ಸಂಸ್ಕೃತ ಮಾತನಾಡಿದ್ರೆ ಮಧುಮೇಹ, ಕೊಬ್ಬು ಮಾಯ: ಬಿಜೆಪಿ ಸಂಸದ!

By Suvarna NewsFirst Published Dec 13, 2019, 8:23 AM IST
Highlights

ಸಂಸ್ಕೃತ ಮಾತನಾಡಿದ್ರೆ ಮಧುಮೇಹ, ಕೊಬ್ಬು ಮಾಯ| ಬಿಜೆಪಿ ಸಂಸದ ಗಣೇಶ್‌ ಸಿಂಗ್‌ ಹೇಳಿಕೆ

ನವದೆಹಲಿ[ಡಿ.13]: ದಿನನಿತ್ಯ ಸಂಸ್ಕೃತದಲ್ಲಿ ಮಾತನಾಡುವುದರಿಂದ ಮನುಷ್ಯನ ನರಮಂಡಲದ ಸಾಮರ್ಥ್ಯ ವೃದ್ಧಿಯಾಗುತ್ತದೆ ಹಾಗೂ ಮಧುಮೇಹ ಮತ್ತು ಕೊಬ್ಬು ನಿಯಂತ್ರಣಕ್ಕೂ ಇದು ಸಹಕಾರಿಯಾಗಲಿದೆ ಎಂಬುದು ಅಮೆರಿಕದ ಸಂಶೋಧನೆಯೊಂದರಿಂದ ರುಜುವಾತಾಗಿದೆ ಎಂದು ಬಿಜೆಪಿ ಸಂಸದ ಗಣೇಶ್‌ ಸಿಂಗ್‌ ಹೇಳಿದ್ದಾರೆ.

ಸಂಸ್ಕೃತ ವಿವಿಗಳ ಮಸೂದೆ ಮೇಲಿನ ಚರ್ಚೆಯಲ್ಲಿ ಮಾತನಾಡಿ,‘ಸಂಸ್ಕೃತದಲ್ಲಿ ಕಂಪ್ಯೂಟರ್‌ ಪ್ರೋಗ್ರಾಂ ಮಾಡಿದಲ್ಲಿ, ದೋಷರಹಿತವಾಗಿರುತ್ತವೆ ಎಂಬುದಾಗಿ ಅಮೆರಿಕದ ನಾಸಾ ಪ್ರತಿಪಾದಿಸಿದೆ’ ಎಂದರು.

ಏತನ್ಮಧ್ಯೆ, ಆಂಗ್ಲಭಾಷೆಯ ಬ್ರದರ್‌(ಸೋದರ) ಹಾಗೂ ಕೌ(ದನ) ಎಂಬ ಪದಗಳು ಸಂಸ್ಕೃತದಿಂದಲೇ ಹುಟ್ಟಿಕೊಂಡಿವೆ ಎಂದು ಸಚಿವ ಪ್ರತಾಪ್‌ ಚಂದ್ರ ಸಾರಂಗಿ ಹೇಳಿದರು.

click me!