ಕೋಲ್ಕತಾ ಕಾಲೇಜಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್‌ : 3 ಬಂಧನ

Published : Jun 28, 2025, 05:22 AM IST
crime scene

ಸಾರಾಂಶ

ಕಳೆದ ವರ್ಷ ಕೋಲ್ಕತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಮೇಲಿನ ಭೀಕರ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಮಾಸುವ ಮುನ್ನವೇ, ಕೋಲ್ಕತಾದ ಕಾನೂನು ಕಾಲೇಜೊಂದರ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರದ ಘಟನೆ ನಡೆದಿದೆ.

ಕೋಲ್ಕತಾ: ಕಳೆದ ವರ್ಷ ಕೋಲ್ಕತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಮೇಲಿನ ಭೀಕರ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಮಾಸುವ ಮುನ್ನವೇ, ಕೋಲ್ಕತಾದ ಕಾನೂನು ಕಾಲೇಜೊಂದರ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರದ ಘಟನೆ ನಡೆದಿದೆ. ಜೂ.25ರ ಸಂಜೆ ನಡೆದ ಘಟನೆ ಸಂಬಂಧ ಅದೇ ಕಾಲೇಜಿನ ಇಬ್ಬರು ಹಿರಿಯ ವಿದ್ಯಾರ್ಥಿಗಳು ಮತ್ತು ಒಬ್ಬ ಹಳೆಯ ವಿದ್ಯಾರ್ಥಿಯನ್ನು ಬಂಧಿಸಲಾಗಿದ್ದು, ಮೂವರನ್ನೂ ನ್ಯಾಯಾಲಯ 4 ದಿನಗಳ ಕಾಲ ಪೊಲೀಸ್‌ ವಶಕ್ಕೆ ಒಪ್ಪಿಸಿದೆ.

ಜೂ.25ರಂದು ಮಧ್ಯಾಹ್ನ ಕಾಲೇಜಿಗೆ ತೆರಳಿದ್ದ ವಿದ್ಯಾರ್ಥಿನಿಯನ್ನು ಸಂಜೆಯವರೆಗೆ ಉಳಿಸುವಂತೆ ಮೂವರ ಗುಂಪು ಸೂಚಿಸಿದೆ. ಬಳಿಕ ಆಕೆಯನ್ನು ಕೊಠಡಿಯೊಂದಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದೆ. ಅಲ್ಲದೆ ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ವಿಷಯ ಯಾರಿಗಾದರೂ ತಿಳಿಸಿದರೆ ವಿಡಿಯೋ ಬಹಿರಂಗದ ಬೆದರಿಕೆ ಹಾಕಿದೆ.

ಆದರೂ ವಿದ್ಯಾರ್ಥಿನಿ ಧೈರ್ಯ ತೋರಿ ದೂರು ನೀಡಿದ್ದು ಈ ಹಿನ್ನೆಲೆಯಲ್ಲಿ ಆರೋಪಿಗಳಾದ ಮನೋಜಿತ್ ಮಿಶ್ರಾ (31), ಜೈಬ್ ಅಹಮದ್ (19), ಪ್ರಮಿತ್ ಮುಖೋಪಾಧ್ಯಾಯ ಅಲಿಯಾಸ್ ಪ್ರಮಿತ್ ಮುಖರ್ಜಿಯನ್ನು ಬಂಧಿಸಲಾಗಿದೆ.

ಈ ನಡುವೆ ಘಟನೆ ಕುರಿತು ಸಮಗ್ರ ವರದಿ ನೀಡುವಂತೆ ರಾಷ್ಟ್ರೀಯ ಮಹಿಳಾ ಆಯೋಗವು, ಕೋಲ್ಕತಾ ಪೊಲೀಸರಿಗೆ ಸೂಚಿಸಿದೆ.

ಸೊಸೆ ಹತ್ಯೆ ಪ್ರಕರಣದ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಸ್ಫೋಟಕ ಮಾಹಿತಿ

ಫರಿದಾಬಾದ್ (ಜೂ.27) ಸೊಸೆ ಹತ್ಯೆ ಪ್ರಕರಣದ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಸ್ಫೋಟಕ ಮಾಹಿತಿಗಳು ಹೊರಬರುತ್ತಿದೆ. ಹರ್ಯಾಣದ ಫರೀದಾಬಾದ್‌ನಲ್ಲಿ ಇತ್ತೀಚೆಗೆ ಬೆಳಕಿಗೆ ಬಂದ ಸೊಸೆಯ ಹತ್ಯೆ ಪ್ರಕರಣ ಕೇವಲ ಹತ್ಯೆಗೆ ಸೀಮಿತವಾಗಿಲ್ಲ. ಸೊಸೆ ನಾಪತ್ತೆಯಾಗಿದ್ದಾಳೆ, ಯಾರೊಂದಿಗೋ ಪರಾರಿಯಾಗಿದ್ದಾಳೆ ಎಂದು ಗಂಡನ ಮನೆಯರು ಪ್ರತಿ ದಿನ ಕತೆ ಕಟ್ಟಿದ್ದರು. ಆದರೆ ಅಸಲಿ ಕತೆ ಬೇರೆಯಾಗಿತ್ತು. ಹೀಗೆ ಹೇಳಿದ 2 ತಿಂಗಳಲ್ಲಿ ಸೊಸೆಯ ಮೃತದೇಹ ಗಂಡನ ಮನೆಯ ಪಕ್ಕದ 10 ಫೀಟ್ ಆಳದಲ್ಲಿ ಹೂತಿಟ್ಟಿದ್ದು ಬಯಲಾಗಿತ್ತು. ಇದೀಗ ಈ ಪ್ರಕರಣದಲ್ಲಿ ಮತ್ತೊಂದು ಸ್ಫೋಟಕ ಮಾಹಿತಿ ಬಯಲಾಗಿದೆ. ಸೊಸೆಯನ್ನು ಹತ್ಯೆ ಮಾಡಿ ಹೂಳುವ ಮೊದಲು ಆಕೆಯ ಮೇಲೆ ಸ್ವತಃ ಮಾವನೇ ಎರಗಿದ್ದ. ಈ ಎಲ್ಲಾ ಕೃತ್ಯಕ್ಕೆ ಅತ್ತೆ ಕೂಡ ಸಾಥ್ ನೀಡಿದ್ದಳು ಅನ್ನೋ ಮಾಹಿತಿಯೂ ತನಿಖೆಯಲ್ಲಿ ಬಯಲಾಗಿದೆ.

ಸತ್ಯ ಒಪ್ಪಿಕೊಂಡ ಮಾವ

ಈ ಪ್ರಕರಣ ಸಂಬಂಧ ಮಾವ, ಅತ್ತೆ ಅರೆಸ್ಟ್ ಆಗಿದ್ದರೆ, ಪತಿ ಅರುಣ್ ಸಿಂಗ್ ನಾಪತ್ತೆಯಾಗಿದ್ದಾನೆ. ವಿಚಾರಣೆಯಲ್ಲಿ ಮಾವ ತನ್ನ ಕೃತ್ಯವನ್ನು ಬಯಲು ಮಾಡಿದ್ದಾನೆ. ಮೊದಲೇ ನಿರ್ಧರಿಸಿದಂತೆ ಹತ್ಯೆ ಮಾಡಲಾಗಿತ್ತು ಎಂದಿದ್ದಾನೆ. ಇಷ್ಟೇ ಅಲ್ಲ ಹತ್ಯೆಗೂ ಮೊದಲು ಸೊಸೆಯ ಮೇಲರಗಿ ಕಾಮ ತೃಷೆ ತೀರಿಸಿಕೊಳ್ಳಲಾಗಿತ್ತು ಎಂದು ಒಪ್ಪಿಕೊಂಡಿದ್ದಾನೆ. ಈ ಎಲ್ಲಾ ಕೃತ್ಯಕ್ಕೆ ಅತ್ತೆ ಕೂಡ ಸಾಥ್ ನೀಡಿದ್ದಳು ಅನ್ನೋದು ಮತ್ತೊಂದು ದುರಂತ. ಬಳಿಕ ಸೊಸೆ ಹತ್ಯೆ ಮಾಡಿ ಮನೆಯ ಪಕ್ಕದಲ್ಲೇ 10 ಅಡಿ ಗುಂಡಿ ತೋಡಿ ಮೃತೇದಹವನ್ನು ಹೂತಿಡಲಾಗಿತ್ತು.

ಏಪ್ರಿಲ್ 15ಕ್ಕೆ ಪ್ಲಾನ್ ಮಾಡಿದ್ದ ಅಪ್ಪ ಮಗ

ಎರಡು ವರ್ಷಗಳ ಹಿಂದೆ ಅರುಣ್ ಸಿಂಗ್ ಮದುವೆಯಾಗಿ ಫರೀದಾಬಾದ್‌ಗೆ ಬಂದಿದ್ದ ಈ ಈಕೆ ಇದೀಗ ದುರಂತ ಅಂತ್ಯಕಂಡಿದ್ದಾಳೆ. ಪತ್ನಿಯನ್ನು ಹತ್ಯೆ ಮಾಡಲು ಗಂಡ ಹಾಗೂ ತಂದೆ ಇಬ್ಬರು ಪ್ಲಾನ್ ಮಾಡಿದ್ದಾರೆ. ಏಪ್ರಿಲ್ 15ಕ್ಕೆ ದಿನಾಂಕ ಫಿಕ್ಸ್ ಮಾಡಲಾಗಿತ್ತು. ಆದರೆ ಅಂದು ಸಾಧ್ಯವಾಗಲಿಲ್ಲ. ಏಪ್ರಿಲ್ 21ಕ್ಕೆ ಪತ್ನಿಗೆ ನಿದ್ದೆ ಮಾತ್ರೆಯನ್ನು ಆಹಾರದಲ್ಲಿ ಮಿಶ್ರಣ ಮಾಡಿ ನೀಡಲಾಗಿತ್ತು. ಆಕೆ ನಿದ್ದೆಗೆ ಜಾರುತ್ತಿದ್ದಂತೆ ಬೇರೆ ರೂಂನಲ್ಲಿ ಮಲಗಿಸಲಾಗಿತ್ತು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಲಕ್ನೋ: ಪ್ರಧಾನಿ ಮೋದಿ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಹೂಕುಂಡಗಳ ಲೂಟಿ; ವಿಡಿಯೋ ವೈರಲ್
ಆಪರೇಷನ್ ಸಿಂದೂರ್ ವೇಳೆ ಯೋಧರಿಗೆ ನೆರವಾದ ಬಾಲಕನಿಗೆ ಪ್ರಧಾನ ಮಂತ್ರಿ ಬಾಲ ಪುರಸ್ಕಾರ 2026