಸಿಆರ್‌ಪಿಎಫ್‌ ಯೋಧರು ಹಾಗೂ ಓರ್ವ ಪೊಲೀಸ್‌ ಸಿಬ್ಬಂದಿ ಹುತಾತ್ಮ| ದಾಳಿಯಲ್ಲಿ ಯೋಧ ಪ್ರಶಾಂತ್ ಠಾಕೂರ್ ಹುತಾತ್ಮ

ಶ್ರೀನಗರ(ಆ.18): ಜಮ್ಮು- ಕಾಶ್ಮೀರದ ಬಾರಾಮುಲ್ಲಾದಲ್ಲಿ ಉಗ್ರರು ಸೋಮವಾರ ದಾಳಿ ನಡೆಸಿದ್ದು, ಇಬ್ಬರು ಸಿಆರ್‌ಪಿಎಫ್‌ ಯೋಧರು ಹಾಗೂ ಓರ್ವ ಪೊಲೀಸ್‌ ಸಿಬ್ಬಂದಿ ಹುತಾತ್ಮರಾಗಿದ್ದಾರೆ.  ಈ ವೇಳೆ ಭದ್ರತಾ ಪಡೆಗಳೂ ಪ್ರತಿದಾಳಿ ನಡೆಸಿದ ಪರಿಣಾಮ ಇಬ್ಬರು ಉಗ್ರರು ಎನ್‌ಕೌಂಟರ್‌ನಲ್ಲಿ ಹತನಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

8 ತಿಂಗಳ ಹಿಂದೆ ಕಣ್ಮರೆ ಆಗಿದ್ದ ಯೋಧನ ಮೃತದೇಹ ಪತ್ತೆ!

ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಕ್ರೀರಿ ಪ್ರದೇಶದಲ್ಲಿ ಸಿಆರ್‌ಪಿಎಫ್‌ ಪಡೆಯ ಮೇಲೆ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸುತ್ತಿದ್ದಂತೆಯೇ, ಭದ್ರತಾ ಪಡೆಗಳು ಸ್ಥಳವನ್ನು ಸುತ್ತುವರಿದು ಉಗ್ರರನ್ನು ಸದೆಬಡಿಯಲು ಕಾರಾರ‍ಯಚರಣೆ ಆರಂಭಿಸಿದವು. ಈ ವೇಳೆ ಇಬ್ಬರು ಉಗ್ರರನ್ನು ಕೊಲ್ಲಲಾಯಿತು. ಈ ಕೃತ್ಯದ ಹಿಂದೆ ಲಷ್ಕರ್‌ ಎ ತೊಯ್ಬಾ ಸಂಘಟನೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

18ನೇ ವಯಸ್ಸಿಗೆ ಸೈನಿಕನಾದ, 24ನೇ ವಯಸ್ಸಿಗೆ ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ!

ಇನ್ನು ಉಗ್ರರ ಈ ದಾಳಿಯಲ್ಲಿ ನಾಹನ್ ಕಸ್ಬಾದ ನಿವಾಸಿ 24 ವರ್ಷದ ಯೋಧನೂ ಹುತಾತ್ಮನಾಗಿದ್ದಾನೆ. ವೀರ ಯೋಧ ಪ್ರಶಾಂತ್ ಠಾಕೂರ್ ಇಲ್ಲಿನ ಧಾರಟೀಧಾರ್‌ ನಿವಾಸಿ ಪ್ರಶಾಂತ್ 18 ನೇ ವಯಸ್ಸಿಗೆ, ಅಂದರೆ 2014 ರ ಸಪ್ಟೆಂಬರ್ 23ರಂದು ಭಾರತೀಯ ಸೇನೆಗೆ ಸೇರಿದ್ದರು, ಹಾಗೂ 29 ನೇ ಆರ್‌ಆರ್‌ನಲ್ಲಿ ನೇಮಕಗೊಂಡಿದ್ದರು. ಆದರೀಗ ಉಗ್ರರ ದಾಳಿಯಲ್ಲಿ  24ನೇ ವಯಸ್ಸಿಗೆ ದೇಶಕ್ಕಾಗಿ ತಮ್ಮ ಜೀವ ಬಲಿದಾನಗೈದಿದ್ದಾರೆ.

ಜಮ್ಮ ಮತ್ತು ಕಾಶ್ಮೀರದಲ್ಲಿ 4Gನಿಷೇಧ ವಾಪಸ್; ಮಹತ್ವದ ನಿರ್ಧಾರ ಪ್ರಕಟಿಸಿದ ಕೇಂದ್ರ ಸರ್ಕಾರ!

ಮದುವೆಗೆ ಹೆಣ್ಣು ಹುಡುಕುತ್ತಿದ್ದರು

ಹುತಾತ್ಮ ಯೋಧನ ಮನೆಯಲ್ಲಿ ಅವರ ತಾಯಿ ರೇಖಾದೇವಿ ಹಾಗೂ ತಂದೆ ಸುರ್ಜನ್ ಸಿಂಗ್ ಹಾಗೂ ಓರ್ವ ಸಹೋದರ ಇದ್ದಾರೆ. ಇನ್ನು ಪ್ರಶಾಂತ್ ಮದುವೆಗೆ ಕುಟುಂಬದ ಹಿರಿಯರು ಹೆಣ್ಣಿನ ಹುಡುಕಾಟ ನಡೆಸುತ್ತಿದ್ದರೆನ್ನಲಾಗಿದೆ. 

ಇನ್ನು ಹುತಾತ್ಮ ಪ್ರಶಾಂತ್‌ ಆರಂಭದಿಂದಲೂ ಭಾರತೀಯ ಸೇನೆಗೆ ಸೇರ್ಪಡೆಯಾಗುವ ಕನಸು ಕಂಡಿದ್ದ. ಹೀಗಾಗಿ ಸೇನೆಎಎಗೆ ಆತನ ಆಯ್ಕೆಯಾದಾಗ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ್ದನಂತೆ. 

ಪ್ರಶಾಂತ್‌ನನ್ನು ಸುತ್ತುವರೆದಿದ್ದ ಉಗ್ರರು

ದಾಳಿ ವೇಳೆ ಉಗ್ರರು ಪ್ರಶಾಂತ್‌ನನ್ನು ಸುತ್ತುವರೆದಿದ್ದರೆನ್ನಲಾಗಿದೆ. ಹೀಗಿದ್ದರೂ ಹೆದರದ ಪ್ರಶಾಂತ್ ಧೈರ್ಯದಿಂದ ಅವರನ್ನು ಎದುರಿಸಿದ್ದರು. ಉಗ್ರರ ಮೇಲೆ ಗುಂಡಿನ ಮಳೆಗರೆದಿದ್ದರು. ಅತ್ತ ಉಗ್ರರೂ ಪ್ರಶಾಂತ್‌ನನ್ನು ಗುಂಡಿಕ್ಕಿ ಹತ್ಯೆಗೈದಿದ್ದರು. 

click me!