ಕೋರ್ಟ್‌ ಕಲಾಪ ಅಕ್ರಮ ವಿಡಿಯೋ ಪ್ರಸಾರ: ಕೇಜ್ರಿವಾಲ್‌ ಪತ್ನಿ ವಿರುದ್ಧ ದೂರು ದಾಖಲು!

By Kannadaprabha News  |  First Published Apr 6, 2024, 10:46 AM IST

ಅಕ್ರಮವಾಗಿ ಚಿತ್ರೀಕರಿಸಲಾಗಿದ್ದ ಕೋರ್ಟ್‌ ಕಲಾಪದ ಆಡಿಯೋ ಮತ್ತು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ ಎಂದು ಆರೋಪಿಸಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ರ ಪತ್ನಿ ಸುನಿತಾ ವಿರುದ್ಧ ದೆಹಲಿ ಹೈಕೋರ್ಟ್ ವಕೀಲ ವೈಭವ್ ಸಿಂಗ್ ದೂರು ದಾಖಲಿಸಿದ್ದಾರೆ. 
 


ನವದೆಹಲಿ (ಏ.06): ಅಕ್ರಮವಾಗಿ ಚಿತ್ರೀಕರಿಸಲಾಗಿದ್ದ ಕೋರ್ಟ್‌ ಕಲಾಪದ ಆಡಿಯೋ ಮತ್ತು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ ಎಂದು ಆರೋಪಿಸಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ರ ಪತ್ನಿ ಸುನಿತಾ ವಿರುದ್ಧ ದೆಹಲಿ ಹೈಕೋರ್ಟ್ ವಕೀಲ ವೈಭವ್ ಸಿಂಗ್ ದೂರು ದಾಖಲಿಸಿದ್ದಾರೆ. ಉದ್ದೇಶಪೂರ್ವಕವಾಗಿ ಮತ್ತು ಜನರ ಸಹಾನುಭೂತಿ ಪಡೆಯಲು ಕೇಜ್ರಿವಾಲ್‌ ಪತ್ನಿ ಈ ಕಲಾಪವನ್ನು ರೆಕಾರ್ಡ್‌ ಮಾಡಿದ್ದಾರೆಂದು ಸಿಂಗ್‌ ತಿಳಿಸಿದ್ದಾರೆ. ಮಾ.28 ರಂದು ಕೇಜ್ರಿವಾಲ್‌ ಅವರನ್ನು ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರು ಪಡಿಸಿ, ವಿಚಾರಣೆ ನಡೆಸುವ ವೇಳೆ ಕಲಾಪವನ್ನು ರೆಕಾರ್ಡ್ ಮಾಡಿದ್ದು, ಅದನ್ನು ಪ್ರಸಾರ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.

ಸುನಿತಾ ಸಂದೇಶ ಹಿಂದೆ ಭಗತ್, ಅಂಬೇಡ್ಕರ್ ಮಧ್ಯೆ ಕೇಜ್ರಿ ಫೋಟೋ: ಸಿಎಂ ಅರವಿಂದ್‌ ಕೇಜ್ರಿವಾಲ್‌ ಪತ್ನಿ ಪತ್ರಿಕಾಗೋಷ್ಠಿ ನಡೆಸುವ ಸಂದರ್ಭದಲ್ಲಿ ಈ ವರೆಗೆ ಗೋಡೆಯ ಮೇಲೆ ಭಗತ್ ಸಿಂಗ್‌ ,ಬಿ.ಆರ್. ಅಂಬೇಡ್ಕರ್ ಫೋಟೋ ಇರುತ್ತಿದ್ದವು. ಅದರ ಮಧ್ಯೆದಲ್ಲಿಯೇ ಈಗ ಜೈಲು ಕಂಬಿ ಹಿಂದಿನ ಕೇಜ್ರಿವಾಲ್‌ ಭಾವಚಿತ್ರನ್ನೂ ಗುರುವಾರ ನೇತು ಹಾಕಲಾಗಿದೆ. ಈ ಘಟನೆ ಸದ್ಯ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಆಪ್ ನಾಯಕರ ನಡೆಗೆ ಬಿಜೆಪಿ ಆಕ್ರೋಶ ವ್ಯಕ್ತ ಪಡಿಸಿದೆ. ‘ಮಹಾನ್ ನಾಯಕರ ಫೋಟೋ ಮಧ್ಯ ಕಡು ಭ್ರಷ್ಟನ ಭಾವಚಿತ್ರ ಹಾಕಿರುವುದು ವಿಷಾದನೀಯ’ ವೆಂದು ದೆಹಲಿ ಬಿಜೆಪಿ ಮುಖ್ಯಸ್ಥ ಸಚ್‌ದೇವ್ ಸಾಮಾಜಿಕ ಜಾಲತಾಣ ಖಾತೆ ಎಕ್ಸ್ ನಲ್ಲಿ ಟೀಕಿಸಿದ್ದಾರೆ

Tap to resize

Latest Videos

ಮುನಿರತ್ನ ತರ ನಾನು ಹೇಡಿಯೂ ಅಲ್ಲ, ಕೇಡಿಯೂ ಅಲ್ಲ: ಡಿ.ಕೆ.ಸುರೇಶ್ ವಾಗ್ದಾಳಿ

ಕೇಜ್ರಿವಾಲ್‌ ಸಿಂಹ ಇದ್ದಂತೆ: ಅಕ್ರಮ ಮದ್ಯ ನೀತಿ ಪ್ರಕರಣದಲ್ಲಿ ಇಡಿ ಬಂಧನದಲ್ಲಿರುವ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಬೆಂಬಲಿಸಿ ಇಂಡಿಯಾ ಮೈತ್ರಿಕೂಟದ ನಾಯಕರು ಭಾನುವಾರ ರಾಮಲೀಲಾ ಮೈದಾನದಲ್ಲಿ ಬೃಹತ್‌ ಲೋಕತಂತ್ರ ಬಚಾವೋ ಸಮಾವೇಶ ನಡೆಸಿದ್ದಾರೆ. ಇಂಡಿಯಾ ಮೈತ್ರಿಕೂಟದ ಪ್ರಮುಖ ನಾಯಕರೊಂದಿಗೆ ಇಡಿ ಬಂಧನಕ್ಕೆ ಒಳಗಾಗಿರುವ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರ ಪತ್ನಿ ಸುನಿತಾ, ಜಾರ್ಖಂಡ್‌ ಮಾಜಿ ಸಿಎಂ ಹೇಮಂತ್‌ ಸೊರೆನ್‌ ಪತ್ನಿ ಕಲ್ಪನಾ ಸೊರೆನ್‌ ಕೂಡ ಹಾಜರಿದ್ದು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. 

ಎನ್‌ಸಿಪಿ (ಶರದ್‌ಚಂದ್ರ ಪವಾರ್) ನಾಯಕ ಶರದ್ ಪವಾರ್, ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಮತ್ತು ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೆನ್ ಕೂಡ ಸಮಾವೇಶದಲ್ಲಿ ಹಾಜರಿದ್ದರು. ಈ ವೇಳೆ ಮಾತನಾಡಿದ ಸುನಿತಾ ಕೇಜ್ರಿವಾಲ್‌, ತಮ್ಮ ಪತಿ ಸಿಂಹ ಇದ್ದಂತೆ, ಜಾಸ್ತಿ ದಿನ ಅವರನ್ನು ಜೈಲಿನಲ್ಲಿ ಇರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. 

ಭಾರತದ ಚಿನ್ನ ಮೀಸಲೀಗ 812 ಟನ್: ಜನವರಿಯಲ್ಲಿ 8.7 ಟನ್‌ ಗೋಲ್ಡ್‌ ಖರೀದಿಸಿ ಇಟ್ಟ ಆರ್‌ಬಿಐ!

'ನಿಮ್ಮ ಪ್ರೀತಿಯ ಅರವಿಂದ್‌ ಕೇಜ್ರಿವಾಲ್‌ ನಿಮಗಾಗಿ ಜೈಲಿನಿಂದ ಸಂದೇಶ ಕಳಿಸಿದ್ದಾರೆ. ಅದನ್ನು ಓದುವ ಮುನ್ನ ನಾನು ನಿಮಗೆ ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ. ನಮ್ಮ ಪ್ರಧಾನಿ ನರೇಂದ್ರ ಮೋದಿ, ನನ್ನ ಪತಿಯನ್ನು ಜೈಲಿಗೆ ಕಳಿಸಿದ್ದಾರೆ. ಪ್ರಧಾನಿ ಮೋದಿ ಮಾಡಿದ್ದು ಸರಿ ಇದೆಯೇ? ನೀವು ಕೇಜ್ರಿವಾಲ್‌ ಅವರನ್ನು ಅಪ್ಪಟ ದೇಶಭಕ್ತ ಹಾಗೂ ಪ್ರಾಮಾಣಿಕ ವ್ಯಕ್ತಿ ಎಂದು ನಂಬುತ್ತೀರಾ? ಜೈಲಿನಲ್ಲಿರುವ ಕೇಜ್ರಿವಾಲ್‌, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಅವರು ರಾಜೀನಾಮೆ ನೀಡಬೇಕೇ? ನಿಮ್ಮ ಕೇಜ್ರಿವಾಲ್‌ ಸಿಂಹ ಇದ್ದಂತೆ, ಅವರು ಜಾಸ್ತಿ ದಿನ ಜೈಲಿನಲ್ಲಿ ಕೇಜ್ರಿವಾಲ್‌ರನ್ನು ಇಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

click me!