ಕೋಮು ಗಲಭೆ ಸೃಷ್ಟಿಸಲು 60 ಹಸು, ಎತ್ತುಗಳನ್ನ ಕೊಂದ 24 ಜನರ ಬಂಧನ!
ಬಂಧಿತ 24 ಜನರ ಪೈಕಿ ಎಂಟು ಆರೋಪಿಗಳು ನಾಗ್ಪುರ ಮೂಲದವರು. ಕೋಮು ಗಲಭೆ ಸೃಷ್ಟಿಸುವ ಉದ್ದೇಶದಿಂದ ಹಸುಗಳನ್ನು ಹತ್ಯೆ ಮಾಡಲಾಗುತ್ತಿತ್ತು
ಭೋಪಾಲ್: ಸಮಾಜದಲ್ಲಿ ಕೋಮು ಗಲಭೆ ಪ್ರಚೋದಿಸಲು (create communal frenzy) 60ಕ್ಕೂ ಹಸುಗಳನ್ನು (Cows and Ox) ಕೊಂದ 24 ಜನರನ್ನು ಪೊಲೀಸರು (Police) ಬಂಧಿಸಿದ್ದಾರೆ. ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಬಂಧಿತ 24 ಜನರ ಪೈಕಿ ಎಂಟು ಆರೋಪಿಗಳು ನಾಗ್ಪುರ ಮೂಲದವರು. ಕೋಮು ಗಲಭೆ ಸೃಷ್ಟಿಸುವ ಉದ್ದೇಶದಿಂದ ಹಸುಗಳನ್ನು ಹತ್ಯೆ ಮಾಡಲಾಗುತ್ತಿತ್ತು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಈ ಬಗ್ಗೆ ಶುಕ್ರವಾರ ಪೊಲೀಸರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಜೂನ್ 19 ಹಾಗೂ ಜೂನ್ 20ರಂದು ಸಿಯೋನಿ ಜಿಲ್ಲೆಯ ಧೂಮಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯ ಕಾಕರ್ತಲಾ ಎಂಬ ಅರಣ್ಯ ಪ್ರದೇಶದಲ್ಲಿ ಹಸು ಹಾಗೂ ಎತ್ತುಗಳ ಕಳಬರೆ ಪತ್ತೆಯಾಗಿತ್ತು. ಇದಾದ ಬಳಿಕ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಹಸುಗಳ ಕಳೆಬರೆ ಪತ್ತೆಯಾಗಿದ್ದವು. ಸಿಯೋನಿಯ ಪಿಂಡ್ರೈ ಗ್ರಾಮದ ವೈಗಂಗಾ ನದಿ ಬಳಿ ಕತ್ತು ಸೀಳಿದ ಸ್ಥಿತಿಯಲ್ಲಿ 18 ಹಸು ಕಳೆಬರ ಹಾಗೂ ಕಾಕರ್ತಲಾ ಅರಣ್ಯ ಪ್ರದೇಶದಲ್ಲಿ 28 ಹಸು ಮತ್ತು ಎತ್ತುಗಳ ಕಳೆಬರೆ ಪತ್ತೆಯಾಗಿದ್ದವು.
ಆರೋಪಿಗಳು ಹಣಕ್ಕಾಗಿ ಗೋವುಗಳನ್ನು ಕೊಲ್ಲುವ ಕೆಲಸ ಮಾಡುತ್ತಿದ್ದರು. ಈ ಕೃತ್ಯದಲ್ಲಿ ಸಿಯೋನಿ ಜಿಲ್ಲೆಯ ಕೆಲವರು ಭಾಗಿಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಸುಗಳ ಕಳೆಬರ ಪತ್ತೆಯಾದ ಹಿನ್ನೆಲೆ ಸಿಯೋನಿ ಜಿಲ್ಲಾಧಿಕಾರಿ ಕ್ಷಿತಿಜ್ ಸಿಂಘಾಲ್ ಮತ್ತು ಎಸ್ಪಿ ರಾಕೇಶ್ ಕುಮಾರ್ ಸಿಂಗ್ ವರ್ಗಾವಣೆ ಮಾಡಿ ಆದೇಶಿಸಲಾಗಿತ್ತು.
ಮಧ್ಯಪ್ರದೇಶ ಪೊಲೀಸರ ಹದ್ದಿನ ಕಣ್ಣು
ಭೊಪಾಲ್ ಪೊಲೀಸರು ಈ ರೀತಿ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣು ಇರಿಸಿದ್ದರು. ಅನಾಮಧೇಯ ಆರೋಪಿಗಳ ವಿರುದ್ಧ ಮಧ್ಯಪ್ರದೇಶ ಗೋ ಹತ್ಯೆ ನಿರ್ಬಂಧ ನಿಯಮ 2004 ಹಾಗೂ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನಿ ತಾಯಿ-ಮಗಳಿಗೆ ಹೈದರಾಬಾದ್‌ನಲ್ಲಿ ತಾಲಿಬಾನ್ ಮಾದರಿಯ ಶಿಕ್ಷೆ; ನರಕ ತೋರಿಸಿದ ಕುಟುಂಬಸ್ಥರು
ಈ ಪ್ರಕರಣ ಸಂಬಂಧ ಮೊದಲು ವಾಹಿದ್ ಖಾನ್ ಹಾಗೂ ಆತನ ಆರು ಸಹಚರರನ್ನು ಬಂಧಿಸಲಾಯ್ತು. ವಿಚಾರಣೆ ವೇಳೆ ವಾಹಿದ್ ಖಾನ್, ನಾಗ್ಪುರದ ಇಸ್ರಾರ್ ಅಹಮದ್ ಸೂಚನೆ ಮೇರೆಗೆ ಗೋವುಗಳನ್ನು ಕೊಲ್ಲುವ ಕೆಲಸ ಮಾಡಲಾಗಿತ್ತು ಎಂದು ಬಾಯಿ ಬಿಟ್ಟಿದ್ದಾರೆ. ಜೂನ್ 17ರಂದು ಸಿಯೋನಿ ಜಿಲ್ಲೆಗೆ ತನ್ನ ಸಹಚರರ ಜೊತೆ ಆಗಮಿಸಿದ ಇಸ್ರಾರ್ ಅಹಮದ್, ಇಲ್ಲಿಯ ಸನಾ-ಉರ್-ರಹಮಾನ್, ಅಬ್ದುಲ್ ಕರೀಮ್ ಮತ್ತು ರಫೀಕ್ ಖಾನ್‌ಗೆ ಹಣದ ಆಸೆ ತೋರಿಸಿ ತಮ್ಮೊಂದಿಗೆ ಸೇರಿಸಿಕೊಂಡರು ಅಂತಾ ವಾಹಿದ್ ಖಾನ್ ಹೇಳಿದ್ದಾನೆಂದು ನ್ಯೂಸ್ 18 ಹಿಂದಿ ವರದಿ ಪ್ರಕಟಿಸಿದೆ.
ಪ್ರಮುಖ ಆರೋಪಿಯ ಬಂಧನ
ವಾಹಿದ್ ಖಾನ್ ಹೇಳಿಕೆಯನ್ನಾಧರಿಸಿ ಪೊಲೀಸರು ಪ್ರಮುಖ ಆರೋಪಿ ಇಸ್ರಾರ್ ಅಹಮದ್‌ನನ್ನು ಬಂಧಿಸಿದಾಗ, ಆತನೂ ಸಹ ಹಲವು ವಿಷಯಗಳನ್ನು ಪೊಲೀಸರರ ಮುಂದೆ ಬಾಯಿಬಿಟ್ಟಿದ್ದಾನೆ. ಇಸ್ರಾರ್ ಗೋವುಗಳನ್ನು ಕೊಲ್ಲುವ ಯೋಜನೆಯನ್ನು ಹಾಕಿಕೊಂಡಿದ್ದಾಗಿ ಹೇಳಿಕೊಂಡಿದ್ದಾನೆ. ಜೂನ್ 19 ಹಾಗೂ ಜೂನ್ 20ರಂದು ಸಿಯೋನಿ ಜಿಲ್ಲೆಯ ಧೂಮಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾದ ಕಳೆಬರೆ ಗೋವುಗಳ್ನು ಕಳ್ಳಸಾಗಣೆ ಮಾಡಲಾಗಿತ್ತು ಎಂಬ ಅನುಮಾನ ವ್ಯಕ್ತವಾಗಿದೆ. ಮಧ್ಯಪ್ರದೇಶದ ಸಿಯೋನಿ ಮತ್ತು ಮಹಾರಾಷ್ಟ್ರದ ನಾಗ್ಪುರದ ಗಡಿ ಜಿಲ್ಲೆಗಳಾಗಿವೆ.
ಮದ್ವೆಯಾಗಿದ್ರೂ ಇಬ್ಬರ ಜೊತೆ ಸರಸ ಸಲ್ಲಾಪ; ಅಡ್ಡಿಯಾದ ಗಂಡನಿಗೆ ಚಟ್ಟ ಕಟ್ಟಿದ್ಳು!
ಸಿಯೋನಿಯಲ್ಲಿ 19 ಹಸುಗಳು ಮತ್ತು 43 ಎತ್ತುಗಳ ಕಳಬರೆ ಪತ್ತೆಯಾಗಿವೆ ಎಂದು ಪೊಲೀಸ್ ಮಹಾನಿರೀಕ್ಷಕ (ಜಬಲ್‌ಪುರ ವಲಯ) ಅನಿಲ್ ಸಿಂಗ್ ಕುಶ್ವಾಹಾ ಈ ಹಿಂದೆ ಹೇಳಿದ್ದರು. ಕೋಮು ಉನ್ಮಾದವನ್ನು ಪ್ರಚೋದಿಸುವ ಉದ್ದೇಶದಿಂದ ಈ ಪ್ರಾಣಿಗಳನ್ನು ಕೊಲ್ಲಲಾಗಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ ಎಂದು ಅನಿಲ್ ಸಿಂಗ್ ಕುಶ್ವಾಹಾ ಹೇಳಿದ್ದಾರೆ.