ಶಾಹೀನ್ ಬಾಗ್‌ನಲ್ಲಿ ಆತ್ಮಾಹುತಿ ದಾಳಿಕೋರರಿಗೆ ತರಬೇತಿ: ಗಿರಿರಾಜ್ ಸಿಂಗ್!

By Suvarna NewsFirst Published Feb 6, 2020, 5:09 PM IST
Highlights

‘ಶಾಹೀನಬ್ ಬಾಗ್’ನಲ್ಲಿ ಆತ್ಮಾಹುತಿ ದಾಳಿಕೋರರಿಗೆ ತರಬೇತಿ’| ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಗಂಭೀರ ಆರೋಪ| ‘ಶಾಹೀನ್ ಬಾಗ್’ನಲ್ಲಿ ದೇಶದ ವಿರುದ್ಧ ದೊಡ್ಡ ಸಂಚು ರೂಪಿಸಲಾಗುತ್ತಿದೆ’| ಸಿಎಎ ವಿರುದ್ಧದ ಪ್ರತಿಭಟನೆಗಳನ್ನು ಖಿಲಾಫತ್ ಆಂದೋಲನಕ್ಕೆ ಹೋಲಿಸಿದ ಸಚಿವ|

ನವದೆಹಲಿ(ಫೆ.06): ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ ನೆಪದಲ್ಲಿ ಶಾಹೀನ್ ಬಾಗ್ ಆತ್ಮಾಹುತಿ ದಾಳಿಕೋರರನ್ನು ಹುಟ್ಟುಹಾಕುತ್ತಿದೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ. 

ಪ್ರತಿಭಟನೆಯನ್ನು ಶಾಹೀನ್ ಬಾಗ್ ಚಳವಳಿ ಎಂದು ಕರೆಯಬಾರದು, ಅಲ್ಲಿ ಆತ್ಮಾಹುತಿ ದಾಳಿಕೋರರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಗಿರಿರಾಜ್ ಸಿಂಗ್ ಟ್ವೀಟ್ ಮಾಡಿದ್ದಾರೆ.

Union Minister Giriraj Singh:Shaheen Bagh mein ek mahila ka bachcha thand mein mar jaata hain aur vo mahila kehti hain ki mera beta shaheed hua hain. Ye suicide bomb nahi hai to kya hai? Agar Bharat ko bachana hai to ye suicide bomb, Khilafat Andolan-2 se desh ko sajak karna hoga pic.twitter.com/Y2UuGG3ei2

— ANI (@ANI)

ಶಾಹೀನ್ ಬಾಗ್’ನಲ್ಲಿ ದೇಶದ ವಿರುದ್ಧ ದೊಡ್ಡ ಸಂಚನ್ನು ರೂಪಿಸಲಾಗುತ್ತಿದೆ. ಪ್ರತಿಭಟನೆ ನೆಪದಲ್ಲಿ ಆತ್ಮಾಹುತಿ ದಾಳಿಕೋರರನ್ನು ಸೃಷ್ಟಿಸಲಾಗುತ್ತಿದೆ ಎಂದು ಗಿರಿರಾಜ್ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ.

ಶಹೀನ್‌ ಬಾಗ್‌ ಪ್ರತಿಭಟನೆ ವೇಳೆ 4 ತಿಂಗಳ ಮಗು ಸಾವು!

ಸಿಎಎ ವಿರುದ್ಧದ ಪ್ರತಿಭಟನೆಗಳನ್ನು ಖಿಲಾಫತ್ ಆಂದೋಲನಕ್ಕೆ ಹೋಲಿಸಿರುವ ಗಿರಿರಾಜ್, ಎಳೆಯ ಮಕ್ಕಳ ಮನಸ್ಸಿನಲ್ಲಿ ದೇಶದ ಕುರಿತು ವಿಷ ತುಂಬುವ ಹುನ್ನಾರ ನಡೆದಿದೆ ಎಂದು ಹರಿಹಾಯ್ದಿದ್ದಾರೆ.

click me!