ಭಾರತದ ಅನಿಶ್ಚಿತತೆಗೆ ಚಿಂತೆಗೀಡಾದ ಬಾಂಗ್ಲಾ: ಮೋದಿ ಚಿಂತೆ ಬಿಡಿ ಅಂದ್ರು ಕಣ್ಲಾ!

Suvarna News   | Asianet News
Published : Dec 22, 2019, 08:34 PM IST
ಭಾರತದ ಅನಿಶ್ಚಿತತೆಗೆ ಚಿಂತೆಗೀಡಾದ ಬಾಂಗ್ಲಾ: ಮೋದಿ ಚಿಂತೆ ಬಿಡಿ ಅಂದ್ರು ಕಣ್ಲಾ!

ಸಾರಾಂಶ

ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟ| ನಿರಂತರ ಪ್ರತಿಭಟನೆಗೆ ಚಿಂತೆಗೀಡಾದ ನೆರೆಯ ಬಾಂಗ್ಲಾದೇಶ| ‘ಭಾರತದಲ್ಲಿನ ಅಸ್ಥಿರತೆ ಬಾಂಗ್ಲಾದೇಶದ ಮೇಲೆ ಪರಿಣಾಮ ಬೀರುತ್ತದೆ’| ಬಾಂಗ್ಲಾದೇಶದ ವಿದೇಶಾಂಗ ಸಚಿವ ಎ.ಕೆ ಅಬ್ದುಲ್ ಮೊಮೆನ್ ಅಭಿಪ್ರಾಯ| ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಜೊತೆ ಮಾತನಾಡಿದ ಪ್ರಧಾನಿ ಮೋದಿ| 

ಢಾಕಾ(ಡಿ.22): ಪೌರತ್ವ ಕಾಯ್ದೆ ಹಾಗೂ NRC ಭಾರತದ ಆಂತರಿಕ ವಿಷಯಗಳೇ ಆಗಿದ್ದರೂ, ಅದು ನೆರೆ ರಾಷ್ಟ್ರಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಬಾಂಗ್ಲಾದೇಶದ ವಿದೇಶಾಂಗ ಸಚಿವ ಎ.ಕೆ ಅಬ್ದುಲ್ ಮೊಮೆನ್ ಹೇಳಿದ್ದಾರೆ. 

ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ NRCಯಿಂದ ಭಾರತದಲ್ಲಿ ಉಂಟಾಗಿರುವ ಅಸ್ಥಿರತೆ, ನೆರೆ ರಾಷ್ಟ್ರಗಳ ಮೇಲೂ ಪರಿಣಾಮ ಬೀರುತ್ತದೆ ಎಂದು ಅಬ್ದುಲ್ ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಜಾರಿಯ ಅಸಲಿಯತ್ತು(?) ಹೇಳಿದ ಇಮ್ರಾನ್!

 ಈ ಮಧ್ಯೆ ಪ್ರಧಾನಿ ಮೋದಿ ಅವರು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ಮಾತನಾಡಿದ್ದು, ಭಾರತದಲ್ಲಿನ ಸದ್ಯದ ಪರಿಸ್ಥಿತಿ ಬಾಂಗ್ಲಾದೇಶದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

ಎಲ್ಲಿದೆ ಬಂಧನ ಶಿಬಿರ?: ದೆಹಲಿಯಲ್ಲಿ ಪ್ರಧಾನಿ ಸಮರ!

ನಾವು ಭಾರತದ ನಂ.1 ಮಿತ್ರ ರಾಷ್ಟ್ರ. ಅಲ್ಲೇನಾದರೂ ಅಸ್ಥಿರತೆ, ಅನಿಶ್ಚಿತತೆ ಉಂಟಾದರೆ ಅದು ನಮ್ಮ ಮೇಲೆಯೂ ಪರಿಣಾಮ ಬೀರಲಿದೆ. ಇದಷ್ಟೇ ನಮ್ಮ ಭಯ ಎಂದು ಮೊಮೆನ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭೂರೂಪ ಬದಲಾಯಿಸಿದ ಪ್ರವಾಹ.. ವಿಶ್ವದ ಅತಿದೊಡ್ಡ ನದಿ ಮಜುಲಿ ದ್ವೀಪ ಬಗ್ಗೆ ನಿಮಗೆ ಗೊತ್ತೇ?
ಅಗರ್ಭ ಶ್ರೀಮಂತನೆಂದು ಎಂಜಿನಿಯರ್‌ನನ್ನ ಮದುವೆಯಾದಳು... ಫಸ್ಟ್‌ ನೈಟ್‌ನಲ್ಲೇ ಬಯಲಾಯ್ತು ಕರಾಳ ಸತ್ಯ!