ಹಾರ್ಮುಜ್ ಜಲಸಂಧಿ ದಾಟದ ತೈಲ ಹಡಗು: ಭಾರತ ಸೇರಿದಂತೆ ಜಗತ್ತಿಗೆ ಕಾದಿದೆಯೇ ಪೆಟ್ರೋಲ್, ಗ್ಯಾಸ್ ಸಂಕಷ್ಟ?

Published : Mar 02, 2026, 11:17 PM IST
Strait of Hormuz

ಸಾರಾಂಶ

ವಿಶ್ವದ ಶೇ. 20-30ರಷ್ಟು ತೈಲ ಸಾಗಿಸುವ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ಸುಳಿವನ್ನು ಇರಾನ್ ನೀಡಿದೆ. ಈ ಕಿರಿದಾದ ಸಮುದ್ರ ಮಾರ್ಗ ಬಂದ್ ಆದರೆ, ಕಚ್ಚಾ ತೈಲ ಬೆಲೆಗಳು ಗಗನಕ್ಕೇರಿ ಜಾಗತಿಕ ಆರ್ಥಿಕತೆ ತೀವ್ರ ಸಂಕಷ್ಟಕ್ಕೆ ಸಿಲುಕಲಿದೆ. 

ಬೆಂಗಳೂರು (ಮಾ.2): ಇರಾನ್‌ ಮೇಲೆ ಇಸ್ರೇಲ್‌-ಅಮೆರಿಕ ಜಂಟಿ ಯುದ್ಧ ಘೋಷಣೆ ಆದ ದಿನದಿಂದಲೂ ಹಾರ್ಮುಜ್ ಜಲಸಂಧಿ ಬಗ್ಗೆ ವ್ಯಾಪಕವಾಗಿ ಚರ್ಚೆ ಆಗುತ್ತಿದೆ. ಏನಿದು ಹಾರ್ಮುಜ್‌ ಜಲಸಂಧಿ, ಇದು ಇರೋದೆಲ್ಲಿ? ಈ ಜಲಸಂಧಿಗೆ ಯಾಕಿಷ್ಟು ಅಂತಾರಾಷ್ಟ್ರೀಯ ಪ್ರಾಮುಖ್ಯತೆ? ಹಾರ್ಮುಜ್‌ ಜಲಸಂಧಿ ಇಲ್ಲದೆ ವಿಶ್ವ ಮುಂದುವರಿಯಲು ಸಾಧ್ಯವಿಲ್ಲವೇ ಅನ್ನೋ ಪ್ರಶ್ನೆಗಳು ಏಳೋದು ಸಹಜ. ಆದರೆ, ವಿಶ್ವದ ಒಟ್ಟು ತೈಲ ಮತ್ತು ಅನಿಲ ಪೂರೈಕೆಯ ಶೇ. 20 ರಿಂದ 30 ರಷ್ಟು ಭಾಗ 'ಹಾರ್ಮುಜ್ ಜಲಸಂಧಿ'ಯ ಮೂಲಕವೇ ಸಾಗುತ್ತದೆ. ಈಗ ಇರಾನ್ ಈ ಮಾರ್ಗವನ್ನು ಮುಚ್ಚುವ ಅನಧಿಕೃತ ಸುಳಿವು ನೀಡಿರುವುದು ಜಾಗತಿಕ ಆರ್ಥಿಕತೆಯಲ್ಲಿ ನಡುಕ ಹುಟ್ಟಿಸಿದೆ.

ವಿಶ್ವದ ಅತ್ಯಂತ ಪ್ರಮುಖ ತೈಲ ಮಾರ್ಗ

ಇದು ಒಂದು ಬದಿಯಲ್ಲಿ ಓಮನ್ ಮತ್ತು ಯುಎಇ (UAE), ಇನ್ನೊಂದು ಬದಿಯಲ್ಲಿ ಇರಾನ್ ನಡುವೆ ಇರುವ ಕಿರಿದಾದ ಸಮುದ್ರ ಮಾರ್ಗವೇ ಹಾರ್ಮುಜ್ ಜಲಸಂಧಿ .ಇದರ ಅತ್ಯಂತ ಕಿರಿದಾದ ಭಾಗ ಕೇವಲ 33 ಕಿ.ಮೀ ಅಗಲವಿದ್ದು, ಹಡಗುಗಳು ಚಲಿಸುವ ಹಾದಿ ಕೇವಲ 3 ಕಿ.ಮೀ ಮಾತ್ರ ಇದೆ. ಈ ಕಾರಣಕ್ಕಾಗಿಯೇ ಇಲ್ಲಿ ಹಡಗುಗಳ ಮೇಲೆ ದಾಳಿ ಮಾಡುವುದು ಅತ್ಯಂತ ಸುಲಭ. ಮಧ್ಯಪ್ರಾಚ್ಯದ ಪ್ರಮುಖ ತೈಲ ರಫ್ತುದಾರ ದೇಶಗಳಾದ ಇರಾಕ್, ಕುವೈತ್, ಕತಾರ್, ಸೌದಿ ಅರೇಬಿಯಾ ಮತ್ತು ಯುಎಇ ಈ ಮಾರ್ಗದ ಮೇಲೆಯೇ ಅವಲಂಬಿತವಾಗಿವೆ.

ಜಗತ್ತಿನ ಮೇಲೆ ಇದರ ಪ್ರಭಾವ ಎಷ್ಟು?

2024ರ ಅಂಕಿಅಂಶದಂತೆ, ಪ್ರತಿದಿನ ಸುಮಾರು 2 ಕೋಟಿ ಬ್ಯಾರೆಲ್ ತೈಲ ಈ ಮಾರ್ಗದ ಮೂಲಕ ಸಾಗುತ್ತದೆ. ವಿಶ್ವದ ಒಟ್ಟು ಎಲ್‌ಎನ್‌ಜಿ ಪೂರೈಕೆಯ ಶೇ. 20ರಷ್ಟು ಭಾಗ ಇಲ್ಲಿಂದಲೇ ಸಾಗುತ್ತದೆ. ಇದರಲ್ಲಿ ಕತಾರ್ ದೇಶದ್ದೇ ಸಿಂಹಪಾಲು ಇದೆ. ಇಲ್ಲಿಂದ ರಫ್ತಾಗುವ ಶೇ. 84ರಷ್ಟು ತೈಲ ಏಷ್ಯಾದ ಮಾರುಕಟ್ಟೆಗಳಿಗೆ ಹೋಗುತ್ತದೆ. ಅದರಲ್ಲೂ ಭಾರತ, ಚೀನಾ, ಜಪಾನ್ ಮತ್ತು ದಕ್ಷಿಣ ಕೊರಿಯಾ ದೇಶಗಳು ತಮ್ಮ ಶೇ. 69ರಷ್ಟು ಇಂಧನಕ್ಕೆ ಇದನ್ನೇ ನಂಬಿಕೊಂಡಿವೆ.

ಪ್ರಸ್ತುತ ಪರಿಸ್ಥಿತಿ ಏನಾಗಿದೆ?

ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ (IRGC) ಈ ಮಾರ್ಗದಲ್ಲಿ ಸಾಗುವ ಹಡಗುಗಳಿಗೆ "ಯಾವುದೇ ಹಡಗು ಸಾಗಲು ಅನುಮತಿ ಇಲ್ಲ" ಎಂಬ ಸಂದೇಶ ಈಗಾಗಲೇ ನೀಡಿದೆ. ಇನ್ನು ಖಮೇನಿ ಸಾವಿನ ಬಳಿಕ ಈ ಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ಇರಾನ್ ಸರ್ಕಾರ ಅಧಿಕೃತವಾಗಿ ಈ ಮಾರ್ಗವನ್ನು ಇನ್ನೂ ಮುಚ್ಚಿಲ್ಲ. ಆದರೆ, ಸುರಕ್ಷತೆಯ ದೃಷ್ಟಿಯಿಂದ ಅನೇಕ ಕಂಪನಿಗಳು ತಮ್ಮ ತೈಲ ಹಡಗುಗಳ ಸಂಚಾರವನ್ನು ಸ್ಥಗಿತಗೊಳಿಸಿವೆ. ಈಗಾಗಲೇ 150ಕ್ಕೂ ಹೆಚ್ಚು ಹಡಗುಗಳು ಸಮುದ್ರದ ಮಧ್ಯದಲ್ಲೇ ಲಂಗರು ಹಾಕಿ ನಿಂತಿವೆ. ಭಾನುವಾರ ಓಮನ್ ಕರಾವಳಿಯಲ್ಲಿ ತೈಲ ಟ್ಯಾಂಕರ್ ಒಂದರ ಮೇಲೆ ದಾಳಿ ನಡೆದಿದ್ದು, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.

ಬೆಲೆ ಏರಿಕೆ ಮತ್ತು ಆರ್ಥಿಕತೆ ಮೇಲಿನ ಪರಿಣಾಮ

ತಜ್ಞರ ಪ್ರಕಾರ, ಹಾರ್ಮುಜ್ ಜಲಸಂಧಿ ಬಂದ್ ಆದರೆ ತೈಲ ಬೆಲೆಗಳು ತೀವ್ರವಾಗಿ ಏರಲಿವೆ. ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 100 ಡಾಲರ್ ದಾಟುವ ಸಾಧ್ಯತೆಯಿದೆ. ತೈಲ ಬೆಲೆ ಏರಿಕೆಯಾದರೆ ಜಾಗತಿಕ ಹಣದುಬ್ಬರ (Inflation) ಶೇ. 0.6 ರಿಂದ 0.7 ರಷ್ಟು ಹೆಚ್ಚಾಗಬಹುದು. ಇದರಿಂದ ಪೆಟ್ರೋಲ್, ಡೀಸೆಲ್ ಮಾತ್ರವಲ್ಲದೆ ದಿನಬಳಕೆಯ ವಸ್ತುಗಳ ಬೆಲೆಯೂ ಏರಲಿದೆ. ಈ ಬಿಕ್ಕಟ್ಟು ದೀರ್ಘಕಾಲ ಮುಂದುವರಿದರೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಆರ್ಥಿಕ ಹಿಂಜರಿತಕ್ಕೆ (Recession) ತುತ್ತಾಗಬಹುದು ಎನ್ನಲಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇರಾನ್ ಅಧ್ಯಕ್ಷ ಅಯತೊಲ್ಲಾ ಖಮೇನಿ ಸಾವನ್ನು ಭಾರತ ಖಂಡಿಸಿಲ್ಲವೇಕೆ ?: ಇಲ್ಲಿದೆ ಹಲವು ಕಾರಣ
ಗಲೀಜು ಟಾಯ್ಲೆಟ್‌, ಕೆಟ್ಟ ಊಟ, ನೆಲದ ಮೇಲೆ ನಿದ್ರೆ: ತಿಹಾರ್ ಜೈಲಲ್ಲಿ ಅನುಭವಿಸಿದ ನರಕಯಾತನೆ ಬಿಚ್ಚಿಟ್ಟ ಕನ್ನಡ ಸಿನಿಮಾ ನಟಿ!