
ಪಣಜಿ: ದಕ್ಷಿಣ ಗೋವಾ ಜಿಲ್ಲಾಡಳಿವು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಗೆ 60 ದಿನಗಳ ಕಾಲ ಜಿಲ್ಲೆಯೊಳಗೆ ಪ್ರವೇಶಿಸದಂತೆ ನಿಷೇಧ ಹೇರಿದೆ. ಮುಂದಿನ 60 ದಿನಗಳ ಕಾಲ ಜಿಲ್ಲೆಯ ವ್ಯಾಪ್ತಿಯೊಗಳಗೆ ಪ್ರವೇಶಿಸದಂತೆ ಮುತಾಲಿಕ್‌ಗೆ ಜಿಲ್ಲಾಡಳಿತವು ಆದೇಶ ಹೊರಡಿಸಿದೆ. ಪ್ರಖರ ಹಿಂದುತ್ವವಾದಿಯಾಗಿರುವ ಮುತಾಲಿಕ್, ಜಿಲ್ಲೆಯಲ್ಲಿ ಕೋಮು ಭಾವನೆಗೆ ಧಕ್ಕೆ ತರುವಂತಹ, ಧರ್ಮಗಳ ಮಧ್ಯೆ ದ್ವೇಷ ಹರಡುವ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತಾರೆ. ಇದು ಸಾಮಾಜಿಕ ಅಶಾಂತಿಗೆ ಕಾರಣವಾಗುತ್ತದೆ. ಇದನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ಈ ಹಿಂದೆಯೂ ಮುತಾಲಿಕ್‌ಗೆ ದಕ್ಷಿಣ ಗೋವಾ ಜಿಲ್ಲಾಧಿಕಾರಿಗಳು ಜಿಲ್ಲೆ ಪ್ರವೇಶಿಸದಂತೆ ನಿಷೇಧ ಹೇರಿದ್ದರು.
ಉಡುಪಿ: ಸುನಿಲ್ ಕುಮಾರ್ ನಾಲಿಗೆ ಬಿಗಿ ಹಿಡಿದು ಮಾತಾಡಬೇಕು, ಮುತಾಲಿಕ್ ಆಕ್ರೋಶ
ಹಿಂದೂಗಳು ಮನೆಯಲ್ಲಿ ಖಡ್ಗ, ತಲ್ವಾರ್ ಇಟ್ಟುಕೊಳ್ಳಿ: ಮುತಾಲಿಕ್
ಪ್ರತಿಯೊಬ್ಬ ಹಿಂದೂಗಳ ಮನೆಯಲ್ಲಿ ಖಡ್ಗ, ತಲವಾರ್, ಮತ್ತಿತರ ಜೀವರಕ್ಷಕ ಆಯುಧಗಳನ್ನು ಇಟ್ಟುಕೊಳ್ಳಬೇಕು. ಆಯುಧಗಳನ್ನು ಇಟ್ಟುಕೊಂಡವರನ್ನೆಲ್ಲಾ ಬಂಧಿಸುವುದಾದರೆ ಮೊದಲು ಕೈಯಲ್ಲಿ ಹತ್ತಾರು ಆಯುಧಗಳನ್ನು ಹಿಡಿದ ದುರ್ಗಾದೇವಿಯನ್ನು, ಗದೆ ಹಿಡಿದ ಹನುಮಂತನನ್ನು ಬಂಧಿಸಲಿ ನೋಡೋಣ ಎಂದು ಶ್ರೀರಾಮ ಸೇನೆ ಮುಖಂಡ ಮುತಾಲಿಕ್ ಇತ್ತೀಚೆಗೆ ಸವಾಲು ಹಾಕಿದ್ದರು. ಬಾಗಲಕೋಟೆ ನಗರದಲ್ಲಿ ಭಾನುವಾರ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೂಗಳು ಯಾರನ್ನೋ ಹೊಡೆಯಲು ಅಲ್ಲ, ಬದಲಿಗೆ ಗೋವುಗಳು ಹಾಗೂ ನಮ್ಮ ಅಕ್ಕ-ತಂಗಿಯರ ಹಾಗೂ ರಾಷ್ಟ್ರ, ಮಠ-ಮಂದಿರಗಳ ರಕ್ಷಣೆಗೆ ಆಯುಧಗಳನ್ನು ಬಳಸಬೇಕು ಎಂದರು.
ಹಿಂದುಗಳನ್ನು ಕೊಲೆ ಮಾಡಿದವರನ್ನು ಸನ್ಮಾನಿಸುವುದೇ ಇಸ್ಲಾಂ ಸಂಸ್ಕೃತಿ: ಪ್ರಮೋದ್ ಮುತಾಲಿಕ್ ಆರೋಪ
ಹಿಂದೂ ಕಾರ್ಯಕರ್ತರು, ಹೋರಾಟಗಾರರಿಗೆ ಹಾಗೂ ನನ್ನಂಥವರಿಗೆ ಬಿಜೆಪಿಯಿಂದ ದ್ರೋಹ ಮಾಡಲಾಗಿದೆ. ನಮ್ಮ ರಕ್ತವನ್ನು ಬೆವರಾಗಿ ಹರಿಸಿ ಅಧಿಕಾರದ ಗದ್ದುಗೆಗೆ ಏರಿಸಿದ್ದಕ್ಕಾದರೂ ಕರುಣೆ ಇಲ್ಲದ ಬಿಜೆಪಿಗೆ ಈ ಬಾರಿಯ ಚುನಾವಣೆಯಲ್ಲಿ ಕಾರ್ಕಳದಲ್ಲಿ ಸ್ಪರ್ಧಿಸಿ ಗೆದ್ದು ತೋರಿಸುತ್ತೇವೆ ಎಂದು ಹೇಳಿದರು. ಹಿಂದೂ ಹುಡುಗಿಯರಿಗೂ ಉದ್ಯೋಗ: ಲವ್ ಜಿಹಾದ್‌ಗೆ ನಮ್ಮ ಒಬ್ಬ ಹುಡುಗಿ ಹೋದರೆ ನಮ್ಮ ತರುಣರು 10 ಮುಸ್ಲಿಮ್ ಹುಡುಗಿರನ್ನು ಕರೆತರುವ ತಾಕತ್ತು ಹೊಂದಿದ್ದಾರೆ. ಹಾಗೆ ಕರೆತಂದರೆ ಶ್ರೀರಾಮಸೇನೆ ಅಂಥ ಯುವಕರಿಗೆ ಉದ್ಯೋಗ ಒದಗಿಸಲು ನೆರವಾಗುವ ಜತೆಗೆ ರಕ್ಷಣೆಯನ್ನೂ ನೀಡಲಿದೆ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ