
ಇಂದೋರ್ (ಜೂ.14): ಮಧುಚಂದ್ರದಲ್ಲಿ ಗಂಡನ ಕಥೆ ಮುಗಿಸಿದ ಸೋನಂ, ಆಕೆಯ ಪ್ರಿಯಕರ ರಾಜ್ ಕುಶ್ವಾಹಾ ಇಬ್ಬರೂ ರಾಜಾ ರಘುವಂಶಿ ಹತ್ಯೆಗೆ ರೂಪಿಸಿದ್ದ ಸಂಚಿನ ಭೀಕರತೆ ಪೊಲೀಸ್ ತನಿಖೆಯಲ್ಲಿ ಬಗೆದಷ್ಟು ಬಯಲಾಗುತ್ತಿದೆ. ಹನಿಮೂನ್‌ಗೆ ಕರೆದೊಯ್ಯುವುದಕ್ಕೂ ಮುನ್ನವೇ 5 ಸಲ ಕೊಲೆಗೆ ಸಂಚು ರೂಪಿಸಿ ವಿಫಲರಾಗಿದ್ದರು ಎನ್ನುವ ಬೆಚ್ಚಿ ಬೀಳಿಸುವ ಸಂಗತಿ ಹೊರಬಿದ್ದಿದೆ.
ಮೊದಲ ಸಲ ಸೋನಂ ಮತ್ತು ಇತರ ನಾಲ್ವರು ಮದುವೆಗೂ 11 ದಿನಗಳ ಮುಂಚೆಯೇ ಇಂದೋರ್‌ನಲ್ಲಿ ಕೊಲ್ಲುವುದಕ್ಕೆ ಸಂಚು ರೂಪಿಸಿದ್ದರು. ಬಳಿಕ ಮದುವೆ ನಂತರ ಮೇ 19ರಂದು ಗುವಾಹಟಿಯಲ್ಲಿ ಮತ್ತೊಂದು ಸಂಚು ರೂಪುಗೊಂಡಿತ್ತು. ಆದರೆ ಅದು ಕೈಗೂಡಿರಲಿಲ್ಲ. ಅದಾದ ಬಳಿಕ ನೊಂಗ್ರಿಯಾಟ್‌ನಲ್ಲಿ ಸ್ಕೆಚ್ ಹಾಕಿದ್ದರು. ಅಲ್ಲಿಯೂ ರಘುವಂಶಿ ಬದುಕುಳಿದಿದ್ದ. ಅನಂತರ ಮಾವಲಕ್ಯಾತ್ ಮತ್ತು ವೈಸಾವ್ಡಾಂಗ್ ಬಳಿ ಎರಡು ವಿಫಲ ಪ್ರಯತ್ನಗಳು ನಡೆದಿದ್ದವು. ಆದರೆ ಕೊನೆಗೆ ವೈಸಾವ್ಡಾಂಗ್ ಜಲಪಾತದ ಬಳಿ ರಘುವಂಶಿಯನ್ನು ಮುಗಿಸುವಲ್ಲಿ ಸಫಲರಾಗಿದ್ದರು. ಎನ್ನುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಸೋನಂ ಸತ್ತಿದಾಳೆಂದು ಬಿಂಬಿಸಲು ಪ್ಲ್ಯಾನ್
ಪಕ್ಕಾ ಕ್ರಿಮಿನಲ್‌ಗಳಂತೆ ಕಥೆ ಸೃಷ್ಟಿಸಿದ್ದ ಈ ಗ್ಯಾಂಗ್ ಸೋನಂ ಕೂಡ ಸತ್ತು ಹೋಗಿದ್ದಾಳೆಂದು ಬಿಂಬಿಸಲು ಎರಡು ರೀತಿಯಲ್ಲಿ ಸಂಚು ರೂಪಿಸಿದ್ದರು. ಒಂದು ಆಕೆ ನದಿಗೆ ಬಿದ್ದು ಸತ್ತಿದ್ದಾಳೆಂದು ಎಂದು ಬಿಂಬಿಸುವ ಕಾರಣಕ್ಕೆ ನದಿ ಆಕೆಯ ಸ್ಕೂಟಿ ಬಿಡುವ ಪ್ರಯತ್ನ. ಮತ್ತೊಂದು ಸಂಚಿನಲ್ಲಿ ಯಾವುದೋ ಮಹಿಳೆಯನ್ಜು ಕೊಲೆ ಮಾಡಿ ಅಕೆಯ ದೇಹವನ್ನು ಸುಟ್ಟಿ ಅದು ಸೋಂನಂ ಎಂದು ಬಿಂಬಿಸುವ ತಂತ್ರ. ಅದರಿಂದ ಎಲ್ಲರೂ ಆಕೆಯ ಸತ್ತು ಹೋಗಿದ್ದಾರೆ ಎಂದು ಬಿಂಬಿಸಿ, ಸೋನಂ ತಲೆ ಮರೆಸಿಕೊಳ್ಳುವ ತಂತ್ರ ಅವರದ್ದಾಗಿತ್ತು. ಆದರೆ ಅಷ್ಟರೊಳಗೆ ಮೇಘಾಲಯ ಪೊಲೀಸರು ಪ್ರಕರಣ ಬೇಧಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ