ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿನ ಹೀನಾಯ ಸೋಲು ಮತ್ತು ಲೋಕಸಭಾ ಚುನಾವಣೆಗೂ ಮುನ್ನ ಪಕ್ಷದ ನಾಯಕರ ಸರಣಿ ವಲಸೆಯಿಂದ ಕಂಗೆಟ್ಟಿರುವ ಭಾರತ್ ರಾಷ್ಟ್ರೀಯ ಸಮಿತಿ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರು ಇದೀಗ ತಮ್ಮ ಪಕ್ಷದ ಕಚೇರಿ ವಾಸ್ತು ಬದಲಾವಣೆಗೆ ಮುಂದಾಗಿದ್ದಾರೆ.
ಹೈದ್ರಾಬಾದ್ (ಏ.06): ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿನ ಹೀನಾಯ ಸೋಲು ಮತ್ತು ಲೋಕಸಭಾ ಚುನಾವಣೆಗೂ ಮುನ್ನ ಪಕ್ಷದ ನಾಯಕರ ಸರಣಿ ವಲಸೆಯಿಂದ ಕಂಗೆಟ್ಟಿರುವ ಭಾರತ್ ರಾಷ್ಟ್ರೀಯ ಸಮಿತಿ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರು ಇದೀಗ ತಮ್ಮ ಪಕ್ಷದ ಕಚೇರಿ ವಾಸ್ತು ಬದಲಾವಣೆಗೆ ಮುಂದಾಗಿದ್ದಾರೆ. ವಾಸ್ತುವನ್ನು ಬಹುವಾಗಿ ನಂಬುವ ರಾವ್, 2014 ಮತ್ತು 2017ರಲ್ಲೂ ಕಟ್ಟಡದಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದರು. ಅದರ ಮುಂದುವರೆದ ಭಾಗವಾಗಿ ಇದೀಗ ಕಟ್ಟಡದ ಮುಖ್ಯ ಪ್ರವೇಶ ಗೇಟ್ ಅನ್ನು ವಾಸ್ತು ಪ್ರಕಾರವಾಗಿ ಬದಲಾವಣೆ ಮಾಡಲಾಗುತ್ತಿದೆ.
ಮುಖ್ಯ ಗೇಟ್ ಅನ್ನು ವಾಯುವ್ಯ ದಿಕ್ಕಿನಲ್ಲಿ ಇಡಲಾಗುತ್ತಿದೆ. ಈಶಾನ್ಯ ಭಾಗದಲ್ಲಿ ಒಂದು ರ್‍ಯಾಂಪ್ ಕೂಡಾ ನಿರ್ಮಿಸಲಾಗುತ್ತಿದೆ. ಕಟ್ಟಡವು ಮೂರು ರಸ್ತೆಗಳು ಸೇರುವ ಜಾಗದಲ್ಲಿ ಬರುವ ಕಾರಣ ನಕಾರಾತ್ಮಕ ಶಕ್ತಿಗಳನ್ನು ದೂರಮಾಡಲು ಈ ಎಲ್ಲಾ ಬದಲಾವಣೆ ಮಾಡಲಾಗುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇನ್ನು ಸಿಎಂ ಕಚೇರಿ ಕೂಡಾ ವಾಸ್ತು ಪ್ರಕಾರ ಇಲ್ಲ ಎಂಬ ಕಾರಣಕ್ಕೇ, ತಾವು ಸಿಎಂ ಆಗಿದ್ದ 10 ವರ್ಷಗಳ ಅವಧಿಯಲ್ಲಿ ಕೇವಲ ಬೆರಳೆಣಿಕೆ ಬಾರಿಯಷ್ಟೇ ರಾವ್ ಆ ಕಟ್ಟಡಕ್ಕೆ ಭೇಟಿ ನೀಡಿದ್ದರು.
ತೆಲಂಗಾಣ ಕಾಂಗ್ರೆಸ್‌ಗೆ ಗ್ಯಾರಂಟಿ ಯೋಜನೆಗಳೇ ಬಲ: ಕಳೆದ ವರ್ಷದ ವಿಧಾನಸಭಾ ಚುನಾವಣೆಯ ಭರ್ಜರಿ ಗೆಲುವಿನ ಸಂಭ್ರಮದಲ್ಲಿರುವ ತೆಲಂಗಾಣ ಕಾಂಗ್ರೆಸ್, ತಾನು ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳು 2024ರ ಲೋಕಸಭಾ ಚುನಾವಣೆಯಲ್ಲೂ ತನ್ನ ಕೈಹಿಡಿಯಲಿದೆ ಎಂಬ ವಿಶ್ವಾಸದಲ್ಲಿದೆ. ಮೇಲ್ನೋಟಕ್ಕೆ ಇದು ಒಂದಷ್ಟು ನಿಜ ಎಂಬಂತೆ ಕಂಡುಬರುತ್ತಿರುವುದು ಹೌದು. ಅಷ್ಟರಮಟ್ಟಿಗೆ ಇತರೆ ಪಕ್ಷಗಳಿಗಿಂತ ರಾಜ್ಯದಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದೆ. ಇನ್ನೊಂದೆಡೆ ವರ್ಷದಿಂದ ವರ್ಷಕ್ಕೆ ತನ್ನ ಬಲ ಹೆಚ್ಚಿಸಿಕೊಳ್ಳುತ್ತಿರುವ ಬಿಜೆಪಿ, ಮೇ 13ರಂದು ಒಂದೇ ಹಂತದ ಚುನಾವಣೆಯಲ್ಲಿ ರಾಜ್ಯದ 17 ಲೋಕಸಭಾ ಕ್ಷೇತ್ರಗಳ ಪೈಕಿ 12 ಸ್ಥಾನ ಗೆಲ್ಲುವ ದೊಡ್ಡ ಗುರಿ ಹಾಕಿಕೊಂಡಿದೆ.
ಕಾಂಗ್ರೆಸ್, ಸಿಪಿಎಂ ವಿರೋಧವಿದ್ದರೂ ಕೇರಳ ಸ್ಟೋರಿ ಚಿತ್ರ ಪ್ರದರ್ಶನ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಶೆ.14ರಷ್ಟು ಮತ ಪಡೆದಿದ್ದು ಮಾತ್ರವಲ್ಲದೇ 8 ಸ್ಥಾನಗಳನ್ನು ಗೆದ್ದಿತ್ತು. ಇನ್ನೊಂದೆಡೆ ದಶಕದ ಕಾಲ ರಾಜ್ಯವನ್ನಾಳಿದ ಮಾಜಿ ಸಿಎಂ ಚಂದ್ರಶೇಖರ್ ರಾವ್ ಅವರ ಪಕ್ಷ ಸರಣಿಯಾಗಿ ಹಿನ್ನಡೆ ಅನುಭವಿಸುತ್ತಿದೆ. ವಿಧಾನಸಭಾ ಚುನಾವಣೆಯ ಆಘಾತಕಾರಿ ಸೋಲಿಂದ ಪಕ್ಷ ಇನ್ನೂ ಚೇತರಿಸಿಕೊಂಡಿಲ್ಲ. ಹಲವು ನಾಯಕರು ಇತ್ತೀಚೆಗೆ ಪಕ್ಷ ತೊರೆದಿದ್ದಾರೆ. ಟೆಲಿಫೋನ್ ಕದ್ಧಾಲಿಕೆ ಹಗರಣ ಮಾಜಿ ಸಿಎಂ ರಾವ್ ಅವರ ಪಕ್ಷವನ್ನು ಆವರಿಸಿಕೊಂಡಿದೆ. ದೆಹಲಿ ಲಿಕ್ಕರ್ ಹಗರಣದಲ್ಲಿ ರಾವ್ ಪುತ್ರಿ ಕವಿತಾ ಬಂಧನ, ಪಕ್ಷದ ಹುಮ್ಮಸ್ಸನ್ನು ಮತ್ತಷ್ಟು ಕುಗ್ಗಿಸಿದೆ.