ಮುಂಬೈ(ಮೇ.16): ಕೊರೋನಾ ವೈರಸ್ ಮಹಾಮಾರಿ ನಡುವೆ ಇದೀಗ ತೌಕ್ಟೆ ಚಂಡಮಾರುತ ಆತಂಕ ಭಾರತದ ಕರಾವಳಿ ಭಾಗದಲ್ಲಿ ಅವಂತಾರ ಸೃಷ್ಟಿಸಿದೆ. ಕೇರಳ, ಕರ್ನಾಟಕದಲ್ಲಿ ಈಗಾಗಲೇ ತೌಕ್ಟೆ ಚಂಡಮಾರುತ ಅನಾಹುತ ಸೃಷ್ಟಿಸಿದೆ. ನಾಳೆ(ಮೇ.17) ಮುಂಬೈಗೆ ತೌಕ್ಟೆ ಚಂಡಮಾರುತ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಹೀಗಾಗಿ ಮುಂಬೈನಲ್ಲಿ ನಾಳೆ ಲಸಿಕೆ ಅಭಿಯಾನಕ್ಕೆ ಬ್ರೇಕ್ ಹಾಕಲಾಗಿದೆ.
ಭಾರೀ ಮಳೆ ಸೂಚನೆ ಕೊಟ್ಟ ಹವಾಮಾನ ಇಲಾಖೆ, ಈ ಜಿಲ್ಲೆಗಳಲ್ಲಿ ಅಲರ್ಟ್
ಈ ಕುರಿತು ಮುಂಬೈ ಮಹಾನರಗರಿ ಪಾಲಿಕೆ ಸ್ಪಷ್ಟಪಡಿಸಿದೆ. ತೌಕ್ಟೆ ಚಂಡ ಮಾರುತದಿಂದ ದಕ್ಷಿಣ ಭಾರತದಲ್ಲಿ ಹಲವು ನಷ್ಟ ಸಂಭವಿಸಿದೆ. ಸೋಮವಾರ ಮುಂಬೈಗೆ ಅಪ್ಪಳಿಸಲಿರುವ ಕಾರಣ ಮುನ್ನಚ್ಚೆರಿಕಾ ಕ್ರಮವಾಗಿ ಲಸಿಕೆ ಅಭಿಯಾನವನ್ನು ಒಂದು ದಿನ ಸ್ಥಗಿತಗೊಳಿಸುತ್ತಿದ್ದೇವೆ ಎಂದಿದೆ. ಮಂಗಳವಾರ, ಬುಧವಾರ ಹಾಗೂ ಗುರವಾರ ಎಂದಿನಂತೆ ಲಸಿಕೆ ನೀಡಲಾಗುವುದು ಎಂದು ಪಾಲಿಕೆ ಹೇಳಿದೆ.
ಕೇರಳ, ಕರ್ನಾಟಕದ ಸೇರಿ ಹಲವೆಡೆ ತೌಕ್ಟೆ ತೀವ್ರ ಪರಿಣಾಮ: 100 ರಿಲೀಫ್ ತಂಡ ರೆಡಿ
ಮುಂಬೈನ ಸಮುದ್ರ ತೀರದಲ್ಲಿನ ಕೋವಿಡ್ ಕೇರ್ ಸೆಂಟರ್‌ನಲ್ಲಿದ್ದ 580ಕ್ಕೂ ಹೆಚ್ಚಿನ ಸೋಂಕಿತರನ್ನು ಮುನ್ನೆಚ್ಚೆರಿಕಾ ಕ್ರಮವಾಗಿ ಬೇರೆಡೆ ಸ್ಥಳಾಂತರಿಸಲಾಗಿದೆ. ಮೇ.17ರಂದು ಗುಜರಾತ್‌ನ ಪೋರಬಂದರ್‌ಗೆ ಚಂಡಮಾರುತ ಪ್ರಬಲವಾಗಿ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಇನ್ನು ಭವನಗರ ಜಿಲ್ಲೆಯ ಮಹುವಾ ಸಮುದ್ರ ತೀರಕ್ಕೆ ಮಾರ್ಚ್ 18 ರಂದು ಚಂಡ ಮಾರುತ ಅಪ್ಪಳಿಸಲಿದೆ.