ಚಲ್ತಾ ಹೈ ಮನೋಭಾವ ಬಿಟ್ಟು ಬಿಡಿ: ಯುವಜನರಿಗೆ ಮೋದಿ ಕರೆ

Published : Jan 13, 2025, 09:15 AM IST
ಚಲ್ತಾ ಹೈ ಮನೋಭಾವ ಬಿಟ್ಟು ಬಿಡಿ: ಯುವಜನರಿಗೆ ಮೋದಿ ಕರೆ

ಸಾರಾಂಶ

ವಿಕಸಿತ ಭಾರತದ ಗುರಿ ಸಾಧಿಸಲು ಯುವಜನರು 'ಚಲ್ತಾ ಹೈ' ಮನೋಭಾವ ಬಿಟ್ಟು, ದೊಡ್ಡ ಗುರಿಗಳನ್ನು ಹೊಂದಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. 2047ರ ವರೆಗಿನ ಅಮೃತ ಕಾಲದಲ್ಲಿ ಯುವಜನತೆಯ ಪಾತ್ರ ಮಹತ್ವದ್ದಾಗಿದ್ದು, ಭಾರತವು 10 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನವದೆಹಲಿ: ಕೆಲವರು ಭಾರತ ಅಭಿವೃದ್ಧಿ ಹೊಂದುವುದು ಕಷ್ಟ ಎಂದು ಭಾವಿಸಿದ್ದಾರೆ. ಇದು ತಪ್ಪು. ಭಾರತದ ಯುವ ಜನಸಂಖ್ಯೆಯ ಸಾಮರ್ಥ್ಯವು ದೇಶ ಅಭಿವೃದ್ಧಿಗೆ ಬಲ ತುಂಬಿ, ಅದನ್ನು ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಸಶಕ್ತವಾಗಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಸ್ವಾಮಿ ವಿವೇಕಾನಂದರ ಜನ್ಮದಿನವಾದ ರಾಷ್ಟ್ರೀಯ ಯುವ ದಿನದ ಅಂಗವಾಗಿ ಭಾನುವಾರ ನಡೆದ ವಿಕಸಿತ ಭಾರತ ಯುವ ನಾಯಕರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ದೇಶ ಮುಂದುವರೆಯಲು ದೊಡ್ಡ ಗುರಿಗಳನ್ನು ಇಟ್ಟುಕೊಳ್ಳಬೇಕು. ಭಾರತ ಅದನ್ನೇ ಮಾಡುತ್ತಿದೆ. ವಿಕಸಿತ ಭಾರತದ ಗುರಿಯೊಂದಿಗೆ ಎಲ್ಲಾ ನೀತಿ, ನಿರ್ಧಾರಗಳನ್ನು ರೂಪಿಸಿದರೆ, ದೇಶ ಅಭಿವೃದ್ಧಿ ಹೊಂದುವಲ್ಲಿ ಸಂದೇಹವೇ ಇಲ್ಲ. ಇದನ್ನು ಕೇವಲ ಸರ್ಕಾರ ಮಾಡಲಾಗದು. ಯುವಕರೂ ಕೈಜೋಡಿಸಬೇಕು. ಕೆಲವರು ಚಲ್ತಾ ಹೈ (ಏನೋ ಆಗುತ್ತಿದೆ, ಆಗಲಿ ಬಿಡು. ನಾವೇಕೆ ಬದಲಾವಣೆಗೆ ಮುಂದಾಗಬೇಕು) ಎಂಬ ಮನೋಭಾವನೆ ಹೊಂದಿದ್ದಾರೆ.ಆದರೆ ಇದು ಸರಿಯಲ್ಲ ಎಂದರು. 

 ಭಾರತವು ಬಯಲುಶೌಚ ಮುಕ್ತ ರಾಷ್ಟ್ರವಾದ ಬಗೆ ಹಾಗೂ ಕೊರೋನಾ ಕಾಲದಲ್ಲಿ ಎಲ್ಲರಿಗೂ ವ್ಯಾಕ್ಸಿನ್‌ ಒದಗಿಸಿದ ಬಗ್ಗೆ ಮಾತನಾಡಿದ ಅವರು, ಮುಂಬರುವ 25 ವರ್ಷಗಳು(2047ರ ವರೆಗೆ) ಭಾರತದ ಪಾಲಿಗೆ ಅಮೃತ ಕಾಲವಾಗಿರಲಿದೆ. ಯುವಜನತೆಯಲ್ಲಿ ಪೂರ್ಣ ವಿಶ್ವಾಸ ಹೊಂದಿದ್ದ ವಿವೇಕಾನಂದರು, ಯುವಕರು ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುತ್ತಾರೆ ಎಂದಿದ್ದರು. ಅವರ ಮಾತಿನ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ ಎಂದರು.  ಅಂತೆಯೇ, 2030ರ ಹೊತ್ತಿಗೆ ಪೆಟ್ರೋಲ್‌ಗೆ ಶೇ.20ರಷ್ಟು ಎಥನಾಲ್‌ ಬೆರೆಸುವ ಗುರಿ ಹಾಕಿಕೊಳ್ಳಲಾಗಿದೆ. ಮೂಲಸೌಕರ್ಯಗಳಿಗೆ 3 ಪಟ್ಟು ಅಧಿಕ ನಿಧಿ ಮೀಸಲಿರಿಸಲಾಗಿದೆ. 3ನೇ ದೊಡ್ಡ ಆರ್ಥಿಕತೆಯಾಗುವತ್ತ ದಾಪುಗಾಲಿಡುತ್ತಿರುವ ಭಾರದ ಮುಂದಿನ ದಶಕದಲ್ಲಿ 10 ಟ್ರಿಲಿಯನ್‌ ಡಾಲರ್‌ ಆರ್ಥಿಕತೆ ಆಗಲಿದೆ ಎಂದರು. 

ಸುದೀರ್ಘ 6 ತಾಸು ಸಂವಾದ ಯುವ ಸಮೂಹದ ಜೊತೆ ಊಟ

ರಾಜಕೀಯದೊಂದಿಗೆ ಸಂಪರ್ಕವನ್ನೇ ಹೊಂದಿರದ 1 ಲಕ್ಷ ಯುವಕರನ್ನು ರಾಜಕೀಯಕ್ಕೆ ಕರೆತರುವ ಉದ್ದೇಶದಿಂದ ಆಯೋಜಿಸಲಾಗಿದ್ದ ಪ್ರಧಾನಿಯವರೊಂದಿಗಿನ ಸಂವಾದದಲ್ಲಿ ಆಯ್ದ 3,000 ಯುವಕರು ಭಾಗಿಯಾಗಿದ್ದರು. ಈ ವೇಳೆ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಅಂದರೆ ಸುದೀರ್ಘ 6 ಗಂಟೆ ಕಾಲವನ್ನು ಯುವಕರೊಂದಿಗೆ ಸಮಯ ಕಳೆದ ಪ್ರಧಾನಿ ಮೋದಿ, ಈ ವೇಳೆ ವಸ್ತುಪ್ರದರ್ಶನವನ್ನು ವೀಕ್ಷಿಸಿದರು. 

ಅಂತೆಯೇ, ಯುವಕರ ಯೋಚನೆಗಳು, ಭಾರತವನ್ನು ಉತ್ಪಾದನಾ ಕೇಂದ್ರವನ್ನಾಗಿಸಲು ಯೋಜನೆಗಳನ್ನು ಆಲಿಸಿ, ಸುಸ್ಥಿರ ಅಭಿವೃದ್ಧಿ, ತಂತ್ರಜ್ಞಾನವನ್ನೊಳಗೊಂಡ ಕೃಷಿಗೆ ಸಂಬಂಧಿಸಿದ 10 ಪ್ರದರ್ಶನಗಳನ್ನು ವೀಕ್ಷಿಸಿದರು. ಜೊತೆಗೆ, ಯುವಕರಿಗೆ ಕೆಲ ಸಲಹೆಗಳನ್ನೂ ಮೋದಿ ನೀಡಿದರು. ಅಲ್ಲದೆ ಯುವಸಮೂಹದ ಜೊತೆಗೇ ಊಟ ಮಾಡಿ ಅವರ ಮನದಾಳ ಆಲಿಸಿದರು.

ಎನ್‌ಪಿಎಸ್ ವಾತ್ಸಲ್ಯ ಯೋಜನೆಯಲ್ಲಿ ತಿಂಗಳಿಗೆ 1000 ಹೂಡಿಕೆ ಮಾಡಿ ಕೋಟಿ ಗಳಿಸಿ

ಚಳಿ ಹೆಚ್ಚಾಗಿದೆ ತಲೆ ಕವರ್ ಮಾಡಿ, ವರದಿ ಮಾಡುತ್ತಿದ್ದ ಪತ್ರಕರ್ತರ ಆರೋಗ್ಯ ಕಾಳಜಿ ತೋರಿದ ಮೋದಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ತಿರುಪತಿ ತಿಮ್ಮಪ್ಪನಿಗೆ ಅಂಗವಸ್ತ್ರದ ಮೋಸ, ಪ್ಲಾಸ್ಟಿಕ್‌ ಸಿಲ್ಕ್‌ ಕೊಟ್ಟು 55 ಕೋಟಿ ಯಾಮಾರಿಸಿದ ಕಂಪನಿ!
ರಾಷ್ಟ್ರಪತಿಗಳು ಪದಕ ನೀಡುತ್ತಿದ್ದಂತೆ ಕೊರಳಿನಿಂದ ಕಿತ್ತೆಸೆದ ಬಾಲಕ! ವೈರಲ್ ವಿಡಿಯೋ ಹಿಂದಿನ ಸತ್ಯವೇನು?