ವಿಮಾನದಲ್ಲಿ ಸೀಟಿಗಾಗಿ ಸಾಧ್ವಿ ಪ್ರಜ್ಞಾ ರಾದ್ಧಾಂತ!

Published : Dec 23, 2019, 08:44 AM IST
ವಿಮಾನದಲ್ಲಿ ಸೀಟಿಗಾಗಿ ಸಾಧ್ವಿ ಪ್ರಜ್ಞಾ ರಾದ್ಧಾಂತ!

ಸಾರಾಂಶ

ವಿಮಾನದಲ್ಲಿ ಸೀಟಿಗಾಗಿ ಸಾಧ್ವಿ ಪ್ರಜ್ಞಾ ರಾದ್ಧಾಂತ| ತುರ್ತು ನಿರ್ಗಮನ ದ್ವಾರಕ್ಕೆ ಸನಿಹದ ಆಸನ| ಕ್ಯಾತೆ ತೆಗೆದ ಸಾಧ್ವಿ, ವಿಡಿಯೋ ವೈರಲ್

ನವದೆಹಲಿ[ಡಿ.23]: ಸದಾ ವಿವಾದಗಳಿಂದಲೇ ಸುದ್ದಿಯಾಗುತ್ತಿರುವ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ಅವರು ವಿಮಾನದಲ್ಲಿ ಸೀಟಿಗಾಗಿ ರಾದ್ಧಾಂತ ಸೃಷ್ಟಿಸಿದ ಘಟನೆ ಬೆಳಕಿಗೆ ಬಂದಿದೆ.

ಶನಿವಾರ ಸಾಧ್ವಿ ದೆಹಲಿಯಿಂದ ಭೋಪಾಲ್‌ಗೆ ತೆರಳಲು ಟಿಕೆಟ್‌ ಕಾದಿರಿಸಿದ್ದರು. ಅದು ತುರ್ತು ನಿರ್ಗಮನ ದ್ವಾರಕ್ಕೆ ಸನಿಹದಲ್ಲಿರುವ ಆಸನವಾಗಿತ್ತು. ಸಾಧ್ವಿ ಗಾಲಿ ಕುರ್ಚಿಯಲ್ಲಿ ಬಂದು ಆಸನದಲ್ಲಿ ಕೂರಲು ಮುಂದಾದರು.

ಗಾಲಿ ಕುರ್ಚಿ ಪ್ರಯಾಣಿಕರಿಗೆ ಆ ಸಾಲಿನ ಆಸನಗಳನ್ನು ನೀಡಲಾಗದ ಕಾರಣ, ಪಕ್ಕದ ಸಾಲಿನಲ್ಲಿ ಕೂರುವಂತೆ ವಿಮಾನ ಸಿಬ್ಬಂದಿ ಸೂಚಿಸಿದರು. ಇದಕ್ಕೆ ಸಾಧ್ವಿ ಒಪ್ಪಲಿಲ್ಲ. ಹೀಗಾಗಿ ವಿಮಾನ ಟೇಕಾಫ್‌ ವಿಳಂಬವಾಯಿತು. ಸಹಪ್ರಯಾಣಿಕರು ಮನವೊಲಿಸಿದರೂ ಸಾಧ್ವಿ ಮಣಿಯಲಿಲ್ಲ.

ಕೊನೆಗೆ ಇತರ ಪ್ರಯಾಣಿಕರು ಸಾಧ್ವಿಯನ್ನು ವಿಮಾನದಿಂದ ಕೆಳಗಿಳಿಸುವಂತೆ ಒತ್ತಾಯಿಸಿದರು. ಬಳಿಕ ಸಾಧ್ವಿ ಬೇರೆ ಆಸನದಲ್ಲಿ ಕುಳಿತರು ಎಂದು ಸ್ಪೈಸ್‌ ಜೆಟ್‌ ಸಂಸ್ಥೆ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ನನ್ನ ಜೊತೆಗೂ ಬಾ: ಗೆಳೆಯನ ಗರ್ಲ್‌ಫ್ರೆಂಡ್‌ಗೆ ಸಂದೇಶ: ಪ್ರಶ್ನಿಸಿದ್ದಕ್ಕೆ ಸ್ನೇಹಿತನನ್ನೇ ಕೊಂದು ಪೀಸ್ ಪೀಸ್ ಮಾಡಿದ
ರಣವೀರ್ ನಟನೆಯ ಧುರಂಧರ್ ಸಿನಿಮಾದ ಕತೆ ಭಾರತೀಯ ಸೇನೆಯ ಹೀರೋ ಮೇಜರ್ ಮೋಹಿತ್ ಶರ್ಮಾ ಅವರದ್ದಾ?