
ಇಟಾನಗರ್(ಜೂ.6): ಕೆಲ ದಿನಗಳ ಹಿಂದೆ ಸ್ಫೋಟಕ ತುಂಬಿದ್ದ ಹಣ್ಣು ತಿಂದು ಆನೆಯೊಂದು ಮೃತಪಟ್ಟಿತ್ತು, ಇದಾದ ಬಳಿಕ ಸ್ಪೋಟಕ ತಿಂದು ಗರ್ಭಿಣಿ ಹಸು ನರಳಾಡುತ್ತಿರುವ ದೃಶ್ಯ ಜನರನ್ನು ರೋಸಿ ಹೋಗುವಂತೆ ಮಾಡಿದೆ. ಮೂಕ ಪ್ರಾಣಿಗಳ ಮೇಲಿನ ದೌರ್ಜನ್ಯ ವಿರುದ್ಧ ಜನರು ಸಿಡಿದೆದ್ದಿದ್ದು, ದುರುಳರಿಗೆ ಸೂಕ್ತ ಶಿಕ್ಷೆ ವಿಧಿಸುವಂತೆ ಕೂಗೆದ್ದಿದೆ. ಹೀಗಿರುವಾಗಲೇ ಭಾರತೀಯ ಸೇನಾ ಯೋಧರು ಮೆರೆದ ಮಾನವೀಯತೆ ಜನರ ಈ ಕೋಪವನ್ನು ಕೊಂಚ ಶಮನಗೊಳಿಸಿದೆ. ಅರುಣಾಚಲ ಪ್ರದೇಶದಲ್ಲಿ ನದಿಯೊಂದರಲ್ಲಿ ನೀರಿನ ರಭಸಕ್ಕೆ ಸಿಲುಕಿ ಮುಳುಗುತ್ತಿದ್ದ ಗರ್ಭಿಣಿ ಜಿಂಕೆಯನ್ನು ಯೋಧರು ರಕ್ಷಿಸಿದ್ದಾರೆ.
ಹೌದು ಈ ಘಟನೆ ಜೂನ್ 2 ರಂದು ನಡೆದಿದೆ. easterncomd ಅಧಿಕೃತ ಖಾತೆಯಿಂದ ಈ ಮಾಹಿತಿ ಲಭ್ಯವಾಗಿದೆ. ಈ ಘಟನೆ ಸಂಬಂಧ ಟ್ವೀಟ್ ಮಾಡಲಾಗಿದ್ದು, 'ಭಾರತೀಯ ಸೇನೆಯ ಯೂನಿಟ್ ಒಂದು ಜೂನ್ 2 ರಂದು ಅರುಣಾಚಲ ಪ್ರದೇಶದ ಜಾಯ್ಡಿಂಗ್ ಖೋ ನದಿಯಲ್ಲಿ ಸಿಲುಕಿದ್ದ ಜಿಂಕೆಯನ್ನು ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಬಳಿಕ ಇದನ್ನು ಈಗಲ್ಸ್ ನೆಸ್ಟ್ ಅಭಯಾರಣ್ಯಕ್ಕೆ ಬಿಡಲಾಗಿದೆ' ಎಂದು ಬರೆದಿದ್ದಾರೆ.
ಇನ್ನು ಲಭ್ಯವಾದ ಮಾಹಿತಿ ಅನ್ವಯ ಸೈನಿಕರ ಈ ತಂಡ ಪೆಟ್ರೋಲಿಂಗ್‌ಗೆದು ತೆರಳಿತ್ತು. ಹೀಗಿರುವಾಗ ದಾರಿ ಮಧ್ಯೆ ಜಿಂಕೆಯನ್ನು ಕಂಡಿದ್ದು, ಕೂಡಲೇ ಅದನ್ನು ರಕ್ಷಿಸಲು ನದಿಗೆ ಹಾರಿದ್ದಾರೆ.
Barking Deer, ಅಪರೂಪದ ಪ್ರಜಾತಿಯ ಈ ಜಿಂಕೆಗಳು ಅಳಿವಿನಂಚಿನಲ್ಲಿವೆ. ಆಸುಪಾಸಿನಲ್ಲಿ ಬೇಟೆಗಾರರಿದ್ದರೆ ಇವುಗಳು ನಾಯಿಗಳು ಬೊಗಳುವಂತೆ ಧ್ವನಿ ತೆಗೆಯುವ ವಿಶೇಷತೆ ಇವಕ್ಕಿದೆ. ಇದೇ ಕಾರಣದಿಂದ ಇವುಗಳನ್ನು Barking Deer(ಬೊಗಳುವ ಜಿಂಕೆ) ಎನ್ನಲಾಗುತ್ತದೆ.
ಇನ್ನು ಈ ಜಿಂಕೆಯನ್ನು ಕಾಪಾಡಿದ ಸೇನಾ ಯೋಧರಿಗೆ ಸೋಶಿಯಲ್ ಮಿಡಿಯಾದಲ್ಲಿ ಎಲ್ಲರೂ ಸಲಾಂ ಎಂದಿದದ್ದಾರೆ. ದೇಶದ ರಕ್ಷಣೆ ಮಾತ್ರವಲ್ಲದೇ ಮೂಕ ಪ್ರಾಣಿಯ ಜೀವಕ್ಕೆ ಬೆಲೆ ಕೊಟ್ಟು ಅದನ್ನು ರಕ್ಷಿಸಿದ ಯೋಧರು ನೀವೂ ಸಲಾಂ ಎನ್ನಲು ಮರೆಯಬೇಡಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ