ಕೋಟಾ ಜಿಲ್ಲಾಡಳಿತವು ಗುರುವಾರ ಎಲ್ಲಾ ಹಾಸ್ಟೆಲ್‌ಗಳು ಮತ್ತು ಪೇಯಿಂಗ್ ಗೆಸ್ಟ್ (ಪಿಜಿ)ಗಳಲ್ಲಿ ವಿದ್ಯಾರ್ಥಿಗಳಿಗೆ ಮಾನಸಿಕ ಬೆಂಬಲ ಮತ್ತು ಭದ್ರತೆಯನ್ನು ಒದಗಿಸಲು ಎಲ್ಲಾ ಕೊಠಡಿಗಳಲ್ಲಿ ಸ್ಪ್ರಿಂಗ್-ಲೋಡೆಡ್ ಫ್ಯಾನ್‌ಗಳನ್ನು ಅಳವಡಿಸಲು ಆದೇಶಿಸಿದೆ.
ಕೋಟಾ (ಆಗಸ್ಟ್ 18, 2023): ರಾಜಸ್ಥಾನದ ಕೋಟಾ ಅಂದರೆ ವಿದ್ಯಾರ್ಥಿಗಳ ಕೋಚಿಂಗ್ ಹಬ್. ಹೆಚ್ಚು ವಿದ್ಯಾರ್ಥಿಗಳು ಕೋಚಿಂಗ್, ಶಾಲೆ - ಕಾಲೇಜುಗಳಿಗೆ ಹೋಗುತ್ತಾರೆ. ಇನ್ನು, ಇತ್ತೀಚೆಗೆ ಅಲ್ಲಿ ಸರಣಿ ಆತ್ಮಹತ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗಟ್ಟಲು ಕೋಟಾ ಜಿಲ್ಲಾಡಳಿತ ವಿಚಿತ್ರ ಕ್ರಮ ಕೈಗೊಂಡಿದೆ.
ಕೋಟಾ ಜಿಲ್ಲಾಡಳಿತವು ಗುರುವಾರ ಎಲ್ಲಾ ಹಾಸ್ಟೆಲ್‌ಗಳು ಮತ್ತು ಪೇಯಿಂಗ್ ಗೆಸ್ಟ್ (ಪಿಜಿ)ಗಳಲ್ಲಿ "ವಿದ್ಯಾರ್ಥಿಗಳಿಗೆ ಮಾನಸಿಕ ಬೆಂಬಲ ಮತ್ತು ಭದ್ರತೆಯನ್ನು ಒದಗಿಸಲು" ಎಲ್ಲಾ ಕೊಠಡಿಗಳಲ್ಲಿ ಸ್ಪ್ರಿಂಗ್-ಲೋಡೆಡ್ ಫ್ಯಾನ್‌ಗಳನ್ನು ಅಳವಡಿಸಲು ಆದೇಶಿಸಿದೆ. 21 ಸರಣಿ ಆತ್ಮಹತ್ಯೆಗಳು ದೇಶದ ಕೋಚಿಂಗ್ ಹಬ್ ಅನ್ನು ಅಲುಗಾಡಿಸಿದ್ದು, ರಾಜಸ್ಥಾನ ಪಟ್ಟಣದಲ್ಲಿ ತುರ್ತು ಸುಧಾರಣೆಗಳ ಕರೆಗಳನ್ನು ಪ್ರೇರೇಪಿಸಿದೆ.
undefined
ಇದನ್ನು ಓದಿ: ರಾಜಸ್ಥಾನದ ಕೋಟಾದ ರಸ್ತೆಗಳಲ್ಲಿ ಬೃಹತ್ ಮೊಸಳೆಗಳ ತಿರುಗಾಟ: ವಿಡಿಯೋ ವೈರಲ್
ಈ ಸಂಬಂಧ ಕೋಟಾ ಜಿಲ್ಲಾಧಿಕಾರಿ ಓಂ ಪ್ರಕಾಶ್ ಬಂಕರ್ ಆದೇಶ ಹೊರಡಿಸಿದ್ದು, ‘’ಕೋಟಾದಲ್ಲಿ ಓದುತ್ತಿರುವ/ವಾಸಿಸುವ ವಿದ್ಯಾರ್ಥಿಗಳಿಗೆ ಮಾನಸಿಕ ಬೆಂಬಲ ಮತ್ತು ಭದ್ರತೆಯನ್ನು ಒದಗಿಸಲು ಮತ್ತು ಕೋಟಾ ನಗರದಲ್ಲಿ ಕೋಚಿಂಗ್ ವಿದ್ಯಾರ್ಥಿಗಳ ಆತ್ಮಹತ್ಯೆಯನ್ನು ತಡೆಯಲು, ರಾಜ್ಯದ ಎಲ್ಲಾ ಹಾಸ್ಟೆಲ್/ಪಿಜಿ ನಿರ್ವಾಹಕರು ಶನಿವಾರದ ಸಭೆಯಲ್ಲಿ ಚರ್ಚಿಸಿದಂತೆ ಪ್ರತಿ ಕೊಠಡಿಯಲ್ಲಿನ ಫ್ಯಾನ್‌ಗಳಲ್ಲಿ ಭದ್ರತಾ ಸ್ಪ್ರಿಂಗ್ ಸಾಧನವನ್ನು ಸ್ಥಾಪಿಸಲು ನಿರ್ದೇಶಿಸಲಾಗಿದೆ’’ ಎಂದು ತಿಳಿಸಿದ್ದಾರೆ.
ಶನಿವಾರದ ಸಭೆಯಲ್ಲಿ, ಜಿಲ್ಲಾಡಳಿತವು ಕೋಚಿಂಗ್ ಇನ್‌ಸ್ಟಿಟ್ಯೂಟ್‌ಗಳು, ಹಾಸ್ಟೆಲ್‌ಗಳು ಮತ್ತು ಪಿಜಿಗಳ ಮಾಲೀಕರನ್ನು ಡಿಸೆಂಬರ್ 2022 ರಲ್ಲಿ ಹೊರಡಿಸಿದ ಆದೇಶವನ್ನು ಪಾಲಿಸುವಂತೆ ಒತ್ತಾಯಿಸಿದೆ. ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ರಜೆ, ಗರಿಷ್ಠ 80 ತರಗತಿಯ ಸಾಮರ್ಥ್ಯ ಮತ್ತು ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಕಡ್ಡಾಯ ಮಾನಸಿಕ ಮೌಲ್ಯಮಾಪನಗಳನ್ನು ಕಡ್ಡಾಯಗೊಳಿಸಿದೆ. ಆದೇಶವನ್ನು ಅನುಸರಿಸದ ವಸತಿ ಮತ್ತು ಸಂಸ್ಥೆಗಳನ್ನು "ವಶಪಡಿಸಿಕೊಳ್ಳಲಾಗುವುದು ಮತ್ತು ಮಾಲೀಕರ ವಿರುದ್ಧ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು" ಎಂದೂ ನೋಟಿಸ್‌ನಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಬಿಜೆಪಿ ನಾಯಕನ ಜತೆಯ ರಾಸಲೀಲೆ ಫೋಟೋ ವೈರಲ್: ಕೇಸರಿ ಪಕ್ಷದ ನಾಯಕಿ ಸೂಸೈಡ್!
ಆತ್ಮಹತ್ಯೆ ತಡೆಗಟ್ಟುವ ಫ್ಯಾನ್!
ಈ ಸೀಲಿಂಗ್ ಫ್ಯಾನ್‌ಗಳಲ್ಲಿನ ಸ್ಪ್ರಿಂಗ್‌ಗಳು ಹೆಚ್ಚು ಲೋಡ್ ಆದ ಕೂಡಲೇ ಅಥವಾ ತೂಕ ಹೆಚ್ಚಿದ ಕೂಡಲೇ ಅನ್‌ಕಾಯಿಲ್ ಮಾಡಲು ವಿನ್ಯಾಸಗೊಳಿಸಲಾಗಿದೆ. ಇದರಿಂದ ಸೀಲಿಂಗ್‌ನಿಂದ ಫ್ಯಾನ್ ಅನ್ನು ಪರಿಣಾಮಕಾರಿಯಾಗಿ ಬೇರ್ಪಡಿಸುತ್ತದೆ ಮತ್ತು ನೇಣು ಹಾಕಿಕೊಳ್ಳುವುದನ್ನು ತಡೆಯುತ್ತದೆ. ಅಲ್ಲದೆ, ಆತ್ಮಹತ್ಯೆಗೆ ಯತ್ನಿಸಿದ ಸಂದರ್ಭದಲ್ಲಿ ಎಚ್ಚರಿಕೆ ನೀಡುವ ಸಂವೇದಕಗಳನ್ನು ಸಹ ಸ್ಥಾಪಿಸಿದ್ದು, ಇದರಿಂದ ಅಲಾರಂ ಹೊಡೆದುಕೊಳ್ಳುತ್ತದೆ ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: ಸಲಿಂಗಿ ಎಂದು ಹೀಯಾಳಿಸ್ತಿದ್ದ ಸೀನಿಯರ್ಸ್: ಹಾಸ್ಟೆಲ್ ಬಾಲ್ಕನಿಯಿಂದ ಬಿದ್ದು ವಿದ್ಯಾರ್ಥಿ ಆತ್ಮಹತ್ಯೆ