ಕಾಕ್ರೋಚ್ ಜನತಾ ಪಾರ್ಟಿ ಸಂಭ್ರಮಾಚರಣೆಗೆ ಸೋನಂ ವಾಂಗ್ಚುಕ್ ಅಸಮಾಧಾನ, ಸಿಜೆಪಿಗೆ ಮಹತ್ವದ ಸೂಚನೆ

Published : Jul 28, 2026, 11:50 AM IST
Sonam Wangchuk Voices Concern Over CJP Resignation Party

ಸಾರಾಂಶ

ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬಳಿಕ ಪ್ರತಿಭಟನಾ ನಿರತ ಕಾಕ್ರೋಚ್ ಜನತಾ ಪಾರ್ಟಿ ಫೈವ್ ಸ್ಟಾರ್ ಹೊಟೆಲ್‌ನಲ್ಲಿ ಮಾಡಿದ ಅದ್ಧೂರಿ ಪಾರ್ಟಿ ವಿವಾದಕ್ಕೆ ಕಾರಣಾಗಿದೆ. ಇದರ ಬೆನ್ನಲ್ಲೇ ಉಪವಾಸ ಸತ್ಯಾಗ್ರಹ ಮಾಡಿದ ಸೋನಂ ವಾಂಗ್ಚುಕ್ ಈ ಪಾರ್ಟಿ ಕುರಿತು ಪ್ರತಿಕ್ರಿಯಿಸಿದ್ದಾರೆ.

ನವದೆಹಲಿ (ಜು.28) ಕಾಕ್ರೋಚ್ ಜನತಾ ಪಾರ್ಟಿ ದೆಹಲಿ ಜಂತರ್ ಮಂತರ್‌ ಹಾಗೂ ದೇಶಾದ್ಯಂತ ನಡೆಸಿದ ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪಡೆದಿತ್ತು. ಈ ಗೆಲುವನ್ನು ಕಾಕ್ರೋಚ್ ಜನತಾ ಪಾರ್ಟಿ ಫೈವ್ ಸ್ಟಾರ್ ಹೊಟೆಲ್‌ನಲ್ಲಿ ಅದ್ದೂರಿ ಪಾರ್ಟಿ ಮಾಡಿ ಆಚರಿಸಿತ್ತು. ಬಾಲಿವುಡ್ ಹಾಡಿಗೆ ಕುಣಿದು ಕುಪ್ಪಳಿಸಿದ ಪಾರ್ಟಿ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ತೀವ್ರ ಟೀಕೆಗಳು ವ್ಯಕ್ತವಾಗಿತ್ತು. ಸಾರ್ವಜನಿಕವಾಗಿ ಕಾಕ್ರೋಚ್ ಜನತಾ ಪಾರ್ಟಿಯ ನಡೆಗೆ ವಿರೋಧ ವ್ಯಕ್ತವಾಗಿತ್ತು. ಪಾರ್ಟಿ ವಿಡಿಯೋಗಳು ವೈರಲ್ ಆಗಿತ್ತು. ಇದೀಗ ಕಾಕ್ರೋಜ್ ಜನತಾ ಪಾರ್ಟಿಯ ಆರಂಭಿಕ ಕಸರತ್ತನ್ನು ಪ್ರತಿಭಟನೆಯಾಗಿ ಪರಿವರ್ತಿಸಿ ಪರಿಸರ ಹೋರಾಟಗಾರ ಸೋನಂ ವಾಂಗ್ಚುಕ್ ಪ್ರತಿಕ್ರಿಯಿಸಿದ್ದಾರೆ. 26 ದಿನಗಳ ಕಾಲ ಉಪವಾಸ ಕುಳಿತು ಪ್ರತಿಭಟೆ ತೀವ್ರಗೊಳಿಸಿದ ಸೋನಂ ವಾಂಗ್ಚುಕ್, ಸಿಜೆಪಿ ಪಾರ್ಟಿ ಸಂಭ್ರಮಾಚರಣೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಸಿಜೆಪಿಗೆ ಕಿವಿ ಮಾತು ಹೇಳಿದ್ದಾರೆ.

ಗೆಲುವಿನ ಜೊತೆ ವಿನಯ ಬೇಕು

ಯಾವುದೇ ಸಂಭ್ರಮಾಚರಣೆ, ಗೆಲುವಿನ ಜೊತೆಗೆ ವಿನಯವು ಇರಬೇಕು ಎಂದು ಸೋನಂ ವಾಂಗ್ಚುಕ್ ಸಿಜೆಪಿ ನಾಯಕರಿಗೆ ಕಿವಿ ಮಾತು ಹೇಳಿದ್ದಾರೆ. "ಪ್ರತಿಭಟನೆಯ ಯಶಸ್ಸನ್ನು ಗೌರವ, ಸಂಯಮ ಮತ್ತು ಜವಾಬ್ದಾರಿಯಿಂದ ಆಚರಿಸಬೇಕು. ಜೀವನದಲ್ಲಿ ಯಶಸ್ಸು ಗಳಿಸುವುದು ಎಷ್ಟು ಮುಖ್ಯವೋ, ಅಷ್ಟೇ ಪ್ರಮುಖವಾಗಿ ನಮ್ರತೆ ಮತ್ತು ಗೌರವವನ್ನು ಕಾಯ್ದುಕೊಳ್ಳುವುದು ಅಗತ್ಯ ಎಂದು ಸೋನಂ ವಾಂಗ್ಚುಕ್ ಹೇಳಿದ್ದಾರೆ.

ಸಿಜೆಪಿ ಪಾರ್ಟಿ ವಿಡಿಯೋಗೆ ಭಾರಿ ಆಕ್ರೋಶ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರ ಮುಂದಿಟ್ಟು ಸಿಜೆಪಿ ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿತ್ತು. ಈ ಪ್ರತಿಭಟನೆ ವೇದಿಕೆಯಲ್ಲಿ ಎಲ್ಲಾ ನಾಯಕರು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಬದುಕು ಅಂತ್ಯಗೊಳಿಸಿದ 11 ವಿದ್ಯಾರ್ಥಿಗಳ ಪರ ಕಣ್ಮೀರಿಟ್ಟಿದ್ದರು. ಆದರೆ ಪ್ರಧಾನ್ ರಾಜೀನಾಮೆ ನೀಡಿದ ಬೆನ್ನಲ್ಲೇ 11 ವಿದ್ಯಾರ್ಥಿಗಳನ್ನು ಮರೆತು ಬಿಟ್ಟರಾ? ಸಂತ್ರಸ್ತ ವಿದ್ಯಾರ್ಥಿಗಳ ಕುಟುಂಬದ ಕಣ್ಣೀರು ಕಾಣಲಿಲ್ಲವೇ ಎಂದು ಹಲವರು ಪ್ರಶ್ನಿಸಿದ್ದರು. ಪ್ರತಿಭಟನೆ ವೇಳೆ ನಡೆದ ಅಹಿತಕರ ಘಟನೆಯಿಂದ ಕೆಲ ನಾಯಕರು, ಪ್ರತಿಭಟನಾಕಾರರು ಜೈಲು ವಾಸ ಅನುಭವಿಸುತ್ತಿದ್ದಾರೆ. ಇದರ ನಡುವೆ ಈ ಪಾರ್ಟಿ ಬೇಕಿತ್ತಾ ಅನ್ನೋ ಪ್ರಶ್ನೆಗಳು ಎದುರಾಗಿತ್ತು.

ಪಾರ್ಟಿ ವಿವಾದ ತೀವ್ರಗೊಳ್ಳುತ್ತಿದ್ದಂತೆ ಸಿಜೆಪಿ ಪ್ರತಿಕ್ರಿಯೆ ನೀಡಿತ್ತು. ಇದು ಜೆನ್‌ಜಿಗಳ ಪ್ರತಿಭಟನೆ. ಇಲ್ಲಿ ಪ್ರತಿಭಟನೆ ಗೆಲುವನ್ನು ಪಾರ್ಟಿ ಮೂಲಕ ಆಚರಿಸಲಾಗುತ್ತದೆ ಎಂದು ಸ್ಪಷ್ಟನೆ ನೀಡಿದ್ದರು. ಆದರೆ ಇದೇ ಜೆನ್‌ಝಿಗಳ ಜೊತೆ ಸೇರಿ ಪ್ರತಿಭಟನೆಗೆ ನೈಜ ರೂಪ ನೀಡಿದ ಸೋನಂ ವಾಂಗ್ಚುಕ್ ಇದೀಗ ಸಿಜೆಪಿಗೆ ಕಿವಿ ಮಾತು ಹೇಳಿದ್ದಾರೆ.

ಪಾರ್ಟಿ ಮಾಡಲು ಫಂಡ್ ಎಲ್ಲಿಂದ?

ಸಿಜೆಪಿ ಗೆಲುವಿನ ಪಾರ್ಟಿಯನ್ನು ಫೈವ್ ಸ್ಟಾರ್ ಹೊಟೆಲ್‌ನಲ್ಲಿ ಮಾಡಿದೆ. ಇದಕ್ಕೆ ಹಣ ಎಲ್ಲಿಂದ ಹರಿದು ಬಂತು ಎಂದು ಹಲವರು ಪ್ರಶ್ನಿಸಿದ್ದಾರೆ. ಇಡೀ ಹೋರಾಟ, ಪ್ರತಿಭಟನಾಕಾರರು, ಸಿಜೆಪಿ ನಾಯಕರು ಹೊಟೆಲ್‌ನಲ್ಲಿ ತಂಗಲು, ಪ್ರಯಾಣ ಸೇರಿದಂತೆ ಇಡೀ ಪ್ರತಿಭಟನೆಗೆ ಹಣದ ಮೂಲ ಎಲ್ಲಂದ, ಇದೀಗ ಅದ್ದೂರಿ ಪಾರ್ಟಿ ಹಿಂದಿನ ಹಣ ಯಾವುದು ಎಂದು ಹಲವರು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಲ್ಲು, ಮರಳಿಗೆ ನೀರಿನ ಬದಲು 40 ಸಾವಿರ ಕೆಜಿ ತುಪ್ಪ ಬಳಸಿ ಕಟ್ಟಿದ ದೇವಾಲಯ; ಈಗಲೂ ಗೋಡೆಗಳಿಂದ ಬೆಣ್ಣೆ ಬಸಿಯುತ್ತೆ!
ಮಿಲಿಯನ್ ವೀವ್ಸ್ ಪಡೆದ ಪ್ರಧಾನಿ ಸೆಲ್ಫಿ ವಿಡಿಯೋ ಡಿಲೀಟ್, ವಿವಾದ ಬಳಿಕ ಫೇಸ್‌ಬುಕ್ ಹೇಳಿದ್ದೇನು?