
ನವದೆಹಲಿ(ಜೂ.07): ಕೊರೋನಾ ವೈರಸ್ ತಗುಲದಂತೆ ಎಚ್ಚರ ವಹಿಸಲು ಮಾಸ್ಕ್, ಸಾಮಾಜಿಕ ಅಂತರ ಅಗತ್ಯ. ಮಾಸ್ಕ್ ಧಾರಣೆ ಹಲವರಿಗೆ ಉಸಿರಾಟದ ಸಮಸ್ಯೆಯನ್ನು ತಂದೊಡ್ಡುತ್ತಿದೆ. ಇದೀಗ ಲವ್ಲಿ ಪ್ರೋಫೆಶನಲ್ ಯುನಿವರ್ಸಿಟಿ ವಿದ್ಯಾರ್ಥಿಗಳು ವಿಶೇಷ ಮಾಸ್ಕ್ ತಯಾರಿಸಿದ್ದಾರೆ. ಈ ಮಾಸ್ಕ್ ಧಾರಣೆ ಮಾಡಿದರೆ ಸರಾಗವಾಗಿ ಉಸಿರಾಟ ಮಾಡಬಹುದು. ನೂತನ ಮಾಸ್ಕ್‌ನಿಂದ ಉಸಿರಾಟದಲ್ಲಿ ಯಾವುದೇ ಸಮಸ್ಯೆ ಇಲ್ಲ. ಇಷ್ಟೇ ಅಲ್ಲ ನೈಸರ್ಗಿಕ ಮಾಸ್ಕ್ ಇದೀಗ ಎಲ್ಲರ ಗಮನಸೆಳೆದಿದೆ.
ಕೊರೋನಾ ವಿರುದ್ಧ ಹೋರಾಟ: ಮನೆಯಲ್ಲಿಯೇ ಮಾಸ್ಕ್ ತಯಾರಿಸಿ ಮಾದರಿಯಾದ ವಿದ್ಯಾರ್ಥಿನಿ
ನೂತನ ಮಾಸ್ಕ್‌ಗೆ ಆಕ್ಸಿಜೆನೋ ಎಂಬ ಹೆಸರಿಡಲಾಗಿದೆ. ಈ ಮಾಸ್ಕ್ ಕೊರೋನಾ ಮಾತ್ರವಲ್ಲ, ವಾಯು ಮಾಲಿನ್ಯದಿಂದಲೂ ಮುಕ್ತಿ ನೀಡಲಿದೆ. ಇದರಲ್ಲಿ ಕಾರ್ಬನ್ ಡೈ ಆಕ್ಸೈಡ್‌ನಿಂದ ಮುಕ್ತಿ ನೀಡುವ ಪಾಚಿಯನ್ನು ಬಳಸಲಾಗಿದೆ. ಇದರಿಂದ ಗಾಳಿಯಲ್ಲಿನ ಕೆಟ್ಟ ಬ್ಯಾಕ್ಟೀರಿಯಾ, ಕಾರ್ಬನ್ ಡೈ ಆಕ್ಸೈಡ್ ಸೇರಿದಂತೆ ಕೆಟ್ಟ ವಾಯವನ್ನು ಶೇಕಡಾ 99.3 ನಿರ್ನಾಮ ಮಾಡಲಿದೆ.
ಈ ಮದುಮಕ್ಕಳು ಧರಿಸಿದ್ದ ಮಾಸ್ಕ್‌ಗೆ ಸೋಶಿಯಲ್ ಮೀಡಿಯಾ ಫಿದಾ
ಆಕ್ಸಿಜೆನೋ ಮಾಸ್ಕ್ ಹಲವು ಲೇಯರ್ ಮೂಲಕ ಗಾಳಿಯನ್ನು ಸೋಸಲಿದೆ. 4 ಹಂತದ 10 ರಿಂದ 0.44 ಮೈಕ್ರೋಮೀಟರ್ ಲೇಯರ್ ಬಳಸಲಾಗಿದೆ. ಕಾರ್ಬನ್ ಫಿಲ್ಟರ್, Nox ಹಾಗೂ Sox ಫಿಲ್ಟರ್ ಬಳಸಲಾಗಿದೆ. ಈ ಮಾಸ್ಕನ್ನು ಪುನರ್ ಬಳಕೆ ಮಾಡಬಹುದಾಗಿದೆ. ಮಾಸ್ಕ್ ಒಳಗಿರುವ ಪಾಚಿಯುಕ್ತ ಕ್ಯಾಟ್ರಿಡ್ಜ್ ಬದಲಾಯಿಸಿ ಮತ್ತೆ ಬಳಸಬಹುದು.
ಈ ಕ್ಯಾಟ್ರಿಡ್ಜ್ ನಿರಂತರವಾಗಿ 40 ಗಂಟೆ ಅಥವಾ ಸಾಮಾನ್ಯವಾಗಿ ಬಳಸುತ್ತಿದ್ದರೆ 7 ದಿನ ಬಳಕೆ ಮಾಡಬುಹುದು. ಮಾಸ್ಕ ಬಳಕೆ ಮಾಡಿದ 48 ಗಂಟೆಗಳಲ್ಲಿ ಫಿಲ್ಟರ್ ಕೂಡ ಬದಲಾಯಿಸಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ