
ಗುವ್ಹಾಟಿ (ಡಿ.21) ಹೌದು ನಾನು ಚಹಾ ಮಾರಾಟಗಾರ, ನಾನು ಅಂದು ಚಹಾ ಮಾರದಿದ್ದರೆ ಇನ್ಯಾರು ಮಾಡುತ್ತಿದ್ದರು? ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮೋದಿ ಚಾಯ್ ವಾಲಾ ಅನ್ನೋ ಹೆಮ್ಮೆಯ ಮಾತು, ಆರೋಪ-ಟೀಕೆಗಳು ಎರಡೂ ಸಾಕಷ್ಟು ಬಾರಿ ಚರ್ಚೆಯಾಗಿದೆ. ಆದರೆ ಇದೀಗ ಮತ್ತೆ ಮೋದಿ ನಾನು ಚಹಾ ಮಾರಾಟಗಾರ ಎಂದು ಹೇಳಲು ಕಾರಣವೂ ಇದೆ. ಡಿಸೆಂಬರ್ ತಿಂಗಳ ಆರಂಭದಲ್ಲಿ ಕಾಂಗ್ರೆಸ್ ನಾಯಕಿ ಪ್ರಧಾನಿ ಮೋದಿಯ ಎಐ ಜನರೇಟೆಡ್ ವಿಡಿಯೋ ಪೋಸ್ಟ್ ಮಾಡಿದ್ದರು. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಚಹಾ ಮಾರಾಟ ಮಾಡುತ್ತಿರುವ ವಿಡಿಯೋ ಇದಾಗಿತ್ತು. ಈ ವಿಡಿಯೋಗೆ ಪ್ರಧಾನಿ ಮೋದಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಬಿಜೆಪಿ ಹಾಗೂ ಹಲವು ನಾಯಕರು ಕಾಂಗ್ರೆಸ್ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದಿತ್ತು. ಆದರೆ ಮೋದಿ ಸೈಲೆಂಟ್ ಆಗಿದ್ದರು. ಇದೀಗ ಇದೇ ಎಐ ವಿಡಿಯೋಗೆ ಮೋದಿ ತಿರುಗೇಟು ನೀಡಿದ್ದಾರೆ. ಸೂಕ್ತ ಸ್ಥಳದಲ್ಲಿ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.
ಪ್ರಧಾನಿ ಮೋದಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳ ಶಂಕು ಸ್ಥಾಪನೆ, ಉದ್ಘಾಟನೆಗಾಗಿ ಅಸ್ಸಾಂ ಪ್ರವಾಸ ಮಾಡಿದ್ದಾರೆ. ಅಸ್ಸಾಂ ವಿಶೇಷವಾಗಿ ಚಹಾ ಬೆಳೆಯವ ರಾಜ್ಯ. ಭಾರತದಲ್ಲಿ ಅತೀ ಹೆಚ್ಚಿನ ಚಹಾ ಬೆಳೆಯುವ ರಾಜ್ಯವಾಗಿ ಅಸ್ಸಾಂ ಗುರುತಿಸಿಕೊಂಡಿದೆ. ಚಹಾ ಬೆಳೆಗಾರರ ಸಮುದಾಯದ ಮುಂದೆ ಪ್ರಧಾನಿ ಮೋದಿ, ಕಾಂಗ್ರೆಸ್ ಮಾಡಿದ ಟೀಕೆಗೆ ಉತ್ತರಿಸಿದ್ದಾರೆ. ಎದೆತಟ್ಟಿ ಹೇಳಿದ ಪ್ರಧಾನಿ ಮೋದಿ, ಹೌದು, ನಾನು ಚಹಾ ಮಾರಾಟಾಗರ, ನಾನು ಮಾಡದಿದ್ದರೆ ಇನ್ಯಾರು ಮಾಡುತ್ತಾರೆ ಎಂದು ಮೋದಿ ಹೇಳಿದ್ದಾರೆ.
ಅಸ್ಸಾಂನಲ್ಲಿ ಕಾಂಗ್ರೆಸ್ ಸುದೀರ್ಘ ವರ್ಷಗಳ ಕಾಲ ಆಡಳಿತ ಮಾಡಿತ್ತು. ಆದರೆ ಚಹಾ ಸಮುದಾಯದ ಸಮಸ್ಯೆಗಳನ್ನು, ಮನವಿಗಳನ್ನು ಆಲಿಸಲು ಹೋಗಿಲ್ಲ. ಆದರೆ ಬಿಜೆಪಿ ಸರ್ಕಾರ ಅಸ್ಸಾಂ ಟಿ ಸಮುದಾಯಕ್ಕೆ ಭೂಮಿ ಹಕ್ಕು ನೀಡಿದೆ. ಇಷ್ಟೇ ಅಲ್ಲ ಟೀ ಸಮುದಾಯದ ಜೀವನ ಮೌಲ್ಯಗಳನ್ನು ಎತ್ತಿ ಹಿಡಿದಿದೆ ಎಂದು ಮೋದಿ ಹೇಳಿದ್ದಾರೆ.
ಕಾಂಗ್ರೆಸ್ ನಾಯಕಿ ರಾಗಿಣಿ ನಾಯಕ್ ಡಿಸೆಂಬರ್ 3ರಂದು ಪ್ರಧಾನಿ ನರೇಂದ್ರ ಮೋದಿಯ ಎಐ ಸೃಷ್ಟಿಸಿದ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಇದು ಬಾರಿ ವಿವಾದಕ್ಕೆ ಕಾರಣವಾಗಿತ್ತು. ಶೃಂಗ ಸಭೆಗಳು ನಡೆಯುವ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಚಹಾ ಮಾರುತ್ತಿದ್ದ ರೀತಿ ಸೃಷ್ಟಿಸಲಾಗಿತ್ತು. ಇಷ್ಟೇ ಅಲ್ಲ ಚಾಯ್ ಚಾಯ್ ಎಂದು ರೈಲು ನಿಲ್ದಾಣಗಲ್ಲಿ ಹೇಳುವಂತೆ ಈ ವಿಡಿಯೋ ಮಾಡಲಾಗಿತ್ತು. ಈ ವಿಡಿಯೋವನ್ನು ರಾಗಿಣಿ ನಾಯಕ್ ಹಂಚಿಕೊಂಡಿದ್ದರು. ಇದು ಕೋಹಾಹಲಕ್ಕೆ ಕಾರಣವಾಗಿತ್ತು. ದೇಶದ ಪ್ರಧಾನಿಯನ್ನು ಅವಮಾನಿಸಲಾಗಿದೆ ಎಂದು ಬಿಜೆಪಿ ಆಕ್ರೋಶ ಹೊರಹಾಕಿತ್ತು. ಆರೋಪ ಪ್ರತ್ಯಾರೋಪಕ್ಕೂ ಈ ವಿಡಿಯೋ ಸಾಕ್ಷಿಯಾಗಿತ್ತು.
ಕಾಂಗ್ರೆಸ್ ಅಕ್ರಮ ನುಸುಳುಕೋರರು ಭಾರತದೊಳಗೆ ಪ್ರವೇಸಿಸಲು ಅವಕಾಶ ನೀಡಿತು. ಬಳಿಕ ಅವರ ಪರವಾಗಿ ಹೋರಾಟ ಮಾಡುತ್ತಿದೆ. ಚುನಾವಣಾ ಆಯೋಗದ SIR (ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ) ವಿರೋಧಿಸುತ್ತಿದೆ. ಈ ಮೂಲಕ ನಕಲಿ ಮತದಾರರಿಗೆ ಕಾಂಗ್ರೆಸ್ ಅವಕಾಶ ನೀಡುವಂತೆ ಪರೋಕ್ಷವಾಗಿ ಹೋರಾಟ ಮಾಡುತ್ತಿದೆ ಎಂದು ಮೋದಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ