ಸೋನಿಯಾ ಗಾಂಧಿ ತ್ಯಾಗದಿಂದ ಮಾತ್ರ ನಾವು ಕ್ರಿಸ್ಮಸ್ ಆಚರಿಸಲು ಸಾಧ್ಯವಾಗಿದೆ, ರೇವಂತ್ ರೆಡ್ಡಿ ವಿವಾದ

Published : Dec 21, 2025, 07:04 PM IST
Revanth Reddy Sonia Gandhi

ಸಾರಾಂಶ

ಸೋನಿಯಾ ಗಾಂಧಿ ತ್ಯಾಗದಿಂದ ಮಾತ್ರ ನಾವು ಕ್ರಿಸ್ಮಸ್ ಆಚರಿಸಲು ಸಾಧ್ಯವಾಗಿದೆ, ರೇವಂತ್ ರೆಡ್ಡಿ ವಿವಾದ ಸೃಷ್ಟಿಸಿದ್ದಾರೆ. ಗಾಂಧಿ ಕುಟುಂಬ, ಕಾಂಗ್ರೆಸ್ ನಾಯಕರ ಮೆಚ್ಚಿಸಲು ನೀಡಿದ ಹೇಳಿಕೆ ಇದೀಗ ಭಾರಿ ಕೋಲಾಹಲ ಸೃಷ್ಟಿಸಿದೆ. 

ಹೈದರಾಬಾದ್ (ಡಿ.21) ದೇಶದೆಲ್ಲೆಡೆ ಕ್ರಿಸ್ಮಸ್ ಹಬ್ಬದ ಸಂಭ್ರಮ ಕಳೆಗಟ್ಟಿದೆ ಕ್ರಿಶ್ಚಿಯನ್ ಸಮುದಾಯ ಕ್ರಿಸ್ಮಸ್ ಅದ್ಧೂರಿ ತಯಾರಿ ನಡೆಸಿದೆ. ಆದರೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ರಾಜಕೀಯ ಹಾಗೂ ಮತಗಳನ್ನು ಬೆರೆಸಿ ನೀಡಿದ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ. ದಕ್ಷಿಣ ಭಾರತದಲ್ಲಿ ಅದರಲ್ಲೂ ಪ್ರಮುಖವಾಗಿ ತೆಲಂಗಾಣದಲ್ಲಿ ಕ್ರಿಸ್ಮಸ್ ಆಚರಣೆ ಕೇವಲ ಸೋನಿಯಾ ಗಾಂಧಿ ತ್ಯಾಗದಿಂದ ಮಾತ್ರ ಸಾಧ್ಯವಾಗಿದೆ ಎಂದಿದ್ದಾರೆ. ಸೋನಿಯಾ ಗಾಂಧಿ ತ್ಯಾಗದಿಂದ ನಾವಲ್ಲಾ ಇಂದು ಸಂಭ್ರಮದಿಂದ ಕ್ರಿಸ್ಮಸ್ ಆಚರಿಸುತ್ತಿದ್ದೇವೆ ಎಂದಿದ್ದಾರೆ. ರೇವಂತ್ ರೆಡ್ಡಿ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. ರಾಜಕೀಯ ಜೊತೆಗೆ ಧರ್ಮಗಳನ್ನು ಬೆರೆಸುತ್ತಿರುವುದು ಮಾತ್ರವಲ್ಲ, ಗಾಂಧಿ ಕುಟಂಬ ಮೆಚ್ಚಿಸಲು ಕ್ರಿಶ್ಟಿಯನ್, ಮುಸ್ಲಿಮರ ಒಲೈಕೆಗಾಗಿ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದಿದೆ.

ಸರ್ಕಾರದಿಂದ ಕ್ರಿಸ್ಮಸ್ ಹಬ್ಬ ಆಯೋಜನೆ

ತೆಲಂಗಾಣ ಸರ್ಕಾರ ಹೈದರಾಬಾದ್‌ನ ಲಾಲ್ ಬಹುದ್ದೂರ್ ಕ್ರೀಡಾಂಗಣದಲ್ಲಿ ಕ್ರಿಸ್ಮಸ್ ಹಬ್ಬ ಆಚರಣೆ ಆಯೋಜಿಸಿದೆ. ಅದ್ಧೂರಿ ಹಬ್ಬ ಆಚರಿಸಿದೆ. ಕ್ರೈಸ್ತ ಬಾಂಧವರ ಆಹ್ವಾನಿಸಿ ಹಬ್ಬ ಆಚರಿಸಿದೆ. ಈ ವೇಳೆ ಮಾತನಾಡಿದ ರೇವಂತ್ ರೆಡ್ಡಿ, ನಾವು ಕ್ರಿಸ್ಮಸ್ ಆಚರಣೆ ಮಾಡುವ ಹಿಂದೆ ಸೋನಿಯಾ ಗಾಂಧಿಯ ಅತೀ ದೊಡ್ಡ ತ್ಯಾಗವಿದೆ. ಡಿಸೆಂಬರ್ ತಿಂಗಳು ಭಾರಿ ವಿಶೇಷ. ಕಾರಣ ಇದೇ ತಿಂಗಳು ಸೋನಿಯಾ ಗಾಂಧಿ ಹುಟ್ಟು ಹಬ್ಬ. ಇದೇ ತಿಂಗಳು ಕ್ರಿಸ್ಮಸ್ ಹಬ್ಬದ ಆಚರಣೆಯೂ ಇದೆ. ಇದೇ ತಿಂಗಳು ತೆಲಂಗಾಣ ರಾಜ್ಯವಾಗಿ ಉದಯವಾಗಿತ್ತು ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ.

ಹಬ್ಬ ಆಚರಣೆ ಕೆಲವೇ ಧರ್ಮಕ್ಕೆ ಸೀಮಿತ ಯಾಕೆ?

ರೇವಂತ್ ರೆಡ್ಡಿ ಹಾಗೂ ಕಾಂಗ್ರೆಸ್ ತನ್ನ ಒಲೈಕೆ ಸಂಪ್ರದಾಯ ಮುಂದುವರಿಸಿದೆ ಎಂದು ಬಿಜಪಿ ವಾಗ್ದಾಳಿ ನಡೆಸಿದೆ. ರೇವಂತ್ ರೆಡ್ಡಿ ಕ್ರಿಸ್ಮಸ್ ಹಬ್ಬವನ್ನೂ ಗಾಂಧಿ ಫ್ಯಾಮಿಲಯ ತ್ಯಾಗ ಎಂದು ಬಣ್ಣಿಸಿದ್ದಾರೆ. ಇದು ಕ್ರಿಶ್ಚಿಯನ್ನರ ಹಬ್ಬ, ಇದಕ್ಕೆ ರಾಜಕೀಯ ಬೆರೆಸುವುದು ಯಾಕೆ ಎಂದು ಬಿಜೆಪಿ ಪ್ರಶ್ನಿಸಿದೆ. ರೇವಂತ್ ರೆಡ್ಡಿ ಎಲ್ಲೆಲ್ಲಾ ಒಲೈಕೆ ಮಾಡಲು ಸಾಧ್ಯ ಅಲ್ಲಿ ಮತಗಳನ್ನು, ಸಮುದಾಯಗಳನ್ನು ಒಲೈಕೆ ಮಾಡುತ್ತಿದ್ದಾರೆ. ಸೋನಿಯಾ ಗಾಂಧಿಯ ಸರ್ಕಾರ ಅಧಿಕಾರದಲ್ಲಿದ್ದಾಗ ಜನಪಥ ನಿವಾಸದಲ್ಲಿ ಕ್ರಿಸ್ಮಸ್ ಆಚರಿಸಿದ್ದರು, ಆದರೆ ಯಾವುದೇ ಹಿಂದೂಗಳ ಹಬ್ಬ ಆಚರಿಸಲಿಲ್ಲ. ಪ್ರಮುಖ ಸ್ಥಾನದಲ್ಲಿರುವ ನಾಯಕರು ಈ ರೀತಿ ಒಂದು ಸಮುದಾಯದ ಹಬ್ಬ ಆಚರಿಸಿ, ಮತ್ತೊಂದು ಸಮುದಾಯವನ್ನು ಕಡೆಗಣಿಸುವುದೇಕೆ ಎಂದು ಬಿಜೆಪಿ ಪ್ರಶ್ನಿಸಿದೆ. ಇದೀಗ ರೇವಂತ್ ರೆಡ್ಡಿ ಕೂಡ ಇದೇ ರೀತಿ ಸೋನಿಯಾ ಗಾಂಧಿ ಮಾರ್ಗ ಅನುಸರಿಸುತ್ತಿದ್ದಾರೆ ಎಂದು ಬಿಜೆಪಿ ಹೇಳಿದೆ.

ಪ್ರತಿಯೊಬ್ಬರು ಅವರವರ ಮತಗಳನ್ನು, ಧರ್ಮಗಳನ್ನು, ಹಬ್ಬಗಳನ್ನು ಆಚರಿಸುತ್ತಾರೆ. ಆದರೆ ಒಬ್ಬ ಮುಖ್ಯಮಂತ್ರಿ ಕೆಲವೇ ಸಮುದಾಯದ ಹಬ್ಬ ಆಚರಿಸುವುದು ಸರಿಯಲ್ಲ. ಆಚರಿಸಿದರೆ ಹಿಂದೂ ಸಮುದಾಯದ ಹಬ್ಬಗಳನ್ನು ಆಚರಿಸಬೇಕು. ಹಿಂದೂ ಹಬ್ಬ ಕಡೆಗಣಿಸಿ ಇತರ ಸಮುದಾಯ ಹಬ್ಬ ಆಚರಣೆ ಸರಿಯಲ್ಲ. ಆಚರಿಸಿದರೆ ಎಲ್ಲಾ ಸಮುದಾಯದ ಆಚರಿಸಬೇಕು ಎಂದು ಬಿಜೆಪಿ ಹೇಳಿದೆ.

ಬಿಜೆಪಿ ವಕ್ತಾರ ನಲಿನ್ ಕೊಹ್ಲಿ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ಮತ ಬ್ಯಾಂಕ್‌ಗಾಗಿ ಕಾಂಗ್ರೆಸ್ ಈ ರೀತಿ ಒಲೈಕೆ ಮಾಡುತ್ತಿದೆ. ಗಾಂಧಿ-ನೆಹರು ಕುಟುಂಬವನ್ನು ಒಲೈಕೆಗೆ ಈ ರೀತಿ ಮಾಡುತ್ತಿದ್ದಾರೆ ಎಂದಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಹಾರಾಷ್ಟ್ರ ಸ್ಥಳೀಯ ಚುನಾವಣೆ; ಬಿಜೆಪಿ ಮೈತ್ರಿಕೂಟಕ್ಕೆ ಭರ್ಜರಿ ಮುನ್ನಡೆ, ಮಕಾಡೆ ಮಲಗಿದ MVA
ವೈರಲ್ ಆಗ್ತಿದೆ ಕನ್ನಡದಲ್ಲಿ ಮುದ್ರಣಗೊಂಡಿರುವ 1948ರ ಮುಸ್ಲಿಂ ವಿವಾಹ ಆಮಂತ್ರಣ ಪತ್ರಿಕೆ