* ಕೇಂದ್ರ ಸರ್ಕಾರ ಎಲ್ಲ ಆಸ್ತಿ ಮಾರಾಟಕ್ಕೆ ಮುಂದಾಗಿದೆ ಎಂದಿದ್ದ ರಾಹುಲ್ ಗಾಂಧಿ
* ಕಾಂಗ್ರೆಸ್ ಸರ್ಕಾರದ ಕಾಲದ ಎಲ್ಲ ವಿಚಾರಗಳನ್ನು ತೆರೆದಿಟ್ಟ ಕೇಂದ್ರ ಸಚಿವೆ
* ರಾಹುಲ್ ಮತ್ತು ಚಿದಂಬರಂ ಮೇಲೆ ಸ್ಮೃತಿ ಇರಾನಿ ವಾಗ್ದಾಳಿ
ನವದೆಹಲಿ(ಆ. 24) ಕೇಂದ್ರ ಸಚಿವೆ ಸ್ಮೃತಿ ಇರಾನಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪಿ.ಚಿದಂಬರಂ ಮೇಲೆ ವಾಗ್ದಾಳಿ ಮಾಡಿದ್ದಾರೆ. ಕೇಂದ್ರ ಸರ್ಕಾರ ದೇಶದ ಎಲ್ಲ ಆಸ್ತಿಗಳನ್ನು ಮಾರಾಟ ಮಾಡಲು ಮುಂದಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು.
ಸುದ್ದಿಗೋಷ್ಠಿಯಲ್ಲಿ ತಪ್ಪು ಮಾಹಿತಿ ನೀಡಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಇರಾನಿ ತಿರುಗೇಟು ಕೊಟ್ಟಿದ್ದಾರೆ. ದೇಶದ ಆಸ್ತಿಯನ್ನು ಮಾರಿ ಮತ್ತು ಭಾರೀ ಭ್ರಷ್ಟಾಚಾರ ಮಾಡಿದವರು ಈಗ ನಮ್ಮ ವಿರುದ್ಧ ಆಧಾರರಹಿತ ಮತ್ತು ಸುಳ್ಳು ಆರೋಪಗಳನ್ನು ಹೊರಿಸುತ್ತಿದ್ದಾರೆ.
ರಾಹುಲ್ ಬಿಡಾಡಿ ಗೂಳಿ ಎಂದ ಕೇಂದ್ರ ಸಚಿವ
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರವಿದ್ದಾಗ ಮುಂಬೈ -ಪುಣೆ ಎಕ್ಸ್‌ಪ್ರೆಸ್‌ವೇ ಯೋಜನೆಯಲ್ಲಿ 8000 ಕೋಟಿ ಅವ್ಯವಹಾರ ನಡೆದಿತ್ತು. ಮುಂಬೈ -ಪುಣೆ ಎಕ್ಸ್‌ಪ್ರೆಸ್‌ವೇಯನ್ನು ಮಾರಾಟ ಮಾಡಿದ್ದು ಲೆಕ್ಕಕ್ಕೆ ಇರಲಿಲ್ಲವೇ? ಎಂದು ಪ್ರಶ್ನೆ ಮಾಡಿದರು.
undefined
2008 ರಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರವು ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಹೊಸದಿಲ್ಲಿ ರೈಲ್ವೇ ನಿಲ್ದಾಣಕ್ಕಾಗಿ ಒಂದು ಆರ್‌ಎಫ್‌ಪಿಯನ್ನು ಸ್ಥಾಪಿಸಲಾಯಿತು. 2006 ರಲ್ಲಿ ಮತ್ತೆ ಏರ್‌ಪೋರ್ಟ್‌ಗಳ ಖಾಸಗೀಕರಣವನ್ನು ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಮಾಡಿತು ಇದನ್ನು ಮಾರಾಟ ಎಂದು ಕರೆಯಬಹುದೆ ಎಂದು ಪ್ರಶ್ನೆ ಮಾಡಿದರು.
ಕಾಂಗ್ರೆಸ್ ಮತ್ತು ಅದರ ನಾಯಕರು ಕೇವಲ ಬೂಟಾಟಿಕೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಅವರು ಸರ್ಕಾರಿ ಸ್ವಾಮ್ಯದ ಸಂಘ ಸಂಸ್ಥೆಗಳನ್ನು ಗುತ್ತಿಗೆ ನೀಡಿದ್ದ ವಿಚಾರ ಮರೆತಂತೆ ಕಾಣುತ್ತಿದೆ. ದೇಶದ ಆಸ್ತಿ ಮಾರಾಟ ಮಾಡಲು ಮುಂದಾದವರೇ ಈ ರೀತಿ ಮಾತನಾಡಿರುವುದು ವಿಚಿತ್ರ ಎಂದು ಇರಾನಿ ಹರಿಹಾಯ್ದರು.