ದೇಶದಲ್ಲಿ ಲಸಿಕೆ ಪಡೆದ 2.5 ಲಕ್ಷಕ್ಕೂ ಅಧಿಕ ಮಂದಿಗೆ ಕೊರೋನಾ!

By Suvarna NewsFirst Published Aug 13, 2021, 4:25 PM IST
Highlights

* ದೇಶದಲ್ಲಿ ಮತ್ತೆ ಅಬ್ಬರಿಸುತ್ತಿದೆ ಕೊರೋನಾ 

* ಲಸಿಕೆ ಪಡೆದವರನ್ನೂ ಬಿಡುತ್ತಿಲ್ಲ ಕೋವಿಡ್‌

* ದೇಶದಲ್ಲಿ ಲಸಿಕೆ ಪಡೆದ 2.5 ಲಕ್ಷಕ್ಕೂ ಅಧಿಕ ಮಂದಿಗೆ ಕೊರೋನಾ!

ನವದೆಹಲಿ(ಆ,.13): ದೇಶಾದ್ಯಂತ ಲಸಿಕೆ ಪಡೆದ ಬಳಿಕವೂ 2.5 ಲಕ್ಷ ಮಂದಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಆರೋಗ್ಯ ಸಚಿವಾಲಯದ ಮೂಲಗಳ ಅನ್ವಯ, ಇಲ್ಲಿಯವರೆಗೆ, ದೇಶಾದ್ಯಂತ ಒಟ್ಟು 2 ಲಕ್ಷದ 58 ಸಾವಿರದ 560 ಮಂದಿಗೆ ಸೋಂಕು ತಗುಲಿದೆ(ಲಸಿಕೆ ತೆಗೆದುಕೊಂಡ ನಂತರ ಸೋಂಕು). ಇದರಲ್ಲಿ, 1 ಲಕ್ಷ 71 ಸಾವಿರದ 511 ಮಂದಿಗೆ ಲಸಿಕೆಯ ಮೊದಲ ಡೋಸ್‌ ಪಡೆದ ಬಳಿಕ ಕೊರೋನಾ ಬಂದಿದ್ದರೆ, 87 ಸಾವಿರದ 49 ಮಂದಿಗೆ ಎರಡನೇ ಡೋಸ್‌ ಬಳಿಕ ಕೊರೋನಾ ಸೋಂಕು ಕಾಣಿಸಿಕೊಂಡಿದೆ. 

ದೇಶದಲ್ಲಿ ಆರಂಭವಾದ ಲಸಿಕೆ ಅಭಿಯಾನದ ನೀಡಲಾಗುವ ಮೂರು ಲಸಿಕೆಗಳಾದ ಕೋವಿಶೀಲ್ಡ್, ಕೋವಾಕ್ಸಿನ್ ಮತ್ತು ಸ್ಪುಟ್ನಿಕ್‌ ಹೀಗೆ ಈ ಮೂರೂ ಬಗೆಯ ಲಸಿಕೆ ಪಡೆದವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂರು ಲಸಿಕೆಗಳ ಮೊದಲ ಮತ್ತು ಎರಡನೆಯ ಡೋಸ್‌ಗಳ ಬಳಿಕವೂ ಸೋಂಕು ತಗುಲಿರುವುದು ವರದಿಯಾಗಿದೆ. \

ಕಳೆದ 24 ಗಂಟೆಗಳಲ್ಲಿ 40,120 ಹೊಸ ಕೋವಿಡ್ -19 ಪ್ರಕರಣಗಳು

ದೇಶದಲ್ಲಿ ಕೊರೋನಾ ಪ್ರಕರಣಗಳು ಇಂದು ಮತ್ತೆ 40 ಸಾವಿರದ ದಾಟಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 40,120 ಹೊಸ ಪ್ರಕರಣಗಳು ದಾಖಲಾಗಿದ್ದು, 585 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ, ಭಾರತದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 3,85,227 ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ, 42,295 ರೋಗಿಗಳು ಕೊರೋನಾದಿಂದ ಗುಣಮುಖರಾಗಿದ್ದಾರೆ. ದೇಶಾದ್ಯಂತ ಒಟ್ಟು 3,13,02,345 ಜನರನ್ನು ಕೊರೋನದಿಂದ ಗುಣಮುಖರಾಗಿದ್ದಾರೆ. ಚೇತರಿಕೆ ಪ್ರಮಾಣ 97.46%ನಷ್ಟು ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ, 57,31,574 ಡೋಸ್ ಲಸಿಕೆ ನೀಡಲಾಗಿದ್ದು, ಇಲ್ಲಿಯವರೆಗೆ ಒಟ್ಟು ಲಸಿಕೆ 52,95,82,956. 

click me!