'ಕೇಂದ್ರದ ನೀತಿಗಳ ವಿರುದ್ಧ ರಾಜ್ಯ ಸರ್ಕಾರಗಳು ಮಸೂದೆ ಪಾಸ್ ಮಾಡಬಹುದು'

By Suvarna NewsFirst Published Mar 20, 2021, 5:27 PM IST
Highlights

ಮತ್ತೆ ಚರ್ಚೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ/  ರಾಜ್ಯ ಸರ್ಕಾರಗಳು ಕೇಂದ್ರದ  ತೀರ್ಮಾನವ ವಿರುದ್ಧ ಮಸೂದೆ ಪಾಸ್   ಮಾಡಬಹುದು/ ಅಭಿಪ್ರಾಯ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್/ ಸಿಎಎ ವಿರುದ್ಧ ಕೇರಳ ಮತ್ತು ಪಶ್ಚಿಮ ಬಂಗಾಳ ವಿಧಾಸಭೆಯಲ್ಲಿ ಮಸೂದೆ ಪಾಸ್

ನವದೆಹಲಿ (ಮಾ. 20): ಮತ್ತೆ  ಪೌರತ್ವ ತಿದ್ದುಪಡಿ ಮಸೂದೆ ದೊಡ್ಡ ಚರ್ಚೆಗೆ ಬಂದಿದೆ.  ಸಿಎಎ ಬಗ್ಗೆ ಇದೀಗ ಸುಪ್ರೀಂ ಕೋರ್ಟ್ ಸಹ ಮಾತನಾಡಿದೆ. 

ಕೇರಳ, ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಸಿಎಎ ಮಸೂದೆ ವಿರುದ್ಧವಾಗಿ ಬಿಲ್ ಪಾಸಾಗಿರುವ ವಿಚಾರದ ಬಗ್ಗೆ ಗಂಭೀರ ಮಾತುಗಳನ್ನು ಸುಪ್ರೀಂ ಕೋರ್ಟ್ ಆಡಿದೆ. 

ಶರದ್ ಎ ಬೋಬ್ಡೇ ನೇತೃತ್ವದ ಪೀಠದಲ್ಲಿ ವಿಚಾರಣೆ ನಡೆದಿದೆ.  ರಾಜಸ್ಥಾನ ಮೂಲದ ಎನ್‌ಜಿಒ ಸಮತಾ ಆಂದೋಲನ ಸಮಿತಿ  ಒಂದು ಸಲ್ಲಿಕೆ ಮಾಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆದಿದೆ.  ರಾಜ್ಯ ಸರ್ಕಾರಗಳು ಪಾಸ್ ಮಾಡಿರುವ ಮಸೂದೆಗಳನ್ನು ರದ್ದು ಮಾಡಬೇಕು ಎಂದು ಸಮಿತಿ ಕೋರಿತ್ತು.

'ನಾನು ಸುಳ್ಳು ಹೇಳಲು ನರೇಂದ್ರ ಮೋದಿ ಅಲ್ಲ, ಅಧಿಕಾರಕ್ಕೆ ಬಂದರೆ ಸಿಎಎಗೆ ಬ್ರೇಕ್'

ಕೇರಳ ವಿಧಾನಸಭೆ ಸಿಎಎ ಮತ್ತು ಕೃಷಿ ಕಾಯಿದೆ ತಿದ್ದುಪಡಿಯನ್ನು ಒಳ್ಳೆಯದು ಅಥವಾ ಕೆಟ್ಟದ್ದು ಎಂದು ನಿರ್ಧರಿಸಲು ಸಾಧ್ಯವಿಲ್ಲ ಎಂದು ಸಮಿತಿ ಕೇಳಿಕೊಂಡಿತ್ತು. ಇದು  ಕೇಂದ್ರ ಪಟ್ಟಿ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿತ್ತು.

ಈ ಎಲ್ಲ ವಿಚಾರಗಳನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಗಳು ಕೇಂದ್ರದ ನಿಯಮಗಳ ವಿರುದ್ಧ ಮಸೂದೆ ಪಾಸ್ ಮಾಡಬಹುದು.. ಅದಕ್ಕೆ ಅವಕಾಶ ಇದೆ ಎಂದು ಅಭಿಪ್ರಾಯ ಪಟ್ಟಿದೆ. ಜತೆಗೆ ಈ ಪ್ರಕರಣವನ್ನು ಮೂರು ವಾರ ಕಾಲ ಮುಂದಕ್ಕೆ ಹಾಕಲಾಗಿದ್ದು ಅರ್ಜಿ ಸಲ್ಲಿಸಿದವರಿಗೆ ಇನ್ನಷ್ಟು ದಾಖಲೆಗಳನ್ನು ಒದಗಿಸಲು ತಿಳಿಸಲಾಗಿದೆ.

 

 

 

click me!