ಇಂಡಿಯಾ ಬದಲು ಭಾರತ ನಾಮಕರಣ ಮಾಡಿ; PIL ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ!

Suvarna News   | Asianet News
Published : Jun 02, 2020, 08:18 PM IST
ಇಂಡಿಯಾ ಬದಲು ಭಾರತ ನಾಮಕರಣ ಮಾಡಿ; PIL ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ!

ಸಾರಾಂಶ

ಸ್ವಾವಲಂಬಿ ಭಾರತ ನಿರ್ಮಾಣದ ಬಳಿಕ ದೇಶದಲ್ಲಿ ಹಲವು ಅಭಿಯಾನಗಳು ನಡೆಯುತ್ತಿದೆ. ವಿದೇಶಿ ವಸ್ತುಗಳ ಬಹಿಷ್ಕಾರ, ಆ್ಯಪ್ ಬಹಿಷ್ಕಾರ ಸೇರಿದಂತೆ ಹಲವು ಅಭಿಯಾನಗಳಿವೆ. ಇದರೊಂದಿಗೆ ಅಧೀಕೃತ ಹೆಸರನ್ನು ಇಂಡಿಯಾ ಬದಲು ಭಾರತ ಎಂದು ನಾಮಕರಣ ಮಾಡಿ ಅನ್ನೋ ಅಭಿಯಾನ ಆರಂಭಗೊಂಡಿದೆ. ಇಷ್ಟೇ ಅಲ್ಲ ಈ ಕುರಿತು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿದ್ದ  PIL ಅರ್ಜಿಯನ್ನು ಕೋರ್ಟ್ ಮುಂದೂಡಿದೆ.

ನವದೆಹಲಿ(ಜೂ.02): ಭಾರತ ಪುರಾತನ ಹೆಸರು. ಇದೀಗ ಎಲ್ಲಾ ಅಧೀಕೃತ ದಾಖಲೆಗಳಲ್ಲಿ ಇಂಡಿಯಾ ಬದಲು ಭಾರತ ಎಂದು ಮರುನಾಮಕರಣ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಈ ಕುರಿತು ಮುಖ್ಯನ್ಯಾಯಮೂರ್ತಿ ಎಸ್ ಎ ಬೊಡೆ ನೇತೃತ್ವದ ಪೀಠ PIL ಅರ್ಜಿಯನ್ನು ಮುಂದೂಡಿದೆ. 

ತವರಿಗೆ ಮರಳುವ ವಲಸೆ ಕಾರ್ಮಿಕರಿಗೆ ಪ್ರಯಾಣ ಶುಲ್ಕವಿಲ್ಲ..! ಸುಪ್ರೀಂ ಸಾಂತ್ವನ

ಯಾವುದೇ ದಿನಾಂಕ ನೀಡದೆ ವಿಚಾರಣೆ ಮುಂದೂಡಲಾಗಿದೆ. ನಮಹ ಅನ್ನೋ ವ್ಯಕ್ತಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸರ್ತಿ ಅರ್ಜಿ ಸಲ್ಲಿಸಿದ್ದರು. ಅರ್ಟಿಕಲ್ 21ರ ಮೂಲಭೂತ ಹಕ್ಕುಗಳ ಅಡಿಯಲ್ಲಿ ಪ್ರತಿಯೊಬ್ಬ ಭಾರತೀಯನಿಗೆ ತನ್ನ ದೇಶವನ್ನು ಭಾರತ ಎಂದು ಕರೆಯಲ ಅರ್ಹನಾಗಿದ್ದಾನೆ. ಇದಕ್ಕಾಗಿ ಇಂಡಿಯಾ ಬದಲು ಅದೀಕೃತವಾಗಿ ಭಾರತ ಎಂದು ಮಾಡಬೇಕಾಗಿ ಮನವಿ ಸಲ್ಲಿಸಿದ್ದರು.

2016ರಲ್ಲೂ ಇದೇ ರೀತಿ ಅರ್ಜಿ
2016ರಲ್ಲೂ ಇದೇ ರೀತಿ ಅರ್ಜಿ ಸಲ್ಲಿಸಿಕೆಯಾಗಿತ್ತು. ನ್ಯಾಯಮೂರ್ತಿ ಟಿಎಸ್ ಠಾಕೂರ್ ಹಾಗೂ ಲಲಿತ್ ನೇತೃತ್ವಗ ಪೀಠ್ ಅರ್ಜಿ ತರಿಸ್ಕರಿಸಿತ್ತು. ಇಷ್ಟೇ ಅಲ್ಲ ಸುಪ್ರೀಂ ಕೋರ್ಟ್‌ಗೆ ಭಾವನಾತ್ಮಕ ವಿಚಾರವನ್ನು ಕೈಗೆತ್ತಿಕೊಂಡು ವಿಚಾರಣೆ ನಡೆಸುವುದೊಂದೆ ಕೆಲಸ ಎಂದುಕೊಂಡಿದ್ದೀರಾ ಎಂದು ಖಾರವಾಗಿ ಪ್ರಶ್ನಿಸಿತ್ತು. 

ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ
ಸಾಮಾಜಿಕ ಜಾಲತಾಣದಲ್ಲಿ ಬೈಬೇ ಇಂಡಿಯಾ ಅಭಿಯಾನ ಜೋರಾಗಿದೆ. #ByebyeindiaonlyBharat ಅಭಿಯಾನ ನಡೆಯುತ್ತಿದೆ. ಇಂಡಿಯಾ ಹೆಸರು ಬೇಡ, ಭಾರತ್ ಹೆಸರು ಮರುನಾಮಕರಣ ಮಾಡಿ ಅನ್ನೋ ಕೂಗು ಕೇಳಿಬರುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Vande Mataram ಎರಡು ಪದಗಳ ಅರ್ಥ ವಿವರಿಸಿದ ಇಕ್ರಾ ಹಸನ್: ಸಂಸದೆಯ ಮಾತು ವೈರಲ್
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?