ಮಹಿಳಾ ದೌರ್ಜನ್ಯದ ಕೇಸ್‌ 21 ದಿನದಲ್ಲಿ ಇತ್ಯರ್ಥ: ಆಂಧ್ರದಲ್ಲಿ ಹೊಸ ಕಾಯ್ದೆ

By Suvarna News  |  First Published Dec 12, 2019, 3:04 PM IST

ಮಹಿಳಾ ದೌರ್ಜನ್ಯದ ಕೇಸ್‌ 21 ದಿನದಲ್ಲಿ ಇತ್ಯರ್ಥ| ಉನ್ನಾವ್‌ ಸೇರಿದಂತೆ ದೇಶಾದ್ಯಂತ ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚಿದ ಬೆನ್ನಲ್ಲೇ ಆಂಧ್ರದಲ್ಲಿ ಹೊಸ ಕಾಯ್ದೆ


ಅಮರಾವತಿ[ಡಿ.12]: ಹೈದರಾಬಾದ್‌ನ ದಿಶಾ, ಉತ್ತರ ಪ್ರದೇಶದ ಉನ್ನಾವ್‌ ಸೇರಿದಂತೆ ದೇಶಾದ್ಯಂತ ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚಿದ ಬೆನ್ನಲ್ಲೇ, ಇಂಥ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್‌. ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ಸರ್ಕಾರ ಕ್ರಮಕ್ಕೆ ಮುಂದಾಗಿದೆ.

ನಾನು 3 ಮದುವೆಯಾದ್ರೆ ನಿಮ್ಗೇನು ಪ್ರಾಬ್ಲಂ? ಸಿಎಂ ಮೇಲೆ ಪವನ್ ಕಲ್ಯಾಣ್ ಗರಂ!

Tap to resize

Latest Videos

ಅದರಂತೆ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು 21 ದಿನಗಳಲ್ಲಿ ಇತ್ಯರ್ಥ ಪಡಿಸುವ ಹಾಗೂ ಇಂಥ ಪ್ರಕರಣಗಳ ದೋಷಿಗಳಿಗೆ ಮರಣದಂಡನೆ ವಿಧಿಸುವ ಕರಡು ಮಸೂದೆಯನ್ನು ಆಂಧ್ರಪ್ರದೇಶ ಸಿಎಂ ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ಸಚಿವ ಸಂಪುಟ ಅಂಗೀಕರಿಸಿದೆ.

ಯೋಜನೆಗೆ ಕಲಾಂ ಬದಲು ತಂದೆ ಹೆಸರಿಡಲು ಬಯಸಿದ್ದ ಜಗನ್: ಸುಮ್ನೆ ಬಿಡುತ್ತಾ ವಿದ್ಯಾರ್ಥಿ ಸಮೂಹ?

ಅಲ್ಲದೆ, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ಇತ್ಯರ್ಥಕ್ಕಾಗಿ ವಿಶೇಷ ನ್ಯಾಯಾಲಯಗಳ ಸ್ಥಾಪನೆಯ ಅಂಶಗಳನ್ನು ಕೂಡಾ ಕರಡು ಮಸೂದೆ ಹೊಂದಿದೆ. ತೆಲಂಗಾಣದಲ್ಲಿ ಪಶುವೈದ್ಯೆಯ ಗ್ಯಾಂಗ್‌ರೇಪ್‌ ಮತ್ತು ಹತ್ಯೆಗೀಡಾದ ಪಶುವೈದ್ಯೆಯ ನೆನಪಿನಾರ್ಥವಾಗಿ ಆಂಧ್ರಪ್ರದೇಶದ ಅಪರಾಧ ಕಾನೂನಿಗೆ ತಿದ್ದುಪಡಿ ತಂದು ರೂಪಿಸಲಾಗುವ ಕಾನೂನಿಗೆ ‘ಆಂಧ್ರಪ್ರದೇಶ ದಿಶಾ ಕಾನೂನು’ ಎಂದು ನಾಮಕರಣ ಮಾಡಲಾಗುತ್ತದೆ ಎನ್ನಲಾಗಿದೆ.

ಡಿಸೆಂಬರ್ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!