
ನವದೆಹಲಿ: ರೈಲ್ವೆ ಹಳಿಗಳ ನಡುವೆ ಸೌರಫಲಕ ಅಳವಡಿಸಿ ವಿದ್ಯುತ್ ಉತ್ಪಾದಿಸುವ ಯೋಜನೆಯೊಂದನ್ನು ಭಾರತೀಯ ರೈಲ್ವೆ ಪ್ರಾಯೋಗಿಕವಾಗಿ ಜಾರಿಗೊಳಿಸಿದೆ.
ವಾರಾಣಸಿಯ ಬನಾರಸ್ ಲೋಕೋಮೋಟಿವ್ ವರ್ಕ್ಸ್ ಉತ್ಪಾದನಾ ಘಟಕದಲ್ಲಿ 70 ಮೀ. ಉದ್ದದ ಟ್ರ್ಯಾಕ್‌ನಲ್ಲಿ ಈ ಸೌರಫಲಕಗಳನ್ನು ಅಳವಡಿಸಲಾಗಿದೆ, ಈ ಸೌರಫಲಕವು ನಿತ್ಯ 67 ಯೂನಿಟ್ ವಿದ್ಯುತ್ ಉತ್ಪಾದಿಸುವ ನಿರೀಕ್ಷೆಯಿದೆ.
ಗರಿಷ್ಠ 15 ಕಿಲೋವ್ಯಾಟ್ ಉತ್ಪಾದಿಸುವ 28 ಪ್ಯಾನೆಲ್‌ಗಳನ್ನು ಅಳವಡಿಸಲಾಗಿದೆ. ಈ ತಂತ್ರಜ್ಞಾನವನ್ನು ಭಾರತೀಯ ರೈಲ್ವೆಯ 1.2 ಲಕ್ಷ ಕಿಮೀ ಟ್ರ್ಯಾಕ್ ನೆಟ್‌ವರ್ಕ್‌ಗಳಿಗೆ ಅಳವಡಿಸುವ ಚಿಂತನೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಹೋಗುವ ಮತ್ತು ಬರುವ ಟಿಕೆಟ್‌ಗಳನ್ನು ಒಟ್ಟಿಗೆ ಬುಕ್ ಮಾಡಿದರೆ ಶೇ.20ರಷ್ಟು ರಿಯಾಯ್ತಿ
ನವದೆಹಲಿ: ಹಬ್ಬದ ವೇಳೆ ಜನದಟ್ಟಣೆ ತಡೆಯುವ ನಿಟ್ಟಿನಲ್ಲಿ, ಹೋಗುವ ಮತ್ತು ಬರುವ ಟಿಕೆಟ್‌ಗಳನ್ನು ಒಟ್ಟಿಗೆ ಬುಕ್ ಮಾಡಿದರೆ ಶೇ.20ರಷ್ಟು ರಿಯಾಯ್ತಿ ನೀಡುವುದಾಗಿ ರೈಲ್ವೆ ಇಲಾಖೆ ಘೋಷಿಸಿದೆ.
ಆ.14ರಿಂದ ಈ ಯೋಜನೆ ಆರಂಭವಾಗಲಿದ್ದು, ಮೊದಲ ಯಾನದ ಪ್ರಯಾಣ ದಿನಾಂಕವು ಅ.13ರಿಂದ ಅ.26ರವರೆಗೆ ಇರಬೇಕಿದೆ. ರಿಟರ್ನ್ ಬರುವ ದಿನಾಂಕವು ನ.17ರಿಂದ ಡಿ.1ರ ಒಳಗೆ ಇರಬೇಕಿದೆ. ಈ ಅವಧಿಯಲ್ಲಿ ಟಿಕೆಟ್ ಬುಕ್ ಮಾಡಿಕೊಂಡವರಿಗೆ ರಿಯಾಯ್ತಿ ಲಭಿಸಲಿದೆ. ಇವುಗಳು ವಂದೇ ಭಾರತ್, ಶತಾಬ್ಧಿ, ರಾಜಧಾನಿ, ದುರಂತೋ ರೀತಿ ಪ್ರೀಮಿಯಂ ರೈಲುಗಳಿಗೆ ಅನ್ವಯಿಸುವುದಿಲ್ಲ.
ಎಲ್ಲಾ ಸಾಮಾನ್ಯ ಎಕ್ಸ್‌ಪ್ರೆಸ್, ಸುಪರ್‌ಫಾಸ್ಟ್‌ಗಳಿಗೆ ಅನ್ವಯಿಸಲಿದೆ. ಇದರಲ್ಲಿ ಯಾವುದೇ ರೀಫಂಡ್ ದೊರೆಯುವುದಿಲ್ಲ ಎಂದು ರೈಲ್ವೆ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ