ಮಂತ್ರಾಲಯದಲ್ಲಿ 108 ಅಡಿ ಎತ್ತರದ ಶ್ರೀರಾಮ ಪ್ರತಿಮೆ ನಿರ್ಮಾಣಕ್ಕೆ ಅಡಿಗಲ್ಲು

By Sathish Kumar KHFirst Published Jul 23, 2023, 6:24 PM IST
Highlights

ಶ್ರೀ ಗುರು ರಾಘವೇಂದ್ರನ ಸನ್ನಿಧಿಯಾದ ಮಂತ್ರಾಲಯದಲ್ಲಿ 108 ಅಡಿ ಎತ್ತರದ ಶ್ರೀರಾಮನ ಪ್ರತಿಮೆ ನಿರ್ಮಾಣಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಅಡಿಗಲ್ಲು ಹಾಕಿ ಚಾಲನೆ ನೀಡಿದ್ದಾರೆ.

ರಾಯಚೂರು (ಜು.23): ದೇಶದಲ್ಲಿ ಹಿಂದೂಗಳ ಆರಾಧ್ಯ ದೈವವಾದ ಶ್ರೀರಾಮನ ಭವ್ಯವಾದ ಮಂದಿರವನ್ನು ಅಯೋಧ್ಯೆಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇದರ ಬೆನ್ನಲ್ಲಿಯೇ ಶ್ರೀ ಗುರು ರಾಘವೇಂದ್ರನ ಸನ್ನಿಧಿಯಾದ ಮಂತ್ರಾಲಯದಲ್ಲಿ 108 ಅಡಿ ಎತ್ತರದ ಶ್ರೀರಾಮನ ಪ್ರತಿಮೆ ನಿರ್ಮಾಣಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಅಡಿಗಲ್ಲು ಹಾಕಿ ಚಾಲನೆ ನೀಡಿದ್ದಾರೆ.

ಮಂತ್ರಾಲಯದಲ್ಲಿ‌ 108 ಅಡಿ ಶ್ರೀರಾಮನ ಪ್ರತಿಮೆಗೆ ಅಡಿಗಲ್ಲು ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಇನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್‌ ಶಾ ಅವರು, ವರ್ಚುವಲ್ ಮೂಲಕ ಅಡಿಗಲ್ಲು ಹಾಕಿದರು. ಮಂತ್ರಾಲಯದಲ್ಲಿ ನಿರ್ಮಾಣವಾಗಲಿರುವ 108 ಅಡಿ ಎತ್ತರದ ಶ್ರೀರಾಮನ ಪ್ರತಿಮೆಗೆ ಭೂಮಿ ಪೂಜೆಯನ್ನು ಅದ್ಧೂರಿಯಾಗಿ ನೆರವೇರಿಸಲಾಯಿತು. ಇದೇ ವೇಳೆ ಮಂತ್ರಾಲಯದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಭೌತಿಕವಾಗಿ ಭೂಮಿ ಪೂಜೆಯನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಆಂಧ್ರ ಪ್ರದೇಶ ರಾಜ್ಯದ ಹಲವು ಸಚಿವರುಗಳು ಹಾಗೂ ಗಣ್ಯರು ಭಾಗಿಯಾಗಿದ್ದರು. ಅಪಾರ ಭಕ್ತರ ಸಮ್ಮುಖದಲ್ಲಿ ನಡೆದ ಭೂಮಿ ಪೂಜಾ ಕಾರ್ಯಕ್ರಮ ನೆರವೇರಿತು.

 ಸಂಕ್ರಾಂತಿ ದಿನ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆ: ದೇಶ, ವಿದೇಶಗಳಲ್ಲಿ ಸಮಾರಂಭದ ಪ್ರಸಾರ

ದೇಶದಲ್ಲಿಯೇ ಅತಿದೊಡ್ಡ ಶ್ರೀರಾಮನ ಪ್ರತಿಮೆ: ದೇಶದಲ್ಲೇ ಅತಿ ದೊಡ್ಡ ಶಿಲಾಮೂರ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ 108 ಅಡಿ ಉದ್ದದ ಶ್ರೀರಾಮನ ಮೂರ್ತಿಯನ್ನು ಮಂತ್ರಾಲಯದಲ್ಲಿ ಸ್ಥಾಪಿಸಲಾಗುವುದು. ಪ್ರತಿಮೆಯನ್ನು ಕೆತ್ತಲು ಡಿಜಿಟಲ್ ತಂತ್ರಜ್ಞಾನವನ್ನು ಬಳಸಲಾಗುವುದು. ವಿಶೇಷ ಯೋಜನೆಗೆ ಅಂದಾಜು 6 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಪುರಾಣದ ಪ್ರಕಾರ, ಶ್ರೀರಾಮನು ಸೀತಾದೇವಿಯನ್ನು ಹುಡುಕಲು ಲಂಕೆಗೆ ತೆರಳುತ್ತಿದ್ದಾಗ ಇಲ್ಲಿ ಆಶ್ರಯ ಪಡೆದಿದ್ದನು ಎಂಬ ನಂಬಿಕೆಯಿದೆ. ಆದ್ದರಿಂದ ಬೃಂದಾವನದಲ್ಲಿ ಪ್ರತಿಮೆಯನ್ನು ಸ್ಥಾಪಿಸಲು ಸ್ಥಳವನ್ನು ಆರಿಸಿಕೊಳ್ಳಲಾಗಿದೆ ಎಂದು ಮಂತ್ರಾಲಯ ಮಠದ ಮಠಾಧೀಶ ಶ್ರೀ ಸುಬುದೇಂದ್ರ ತೀರ್ಥ ಸ್ವಾಮಿಗಳು ತಿಳಿಸಿದ್ದರು.

ಏಕಶಿಲಾ ಪ್ರತಿಮೆ ನಿರ್ಮಾಣ: ಇನ್ನು ರಾಘವೇಂದ್ರ ಮಠವು ಈ ಉದ್ದೇಶಕ್ಕಾಗಿ ಕಳೆದ ಏಳೆಂಟು ತಿಂಗಳ ಹಿಂದೆ ಶ್ರೀ ಸತ್ಯಸಾಯಿ ಜಿಲ್ಲೆಯ ರೊಳ್ಳ ಮಂಡಲದ ಕೊಡಗರ್ಲಗುಟ್ಟ ಪ್ರದೇಶದಿಂದ ಒಂದೇ ಕಲ್ಲನ್ನು ಖರೀದಿಸಿ ವಿಶೇಷ ವಾಹನದ ಮೂಲಕ ಪ್ರತಿಮೆ ಸ್ಥಾಪಿಸುವ ಸ್ಥಳಕ್ಕೆ ಶಿಲೆಯನ್ನು ಸ್ಥಳಾಂತರಿಸಿದೆ. ಡಿಜಿಟಲ್ ತಂತ್ರಜ್ಞಾನ ಬಳಸಿ ಪ್ರತಿಮೆ ಕೆತ್ತುವ ಕೆಲಸವನ್ನು ಕರಾವಳಿ ಭಾಗದ ತಜ್ಞರ ತಂಡಕ್ಕೆ ನೀಡಲಾಯಿತು. ಈ ತಂತ್ರಜ್ಞಾನವನ್ನು ಬಳಸಿಕೊಂಡು ಸಂಸ್ಥೆಯು 9 ಅಡಿ ಪ್ರತಿಮೆಯನ್ನು ಸಿದ್ಧಪಡಿಸಿತ್ತು. ಅದೇ ವಿನ್ಯಾಸವನ್ನು 108 ಅಡಿ ಪ್ರತಿಮೆಯನ್ನು ಕೆತ್ತಲು ಮಠಾಧೀಶರು ಅನುಮೋದಿಸಿದ್ದಾರೆ.

ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಭವ್ಯ ರಾಮಮಂದಿರದಲ್ಲಿ ಮುಂದಿನ ವರ್ಷ ಮಕರ ಸಂಕ್ರಮಣದ ದಿನ ಅಂದರೆ ಜ.14ರಂದು ರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತದೆ ಎಂದು ರಾಮ ಮಂದಿರ ನಿರ್ಮಾಣ ಸಮಿತಿಯ ಮುಖ್ಯಸ್ಥ ನೃಪೇಂದ್ರ ಮಿಶ್ರಾ ಹೇಳಿದ್ದರು.

ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿದ ಅವರು, ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಆಹ್ವಾನಿಸಲಾಗುತ್ತದೆ. ಪ್ರತಿಷ್ಠಾಪನೆಯ ವಿಧಿವತ್ತಾದ ಆಚರಣೆಗಳು 10 ದಿನಗಳ ಕಾಲ ನಡೆಯಲಿವೆ. ಈ ಕಾರ್ಯಕ್ರಮವನ್ನು ದೇಶ ಹಾಗೂ ವಿದೇಶದಲ್ಲಿ ಪ್ರಸಾರ ಮಾಡುವುಕ್ಕಾಗಿಯೂ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದರು.

ಜೈ ಶ್ರೀರಾಮ್‌, ನಾನು ಗುಣಮುಖನಾಗಿದ್ದೆನೆ: ಯಾರೂ ಭಯಪಡಬೇಡಿ ಎಂದ ಶಾಸಕ ಯತ್ನಾಳ್‌

ದೇವಸ್ಥಾನದ (Temple Model) ಮಾದರಿಯನ್ನು ವಿವರಿಸಿದ ಅವರು, ಅಕ್ಟೋಬರ್‌ ವೇಳೆಗೆ ದೇವಸ್ಥಾನದ ನೆಲಮಹಡಿ ನಿರ್ಮಾಣ ಕಾರ್ಯ ಪೂರ್ಣವಾಗಲಿದೆ. ನಾಲ್ಕು ಅಂತಸ್ತುಗಳು ನಿರ್ಮಾಣವಾದ ಬಳಿಕ ಇಲ್ಲಿ ‘ರಾಮಕಥಾ’ವನ್ನು (Ramkatha)ರಚನೆ ಮಾಡಲಾಗುವುದು. 360 ಅಡಿ ಅಗಲ ಮತ್ತು 235 ಅಡಿ ಉದ್ದ ಹೊಂದಿರುವ ದೇವಸ್ಥಾನ ನೆಲಮಹಡಿಯಲ್ಲಿ 160 ಕಾಲಮ್‌ಗಳು, ಮೊದಲ ಮಹಡಿಯಲ್ಲಿ 132 ಕಾಲಮ್‌ಗಳು ಮತ್ತು 2ನೇ ಮಹಡಿಯಲ್ಲಿ 74 ಕಾಲಮ್‌ಗಳನ್ನು ಹೊಂದಿರಲಿದೆ. ಇದರೊಂದಿಗೆ 5 ಮಂಟಪಗಳು ಇರಲಿವೆ ಎಂದು ಹೇಳಿದರು.

click me!