2200 ರೂ. ಮದ್ಯದ ಬಾಟೆಲ್ ಕದಿಯೋದು ನನ್ನ ಆಸೆಯಾಗಿತ್ತೆಂದ ಕಳ್ಳ

Published : Sep 08, 2025, 08:06 AM IST
bevco outlet theft palakkad

ಸಾರಾಂಶ

ಮದ್ಯದಂಗಡಿಯಲ್ಲಿ ಕಳ್ಳತನ ಮಾಡಿದ ಆರೋಪಿ ಕೇವಲ ಅರ್ಧ ಲೀಟರ್ ಬಾಟಲಿಗಳನ್ನು ಕದ್ದಿದ್ದಾನೆ. ಹಬ್ಬದಂದು ಮಾರಾಟ ಮಾಡುವ ಉದ್ದೇಶದಿಂದ ಕಳ್ಳತನ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. 

ಪಾಲಕ್ಕಾಡ್: ಮದ್ಯದಂಗಡಿಯಲ್ಲಿ ಮದ್ಯ ಕಳ್ಳತನ ಮಾಡಿದ್ದ ಕಳ್ಳನೋರ್ವ (Theft) ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾನೆ. ಕಳ್ಳನ ಚಲನವಲನದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿ ಕಳ್ಳನನ್ನು ಬಂಧಿಸಲಾಗಿದೆ. ಮದ್ಯದಂಗಡಿಗೆ ನುಗ್ಗಿದ ಕಳ್ಳನ ಹೆಸರು ಶಿವದಾಸನ್ ಎಂದು ಪೊಲೀಸರು (Police) ಮಾಹಿತಿ ನೀಡಿದ್ದಾರೆ. ಅಂಗಡಿಯೊಳಗೆ ನುಗ್ಗಿದ ಕಳ್ಳ, ಕೇವಲ ಅರ್ಧ ಲೀಟರ್ ಬಾಟೆಲ್‌ಗಳನ್ನು ಮಾತ್ರ ಕದ್ದಿದ್ದಾನೆ. ಚಿಕ್ಕ ಬಾಟೆಲ್‌ಗಳಾದ್ರೆ (Liquor Bottel) ಬೇಗ ಮಾರಾಟವಾಗುತ್ತೆ ಅನ್ನೋದು ಶಿವದಾಸನ್ ಲೆಕ್ಕಾಚಾರವಾಗಿತ್ತು. ಕೇರಳದ ಪಾಲಕ್ಕಾಡ್‌ನ ಕೊಲ್ಲಂಕೋಡ್ (Kollamcode, Palakkad, Kerala) ಬೆವ್ಕೊ ಮದ್ಯದಂಗಡಿಯಲ್ಲಿ ಈ ಕಳ್ಳತನ ನಡೆದಿದೆ.

ದುಬಾರಿ ಬೆಲೆಯ ₹2200 ಬಾಟಲಿ ಮೇಲೆ ವ್ಯಾಮೋಹ

ಕೊಲ್ಲಂಕೋಡ್ ಬೆವ್ಕೊ ಮದ್ಯದಂಗಡಿಯಲ್ಲಿ ತಿರುವೋಣ ದಿನದಂದು ಮಾರಾಟ (Onam Liquor Heist) ಮಾಡುವ ಉದ್ದೇಶದಿಂದ ಕಳ್ಳತನ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಅರ್ಧ ಲೀಟರ್ ಬಾಟಲಿಗಳನ್ನು ಮಾತ್ರ ಕದ್ದಿದ್ದು ಇದಕ್ಕಾಗಿಯೇ ಎಂದು ಬಂಧಿತ ಮುಖ್ಯ ಆರೋಪಿ ಶಿವದಾಸನ್ ಹೇಳಿಕೆ ನೀಡಿದ್ದಾನೆ. ಕದ್ದ ಮದ್ಯವನ್ನು ಸಿಕ್ಕ ಬೆಲೆಗೆ ಮಾರಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ದುಬಾರಿ ಬೆಲೆಯ ₹2200 ಬಾಟಲಿಯನ್ನು ಕದ್ದಿದ್ದು ತನ್ನ ದೀರ್ಘಕಾಲದ ಆಸೆಯಾಗಿತ್ತು. ಹಾಗಾಗಿ ಆ ಬಾಟೆಲ್ ಮಾರಾಟ ಮಾಡದೇ ನಾನೇ ಕುಡಿದು ಮುಗಿಸಿದ್ದೇನೆ. ಮಾರಾಟಕ್ಕೆ ಸ್ನೇಹಿತನೊಬ್ಬನನ್ನು ಕರೆದಿದ್ದಾಗಿ ಶಿವದಾಸನ್ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ

ಶಿವದಾಸನ್ ಹಲವು ಕಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮದ್ಯದಂಗಡಿಯ ಕಳ್ಳತನದ ಹೊಸ ಸಿಸಿಟಿವಿ ದೃಶ್ಯಗಳು (CCTV Footage) ಬೆಳಕಿಗೆ ಬಂದಿವೆ. ಸಿಸಿಟಿವಿ ದೃಶ್ಯಗಳಲ್ಲಿ  ಕಳ್ಳ ಒಳಗೆ ನುಗ್ಗಿ ಮದ್ಯ ಕದಿಯುವುದು ಮತ್ತು ಕೊನೆಯ ಚೀಲ ಹೊರತೆಗೆಯುವುದು ಕಂಡುಬಂದಿದೆ. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು (Accused) ಪೊಲೀಸರು ಬಂಧಿಸಿದ್ದಾರೆ.

5 ಗಂಟೆಗಳ ಕಾಲ ವಿವಿಧ ಬ್ರಾಂಡ್‌ಗಳ ಮದ್ಯದ ಬಾಟಲಿ ಕಳ್ಳತನ

ತಿರುವೋಣ ದಿನದಂದು ಬೆಳಿಗ್ಗೆ 2.30ಕ್ಕೆ ಮೂವರು ಕೊಲ್ಲಂಕೋಡ್‌ನ ಬೆವ್ಕೊ ಪ್ರೀಮಿಯಂ ಮದ್ಯದಂಗಡಿಗೆ ಬಂದಿದ್ದಾರೆ. ಹಿಂಭಾಗದ ಖಾಲಿ ಜಾಗದ ಗೋಡೆ ಹಾರಿ ಒಳಗೆ ನುಗ್ಗಿದ್ದಾರೆ. ಒಬ್ಬ ವ್ಯಕ್ತಿ ಒಳಗೆ ಹೋಗಲು ಅನುವಾಗುವಂತೆ ಔಟ್‌ಲೆಟ್‌ನ ಗೋಡೆಯನ್ನು ಒಡೆದಿದ್ದಾರೆ. ಕೊಲ್ಲಂಕೋಡ್‌ನ ರವಿ ಒಳಗೆ ಹೋಗಿದ್ದಾನೆ. ಹೊರಗೆ ನಿಂತಿದ್ದ ಇತರ ಇಬ್ಬರು ಆರೋಪಿಗಳಿಗೆ ಮದ್ಯದ ಬಾಟಲಿಗಳನ್ನು ಚೀಲಗಳಲ್ಲಿ ತುಂಬಿ ಹಂತ ಹಂತವಾಗಿ ಕೊಟ್ಟಿದ್ದಾನೆ. ಬೆಳಿಗ್ಗೆ 7.30ಕ್ಕೆ ಕೊನೆಯ ಚೀಲವನ್ನು ತೆಗೆದುಕೊಂಡು ಕಳ್ಳ ಹೊರಗೆ ಹೋಗಿದ್ದಾನೆ.

ಇದನ್ನೂ ಓದಿ: ಪ್ರವಾಸಿಗರ ಗೇಲಿ ಮಾಡ್ತಿದ್ದ ಗಿಳಿಗಳು: ಗಿಳಿಗಳ ಕೆಟ್ಟ ಮಾತು ಕೇಳಲಾಗದೇ ಪ್ರತ್ಯೇಕಗೊಳಿಸಿದ ಝೂ ಸಿಬ್ಬಂದಿ

ಐದು ಗಂಟೆಗಳಲ್ಲಿ ಹತ್ತಕ್ಕೂ ಹೆಚ್ಚು ಚೀಲಗಳಲ್ಲಿ ವಿವಿಧ ಬ್ರಾಂಡ್‌ಗಳ ಮದ್ಯದ ಬಾಟಲಿಗಳನ್ನು ಕಳ್ಳರು ಹೊರತೆಗೆದಿದ್ದಾರೆ. ಕದ್ದ ಎರಡು ಚೀಲಗಳನ್ನು ಔಟ್‌ಲೆಟ್‌ನ ಹಿಂಭಾಗದಲ್ಲಿ ಬಿಟ್ಟು ಹೋಗಿದ್ದಾರೆ ಎಂದು ಪೊಲೀಸರು ಕಂಡುಹಿಡಿದಿದ್ದಾರೆ.

ಇದನ್ನೂ ಓದಿ: ಜೈನ ಪುರೋಹಿತನ ವೇಷದಲ್ಲಿ ಬಂದು ₹1.5 ಕೋಟಿ ರತ್ನಖಚಿತ ಚಿನ್ನದ ಚೊಂಬು, ಕಳಶ ಕದ್ದೊಯ್ದ ಕಳ್ಳ!

ಕಾಳಸಂತೆಯಲ್ಲಿ ಮಾರಾಟ ಮಾಡುವ ಉದ್ದೇಶ

ತಿರುವೋಣ ದಿನದಂದು ಕಾಳಸಂತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಕಳ್ಳತನ ಮಾಡಿದ್ದಾರೆ. ಪೊಲೀಸರ ಸಮ್ಮುಖದಲ್ಲಿ ಬೆವ್ಕೊ ಅಧಿಕಾರಿಗಳು ಸ್ಟಾಕ್ ಪರಿಶೀಲಿಸಿದ್ದಾರೆ. ಸುಮಾರು ಮೂರು ಲಕ್ಷ ರೂಪಾಯಿ ಮೌಲ್ಯದ ಮದ್ಯ ಕಳುವಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಇದನ್ನೂ ಓದಿ: ಮಹಿಳೆ ಜೊತೆ ರೋಮ್ಯಾನ್ಸ್ ಮಾಡುತ್ತಾ ಕನಸು ಕಂಡವನಿಗೆ ವಿಮಾನ ಇಳಿದ ತಕ್ಷಣ ಕಾದಿತ್ತು ಶಾಕ್!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್
ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ