
ಪುದುಚೆರಿ(ಏ.25): ದೇಶದಲಿರುವ ಎಲ್ಲಾ ಸಮುದಾಯವನ್ನು ಒಟ್ಟು ಸೇರಿಸಿರುವ ಸಾಮಾನ್ಯ ಅಂಶವೆಂದರೆ ಅದು ಸಂಸ್ಕೃತಿ. ಹಾಗಾಗಿ ಭಾರತ ಒಂದು ಭೌಗೋಳಿಕ ಸಾಂಸ್ಕೃತಿಕ ದೇಶ. ಇಲ್ಲಿ ಎಲ್ಲಾ ಸಮಸ್ಯೆಗಳು ತನಾಗಿಯೇ ಪರಿಹಾರವಾಗುತ್ತವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಹೇಳಿದ್ದಾರೆ.
ಪುದುಚೆರಿಯಲ್ಲಿ ಆಯೋಜಿಸಿದ್ದ ಶ್ರೀ ಅರವಿಂದರ 150ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅರವಿಂದ ಅವರ ಕೊಡುಗೆಗಳು ಭಾರತವನ್ನು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಿದೆ ಎಂದು ಹೇಳಿದರು. ‘ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ದ್ವಾರಕದಿಂದ ಬಂಗಾಳದವರೆಗೆ ದೇಶವನ್ನು ಒಂದುಗೂಡಿಸಿರುವುದು ಸಂವಿಧಾನ, ಇಡೀ ದೇಶ ಅದರ ಆಧಾರದ ಮೇಲೆ ನಡೆಯುತ್ತಿದೆ. ಇದಲ್ಲದೇ ಭಾರತವನ್ನು ಒಂದುಗೂಡಿಸಿರುವುದು ಸಂಸ್ಕೃತಿ, ಒದು ದೇಶದ ಆತ್ಮ. ಅರಬಿಂದೋ ಅವರನ್ನು ಓದುತ್ತಾ ಹೋದಂತೆ ಇದು ಅರ್ಥವಾಗುತ್ತದೆ ಎಂದು ಅವರು ಹೇಳಿದರು.
ಇಂಗ್ಲೀಷ್‌ಗೆ ಹಿಂದಿ ಪರ್ಯಾಯ ಅಂತ ಸ್ವೀಕರಿಸಿ: ಅಮಿತ್ ಶಾ 'ಹಿಂದಿ' ಹೇಳಿಕೆಗೆ ಜೋಶಿ ಬೆಂಬಲ!
ಇಡೀ ಪ್ರಪಂಚದಲ್ಲಿ ಸಂಸ್ಕೃತಿಯಿಂದ ಒಟ್ಟಾಗಿರುವ ಏಕೈಕ ದೇಶವೆಂದರೆ ಅದು ಭಾರತ. ವೇದಗಳು ಮತ್ತು ಸಂಸ್ಕೃತಿ ದೇಶಕ್ಕೆ ಯಾವುದೇ ಗಡಿಗಳನ್ನು ನಿಗದಿಪಡಿಸಿಲ್ಲ. ನಾವು ಇಡೀ ವಿಶ್ವದ ಒಳಿತಿಗಾಗಿ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು. ಇದೇ ಸಮಯದಲ್ಲಿ ಶಾ ಅವರು ಮಹಾಕವಿ ಭಾರತೀಯ ಮೆಮೊರಿಯಲ್ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದರು.
ಅಮಿತ್ ಶಾ ಆಗಮಿಸುತ್ತಿದ್ದಂತೆ ಕೆಲ ಸಂಘಟನೆಗಳು ಹಿಂದಿ ಹೇರಿಕೆ ವಿರುದ್ಧ ಪ್ರತಿಭಟನೆ ನಡೆಸಿತು. ಕರ್ನಾಟಕದ ಹಲವೆಡೆ ಈಗಾಗಲೇ ಹಿಂದಿ ಹೇರಿಕೆ ವಿರುದ್ಧ ಪ್ರತಿಭಟನೆಗಳು ನಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ