ಬುರ್ಖಾ ತೆಗೆದು ಅತ್ಯಾ*ರ ಮಾಡಿದ, ಮಗನ ಕೃತ್ಯದ ವಿರುದ್ಧ ದೂರು ನೀಡಿದ 65 ವರ್ಷದ ತಾಯಿ

Published : Aug 17, 2025, 05:11 PM IST
Delhi police

ಸಾರಾಂಶ

ಕೋಣೆಯೊಳಗೆ ತಾಯಿಯನ್ನು ಕೂಡಿಹಾಕಿ ಮಗನೇ ಅತ್ಯಾ*ರಗೈದ ಘಟನೆ ದೆಹಲಿಯಲ್ಲಿ ನಡೆದಿದೆ. ಎರಡು ಬಾರಿ ಅತ್ಯಾ*ರ ಗೈದ ಮಗನ ವಿರುದ್ದ ತಾಯಿ ದೂರು ನೀಡಿದ್ದಾಳೆ, ಈತನ ವಿಕೃತಿಗೆ ಒಂದು ಕಾರಣವನ್ನೂ ನೀಡಿದ್ದಾನೆ.

ನವದೆಹಲಿ (ಆ.17) ಸ್ವಂತ ತಾಯಿ ಮೇಲೆ ಮಗನ ವಿಕೃತಿಗೆ ನಾಗರೀಕರ ಸಮಾಜವೇ ತಲೆ ತಗ್ಗಿಸಿದೆ. ತಾಯಿಯನ್ನು ಕೋಣೆಯೊಳಗೆ ಕೂಡಿ ಹಾಕಿ ಬಲವಂತವಾಗಿ ಬುರ್ಖಾ ತೆಗಿದು ಅತ್ಯಾ*ರ ಎಸಗಿದ್ದಾನೆ. ನಾನು ನಿನ್ನ ತಾಯಿ ಎಂದು ಪರಿಪರಿಯಾಗಿ ಬೇಡಿಕೊಂಡರು 39 ವರ್ಷದ ಮಗ ಕೇಳಲೇ ಇಲ್ಲ. ಇದು ನಿನಗೆ ನೀಡುತ್ತಿರುವ ಶಿಕ್ಷೆ ಎಂಬ ಕಾರಣ ನೀಡಿ ಮಗ ಅತ್ಯಾ*ರ ಎಸಗಿದ ಘಟನೆ ದೆಹಲಿಯ ಹೌಝ್ ಕ್ವಾಝಿ ವಲಯದಲ್ಲಿ ನಡೆದಿದೆ. ತಾಯಿ ತನ್ನ ಮಗಳ ಜೊತೆ ತೆರಳಿ ದೂರು ನೀಡಿದ್ದಾಳೆ.

ಪತಿ ಮನೆಯಲ್ಲಿ ಇಲ್ಲದ ವೇಳೆ ಮಗನಿಂದ ಕೃತ್ಯ

ಈ ಪ್ರಕರಣದ ಸಂತ್ರಸ್ತೆ ತನ್ನ ಪತಿ, ಇಬ್ಬರು ಮಕ್ಕಳೊಂದಿಗೆ ದೆಹಲಿಯಲ್ಲಿ ವಾಸವಾಗಿದ್ದಾಳೆ. ಪತಿ ನಿವೃತ್ತ ಸರ್ಕಾರಿ ನೌಕರ. ಹಿರಿಯ ಮಗಳಿಗೆ ಮದುವೆಯಾಗಿದ್ದರೆ, ಕಿರಿಯ ಮಗಳು ಹಾಗೂ ಈ ಆರೋಪಿ ಮಗ ಒಂದೇ ಮನಯಲ್ಲಿ ವಾಸವಿದ್ದಾರೆ. ತಂದೆ, ಮಗಳು ಮನೆಯಲ್ಲಿ ಇಲ್ಲದಾಗ ಮಗ ಈ ಕೃತ್ಯ ನಡೆಸಿದ್ದಾನೆ ಎಂದು ಆರೋಪಿಸಿದ್ದಾರೆ.

ಏನಿದು ಘಟನೆ?

ಜುಲೈ 17 ರಂದು 65 ವರ್ಷದ ಸಂತ್ರಸ್ತೆ, ಆಕೆಯ ಪತಿ ಹಾಗೂ ಕಿರಿಯ ಮಗಳು ಸೌದಿ ಅರೆಬಿಯಾಗೆ ತೆರಳಿದ್ದಾರೆ.ಧಾರ್ಮಿಕ ಸ್ಥಳ ಭೇಟಿಗಾಗಿ ತೆರಳಿದ್ದರು. ಈ ವೇಳೆ 39 ವರ್ಷದ ಮಗ ಸತತವಾಗಿ ತಂದೆಗೆ ಕರೆ ಮಾಡಿ ಮರಳಿ ಬರುವಂತೆ ಸೂಚಿಸಿದ್ದಾನೆ. ಇಷ್ಟೇ ಅಲ್ಲ ತಾಯಿ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದಾನೆ. ಈ ತಕ್ಷಣವೇ ತಾಯಿಗೆ ಡಿವೋರ್ಸ್ ನೀಡುವಂತೆ ತಂದೆಗೆ ಒತ್ತಾಯಿಸಿದ್ದಾನೆ. ಹೀಗಾಗಿ ತರಾತುರಿಯಲ್ಲಿ ಕುಟುಂಬ ದೆಹಲಿಗೆ ಮರಳಿದೆ. ದೆಹಲಿಗೆ ಮರಳಿದ ಬೆನ್ನಲ್ಲೇ ಮನೆಯಲ್ಲಿ ರಂಪಾಟ ಶುರುವಾಗಿದೆ. ಮಗನ ಸಮಾಧಾನಪಡಿಸಲು ತಂದೆ ಪ್ರಯತ್ನಿಸಿದ್ದಾರೆ. ಆದರೆ ಮಗ ಮಾತ್ರ ಯಾರೂ ಮಾತು ಕೇಳಲು ಸಿದ್ದನಿಲ್ಲ. ಈ ತ7ಣವೇ ತಾಯಿಗೆ ಡಿವೋರ್ಸ್ ನೀಡುವಂತ ಬಲವಂತ ಮಾಡಿದ್ದಾನೆ.

ತಾಯಿಗೆ ಅಕ್ರಮಸಂಬಂಧವಿದೆ ಎಂದು ಆರೋಪ

ತಾಯಿಗೆ ಅಕ್ರಮಸಂಬಂಧವಿದೆ ಎಂದು ಮಗ ಆರೋಪಿಸಿದ್ದಾನೆ. ತಂದೆ ಸರ್ಕಾರಿ ನೌಕರರಾಗಿದ್ದ ವೇಳೆ ಕೆಲಸದ ನಿಮಿತ್ತ ತಿಂಗಳುಗಟ್ಟಲೆ ಮನೆಯಿಂದ ಹೊರಗಿರುತ್ತಿದ್ದರು. ಈ ವೇಳೆ ತಾಯಿ ಆಕ್ರಮ ಸಂಬಂಧ ಇಟ್ಟುಕೊಂಡಿದ್ದರು ಎಂದು ಸ್ವಂತ ಮಗ, ತಾಯಿ ವಿರುದ್ಧ ಆರೋಪಿಸಿದ್ದಾನೆ.

ಆಗಸ್ಟ್ 11ರಂದು ಕೋಣೆಯಲ್ಲಿ ಕೂಡಿ ಹಾಕಿದ ಮಗ

ಆಗಸ್ಟ್ 11ರಂದು ತನ್ನ ತಾಯಿ ಜೊತೆ ಮಾತನಾಡಬೇಕು, ಹಲವು ಪ್ರಶ್ನೆಗಳಿವೆ, ಉತ್ತರ ಬೇಕಿದೆ ಎಂದು ಕುಟುಂಬದಲ್ಲಿ ಹೇಳಿದ್ದಾನೆ. ಬಳಿಕ ತಾಯಿಯನ್ನು ಕೋಣೆಯಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದ್ದಾನೆ. ಬುರ್ಖಾ ತೆಗೆದು ಅತ್ಯಾ*ರ ಎಸಗಿದ್ದಾನೆ ಎಂದು ತಾಯಿಯ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ನಿನ್ನ ತಾಯಿ ಎಂದು ಮನವಿ ಮಾಡಿದರೂ ಮಗ ವಿಕೃತಿ ಮೆರೆದಿದ್ದಾನೆ. ಘಟನೆ ಬಳಿಕ ಹಿರಿಯ ಮಗಳ ಮನೆಗೆ ತೆರಳಿದ ತಾಯಿ ಆಗಸ್ಟ್ 14ರಂದು ಮನೆಗೆ ಮರಳಿದ್ದಾರೆ. ಈ ವೇಳೆ ಮತ್ತೆ ಎರಡನೇ ಬಾರಿಗ ಮಗ ಅತ್ಯಾ*ರ ಎಸಗಿದ್ದಾನೆ.

ಪೊಲೀಸ್ ಠಾಣೆಗೆದೂರು

ಎರಡನೇ ಬಾರಿಗೂ ಮಗನ ವಿಕೃತಿಯಿಂದ ಜರ್ಝರಿತಗೊಂಡ ತಾಯಿ ಕಿರಿಯ ಮಗಳ ಜೊತೆ ತೆರಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿರೋಧದ ಮಧ್ಯೆ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಶಂಕು
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌