ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಕಾಳಿಂಗ ಸರ್ಪ ಪತ್ತೆಯಾಗಿದ್ದು, ಅರಣ್ಯ ಸಿಬ್ಬಂದಿ ರಕ್ಷಿಸಿದ್ದಾರೆ.
ಶಬರಿಮಲೆ ಸನ್ನಿಧಾನದಲ್ಲಿ ಕಾಳಿಂಗ ಪ್ರತ್ಯಕ್ಷ, ರಕ್ಷಣೆ
ಶಬರಿಮಲೆ: ಇಲ್ಲಿನ ಅಯ್ಯಪ್ಪ ಸ್ವಾಮಿ ದೇಗುಲದ ಪ್ರಾಂಗಣದಲ್ಲಿ ಭಾನುವಾರ ಕಾಳಿಂಗ ಸರ್ಪ ಪತ್ತೆಯಾಗಿದ್ದು, ಅರಣ್ಯ ಸಿಬ್ಬಂದಿ ಅದನ್ನು ರಕ್ಷಿಸಿದ್ದಾರೆ. ಬೆಳಗ್ಗೆ ಸನ್ನಿಧಾನದ ಒಳಗಿನ ಭಸ್ಮಾಕುಳಂನಲ್ಲಿ ಕಾಳಿಂಗ ಪತ್ತೆಯಾಗಿದೆ. ಕೂಡಲೇ ಎಚ್ಚೆತ್ತ ಅರಣ್ಯ ಸಿಬ್ಬಂದಿ, ನುರಿತ ಉರಗ ರಕ್ಷಕರಿಂದ ಕಾಳಿಂಗ ಸರ್ಪವನ್ನು ರಕ್ಷಿಸಿದ್ದಾರೆ. ಬಳಿಕ ಸುರಕ್ಷಿತವಾಗಿ ದಟ್ಟಾರಣ್ಯದಲ್ಲಿ ಬಿಟ್ಟು ಬಂದಿದ್ದಾರೆ.
ಜಲಾಶಯ ಬಳಿ ರೀಲ್ಸ್ ಮಾಡಲು ಹೋದ 5 ಯುವಕರ ದುರ್ಮರಣ
ಹೈದರಾಬಾದ್: ಜಲಾಶಯದ ಬಳಿ ರೀಲ್ಸ್ ಮಾಡಲು ಹೋಗಿ ಐವರು ಸ್ನೇಹಿತರು ನೀರುಪಾಲಾದ ಘಟನೆ ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯಲ್ಲಿ ನಡೆದಿದೆ. ಭಾನುವಾರ ರಜೆ ಇದ್ದ ಕಾರಣ 7 ಸ್ನೇಹಿತರು ಜಿಲ್ಲೆಯ ಕೊಂಡ ಪೋಚೆಮ್ಮ ಜಲಾಶಯಕ್ಕೆ ತೆರಳಿದ್ದರು. ಈ ವೇಳೆ ಯುವಕರು ಅಲ್ಲಿದ್ದ ರಕ್ಷಣಾ ಬೇಲಿಯನ್ನು ದಾಟಿ ನೀರಿಗೆ ಕಾಲಿಟ್ಟಿದ್ದಾರೆ. ಹಾಗೆ ಮುಂದೆ ಸಾಗಿ ಆಳದ ಭಾಗಕ್ಕೆ ತೆರಳಿದ್ದಾರೆ. ದುರದೃಷ್ಟವಶಾತ್ ಈಜು ಬಾರದೆ ಐವರು ಮೃತಪಟ್ಟಿದ್ದಾರೆ. ಇಬ್ಬರನ್ನು ಪೊಲೀಸರು ರಕ್ಷಿಸಿದ್ದಾರೆ.
ಗಡಿಯಲ್ಲಿ ಬೇಲಿ ಹಾಕಿದ್ದಕ್ಕೆ ಬಾಂಗ್ಲಾದೇಶ ತೀವ್ರ ಗರಂ
ಢಾಕಾ: ಭಾರತ ಸರ್ಕಾರ ಗಡಿಯಲ್ಲಿ ಬೇಲಿ ನಿರ್ಮಿಸಿರುವ ಕುರಿತು ಬಾಂಗ್ಲಾದೇಶ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಕುರಿತಂತೆ ಭಾನುವಾರ ಢಾಕಾದಲ್ಲಿನ ಭಾರತೀಯ ರಾಯಭಾರಿ ಪ್ರಣಯ್ ವರ್ಮಾರನ್ನು ಕರೆಸಿಕೊಂಡಿರುವ ಬಾಂಗ್ಲಾ ವಿದೇಶಾಂಗ ಸಚಿವಾಲಯ ತನ್ನ ಆಕ್ಷೇಪ ಸಲ್ಲಿಸಿದೆ. ಗಡಿಯ ಐದು ಕಡೆ ಭಾರತವು ಬೇಲಿ ಹಾಕಲು ಪ್ರಯತ್ನಿಸುತ್ತಿದ್ದು, ಇದು 2 ದೇಶಗಳ ದ್ವಿಪಕ್ಷೀಯ ಒಪ್ಪಂದದ ಉಲ್ಲಂಘನೆಯಾಗಿದೆ ಎಂದಿದೆ.
ಛತ್ತೀಸ್‌ಗಢ: 9 ನಕ್ಸಲರ ಶರಣಾಗತಿ ಮರುದಿನವೇ ಗುಂಡಿಗೆ 5 ನಕ್ಸಲರು ಬಲಿ
ಬಿಜಾಪುರ: 43 ಲಕ್ಷ ರು. ಇನಾಮು ಹೊಂದಿದ್ದ ನಕ್ಸಲರು ಶರಣಾದ ಮರುದಿನವೇ ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಐವರು ನಕ್ಸಲರು ಭದ್ರತಾ ಪಡೆಗಳ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ 2025ರಲ್ಲಿ ಇದುವರೆಗೆ ಭದ್ರತಾ ಪಡೆಗಳ ಗುಂಡಿಗೆ ಹತರಾದ ನಕ್ಸಲರ ಸಂಖ್ಯೆ 15ಕ್ಕೆ ಏರಿಕೆ ಆದಂತೆ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಯಚೂರು: ಮಾಲೆ ಧರಿಸಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಮುಸ್ಲಿಂ ವ್ಯಕ್ತಿ!
20 ದಿನಗಳಲ್ಲೇ ಶಬರಿಮಲೆಯಲ್ಲಿ 60 ಕೋಟಿ ಮೌಲ್ಯದ ಅಪ್ಪಂ, ಅರವಣ ಮಾರಾಟ!