ಲಸಿಕೆ ಪಡೆದವರು ಸಂಪೂರ್ಣ ಸೇಫ್; ಆಸ್ಪತ್ರೆ ದಾಖಲಾಗುವ ಸಾಧ್ಯತೆ ಶೇ.0.06; ಅಧ್ಯಯನ ವರದಿ!

By Suvarna News  |  First Published May 16, 2021, 9:53 PM IST
  • ಕೊರೋನಾ ಲಸಿಕೆ ಪಡೆವರು ಸಂಪೂರ್ಣ ಸೇಫ್
  • ಅಧ್ಯಯನ ವರದಿಯಿಂದ ಸುರಕ್ಷತಾ ರಿಪೋರ್ಟ್ ಬಹಿರಂಗ

ನವದೆಹಲಿ(ಮೇ.16): ಕೊರೋನಾ ವೈರಸ್ ನಿಯಂತ್ರಣಕ್ಕೆ ಲಸಿಕೆಯೊಂದೇ ಪ್ರಮುಖ ಮಾರ್ಗ. ಇದೀಗ ಕೊರೋನಾ ಲಸಿಕೆ ಎಷ್ಟು ಪರಿಣಾಮಕಾರಿ ಅನ್ನೋ ಹಲವು ವರದಿಗಳು ಈಗಾಗಲೇ ಬಹಿರಂಗವಾಗಿದೆ. ಆದರೆ ಇದೀಗ ಲಸಿಕೆ ಪಡೆದವರು ಕೊರೋನಾದಿಂದ ಆಸ್ಪತ್ರೆ ದಾಖಲಾಗುವ ಸಾಧ್ಯತೆ ಶೇಕಡಾ 0.06 ಮಾತ್ರ. ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆ ನಡೆಸಿದ ಅಧ್ಯಯನ ವರದಿಯಲ್ಲಿ ಈ ವಿಚಾರ ಧೃಢಪಟ್ಟಿದೆ.

ರೂಪಾಂತರಿ ವೈರಸ್ ಆತಂಕ ಬೇಡ; 2 ಕೊರೋನಾ ಲಸಿಕೆ ಪರಿಣಾಮಕಾರಿ ಎಂದ ಅಧ್ಯಯನ ವರದಿ

Latest Videos

undefined

ಲಸಿಕೆ ಪಡೆದವರಿಗೆ ಮತ್ತೆ ಕೊರೋನಾ ಭಾದಿಸುವ ಹಾಗೂ ಸಂಕಷ್ಟಕ್ಕೀಡು ಮಾಡುವ ಸಾಧ್ಯತೆಗಳು  ತೀರಾ ಕಡಿಮೆ. ಅಧ್ಯಯನ ವರದಿ ಪ್ರಕಾರ, ಶೇಕಡಾ 97.38 ಮಂದಿಗೆ ಕೊರೋನಾ ಭಾದಿಸುವುದಿಲ್ಲ. ಒಂದು ವೇಳೆ ಕೊರೋನಾ ಅಂಟಿಕೊಂಡರೂ ಸಮಸ್ಯೆ ಇಲ್ಲವೇ ಇಲ್ಲ. ಕಾರಣ ಆಸ್ಪತ್ರೆ ದಾಖಲಾಗುವ ಸಾಧ್ಯತೆ ಶೇ.0.06% ಮಾತ್ರ.

ಇದಕ್ಕಾಗಿ ಕೋವಿಶೀಲ್ಡ್ ಲಸಿಕೆ ಹಾಕಿದವರಲ್ಲಿ ಮೊದಲ 100 ದಿನಗಳಲ್ಲಿ ರೋಗ ಲಕ್ಷಣದ ವರದಿ ದಾಖಲಾಗಿಲ್ಲ. ಆರಂಭಿಕ ಹಂತದಲ್ಲಿ ಆರೋಗ್ಯ ಕಾರ್ಯಕರ್ತರ ಮೇಲೆ ವ್ಯಾಕ್ಸಿನ್ ಹಾಕಲಾಗಿತ್ತು. ಇವರ ಮೇಲೆ ಅಧ್ಯಯನ ನಡೆಸಲಾಗಿದೆ. ಈ ವರದಿಯಲ್ಲಿ ಕೋವಿಶೀಲ್ಡ್ ಲಸಿಕೆ ಹಾಕಿದ ಆರೋಗ್ಯ ಕಾರ್ಯಕರ್ತರಿಗೆ ಮತ್ತೆ ಕೊರೋನಾ ಬಾಧಿಸಿಲ್ಲ. ಕೇವಲ ಶೇ.0.06%  ಮಂದಿ ಮೈಲ್ಡ್ ಸಿಂಪ್ಟಮ್ಸ್ ಮೂಲಕ ಮನೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. 

 ದೆಹಲಿಯ ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆಗೆ ರೋಗಲಕ್ಷಣದ ಕೋವಿಡ್ -19 ನೊಂದಿಗೆ ವರದಿ ಮಾಡಿದ ಆರೋಗ್ಯ ಕಾರ್ಯಕರ್ತರ ಮೇಲೆ ಈ ಅಧ್ಯಯನವನ್ನು ನಡೆಸಲಾಯಿತು.  

ಈ ಅಧ್ಯಯನ ವರದಿ ಇದೀಗ ಭಾರತೀಯರ ಆತ್ಮವಿಶ್ವಾಸ ಹೆಚ್ಚಿಸಿದೆ. ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತ ಶೀಘ್ರದಲ್ಲೇ ಯಶಸ್ಸು ಸಾಧಿಸಲಿದೆ ಅನ್ನೋ ಮುನ್ಸೂಚನೆ ನೀಡಿದೆ.

ಕೋವಿಡ್ -19 ವ್ಯಾಕ್ಸಿನೇಷನ್ 100 ಪ್ರತಿಶತದಷ್ಟು ರೋಗನಿರೋಧಕ ಶಕ್ತಿಯನ್ನು ಒದಗಿಸುವುದಿಲ್ಲ ಎಂದು ಅಧ್ಯಯನಗಳು ಸೂಚಿಸಿವೆ. ಆದರೆ ಲಸಿಕೆಯಿಂದ ಮತ್ತೆ ಕೊರೋನಾ ಬಾಧಿಸುವ ಇಲ್ಲ ಶೇಕಡಾ 97.38 ರಷ್ಟು ಇಲ್ಲ. ವ್ಯಾಕ್ಸಿನೇಷನ್‌ನಿಂದ ತೀವ್ರ ಕಾಯಿಲೆಗೆ ಗುರಿಯಾಗುವುದಿಲ್ಲ. . ಐಸಿಯು ಪ್ರವೇಶ ಅಥವಾ ಸಾವು ಇಲ್ಲವೇ ಇಲ್ಲ.  ನಮ್ಮ ಅಧ್ಯಯನವು ವ್ಯಾಕ್ಸಿನೇಷನ್ ಅಭಿಯಾನಕ್ಕೆ ಮತ್ತಷ್ಟು ಪುಷ್ಠಿ ನೀಡಲಿದೆ ಎಂದು ಪೀಡಿಯಾಟ್ರಿಕ್ ಗ್ಯಾಸ್ಟ್ರೋಎಂಟರಾಲಜಿಯ ಹಿರಿಯ ಸಲಹೆಗಾರ ಡಾ. ಸಿಬಲ್ ಹೇಳಿದ್ದಾರೆ.

click me!