
ಓರಿಸ್ಸಾ(ಆ. 13) ಹಾವಿನ ದ್ವೇಷ ಹನ್ನೆರಡು ವರುಷ ಎನ್ನುವುದು ಹಳೆಯ ಮಾತು. ಇಲ್ಲೊಬ್ಬ ತನಗೆ ಕಚ್ಚಿದ ಹಾವಿನ ಮೇಲೆ ದ್ವೇಷ ತೀರಿಸಿಕೊಂಡಿದ್ದಾನೆ. ಬುಡಕಟ್ಟು ಜನಾಂಗಕ್ಕೆ ಸೇರಿದ 45 ವರ್ಷದ ವ್ಯಕ್ತಿ ತನಗೆ ಕಚ್ಚಿದ ಹಾವಿಗೆ ವಾಪಸ್ ಕಚ್ಚಿದ್ದಾನೆ.
ಒಡಿಶಾದ ಜಜ್‌ಪುರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಘಟನೆ ನಡೆದಿದೆ. ದನಗಡಿ ಬ್ಲಾಕ್ ವ್ಯಾಪ್ತಿಯ ಸಾಲಿಜಂಗಾ ಪಂಚಾಯತ್ ವ್ಯಾಪ್ತಿಯ ಗಾಂಭರಿಪತಿಯಾ ಗ್ರಾಮದ ಕಿಶೋರ್ ಬದ್ರಾ ಬುಧವಾರ ರಾತ್ರಿ ತನ್ನ ಗದ್ದೆಯಲ್ಲಿ ಕೆಲಸ ಮಾಡಿ ಮನೆಗೆ ಮರಳುತ್ತಿದ್ದ. ಈ ವೇಳೆ ಆತನ ಕಾಲಿಗೆ ಹಾವು ಕಚ್ಚಿದೆ.
ನಾಗರಪಂಚಮಿಯಂದು ಈ ರೀತಿ ಮಾಡಿದರೆ ಕನಸಿನಲ್ಲಿ ಹಾವು ಕಾಣುವುದಿಲ್ಲ
ಸೇಡು ತೀರಿಸಿಕೊಳ್ಳಲು ಮುಂದಾದ ಕಿಶೋರ್ ಹಾವನ್ನೇ ಹಿಡಿದು ಕಚ್ಚಿದ್ದಾನೆ. ಮನೆಗೆ ಬರುತ್ತಿದ್ದಾಗ ಏನೋ ಒಂದು ಪ್ರಾಣಿ ಕಾಲಿಗೆ ಕಚ್ಚಿದ ಹಾಗೆ ಆಯಿತು. ತಕ್ಷಣ ಕೈಯಲ್ಲಿದ್ದ ಟಾರ್ಚ್ ನಿಂದ ಬೆಳಕು ಬಿಟ್ಟಾಗ ಹಾವು ಎನ್ನುವುದು ಗೊತ್ತಾಯಿತು. ವಿಷಕಾರಿ ಹಾವು ಎಂದು ಕಂಡುಕೊಂಡೆ. ಸಿಟ್ಟಿನಿಂದ ಅದನ್ನು ಕಚ್ಚಿ ಕಚ್ಚಿ ಸಾಯಿಸಿದೆ ಎಂದು ಕಿಶೋರ್ ಹೇಳುತ್ತಾರೆ.
ಸತ್ತ ಹಾವಿನೊಂದಿಗೆ ಊರಿಗೆ ಬಂದು ಪತ್ನಿಗೆ ವಿಚಾರ ತಿಳಿಸಿದೆ. ಕೆಲವರು ಆತನಿಗೆ ಆಸ್ಪತ್ರೆಗೆ ತೆರಳಲು ಸಲಹೆ ನೀಡಿದರೂ ಕಿಶೋರ್ ಮಾತ್ರ ಸಾಂಪ್ರದಾಯಿಕ ಚಿಕಿತ್ಸೆಯನ್ನೇ ಪಡೆದುಕೊಂಡ. ಇಲ್ಲಿಯವರೆಗೆ ಯಾವುದೇ ಆರೋಗ್ಯ ಸಮಸ್ಯೆ ಆದ ದೂರು ದಾಖಲಾಗಿಲ್ಲ. ಕಿಶೋರ್ ಎಂದಿನಂತೆ ತಮ್ಮ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ