ಧೂಮಪಾನ, ತಂಬಾಕು ನಿಯಂತ್ರಣ: ಬೆಂಗಳೂರಿಗೆ ಜಾಗತಿಕ ಗೌರವ

By Kannadaprabha NewsFirst Published Mar 17, 2023, 10:44 AM IST
Highlights

ಧೂಮಪಾನ ನಿಯಂತ್ರಣ ಹಾಗೂ ಸಾಂಕ್ರಾಮಿಕವಲ್ಲದ ರೋಗಗಳನ್ನು ತಡೆಯುವಲ್ಲಿ ಕೈಗೊಂಡ ಯಶಸ್ವಿ ಕ್ರಮಗಳಿಗಾಗಿ ಬೆಂಗಳೂರು ಸೇರಿದಂತೆ ಜಗತ್ತಿನ 5 ನಗರಗಳು ವಿಶ್ವ ಆರೋಗ್ಯ ಸಂಸ್ಥೆ ಬೆಂಬಲಿತ ಜಾಗತಿಕ ಪ್ರಶಸ್ತಿಗೆ ಪಾತ್ರವಾಗಿವೆ.

ನ್ಯೂಯಾರ್ಕ್: ಧೂಮಪಾನ ನಿಯಂತ್ರಣ ಹಾಗೂ ಸಾಂಕ್ರಾಮಿಕವಲ್ಲದ ರೋಗಗಳನ್ನು ತಡೆಯುವಲ್ಲಿ ಕೈಗೊಂಡ ಯಶಸ್ವಿ ಕ್ರಮಗಳಿಗಾಗಿ ಬೆಂಗಳೂರು ಸೇರಿದಂತೆ ಜಗತ್ತಿನ 5 ನಗರಗಳು ವಿಶ್ವ ಆರೋಗ್ಯ ಸಂಸ್ಥೆ ಬೆಂಬಲಿತ ಜಾಗತಿಕ ಪ್ರಶಸ್ತಿಗೆ ಪಾತ್ರವಾಗಿವೆ. ಭಾರತದ ಬೆಂಗಳೂರು, ಉರುಗ್ವೆಯ ಮೊಂಟೆವಿಡಿಯೋ, ಮೆಕ್ಸಿಕೋದ ಮೆಕ್ಸಿಕೋ ನಗರ, ಕೆನಡಾದ ವ್ಯಾಂಕೋವರ್‌, ಗ್ರೀಸ್‌ನ ಅಥೆನ್ಸ್‌ ನಗರಗಳು ಹೆಲ್ತ್‌ ಸಿಟಿ ಪ್ರಶಸ್ತಿಗೆ ಪಾತ್ರವಾಗಿವೆ. ಪ್ರಶಸ್ತಿಯು 1 ಕೋಟಿ ರು.ನಗದು ಒಳಗೊಂಡಿದೆ. ಬುಧವಾರ ಇಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಈ ನಗರಗಳು ತಮ್ಮ ನಗರದ ಜನರ ಆರೋಗ್ಯ ಕಾಪಾಡುವ ಮೂಲಕ, ನಗರಗಳನ್ನು ವಾಸಯೋಗ್ಯವನ್ನಾಗಿ ಮಾಡಿ, ಸಾಂಕ್ರಾಮಿಕವಲ್ಲ ರೋಗ ತಡೆಗೆ ಮಹತ್ವದ ಕಾಣಿಕೆ ನೀಡಿವೆ ಮತ್ತು ಇತರೆ ನಗರಗಳೂ ಇಂಥ ಕ್ರಮಗಳನ್ನು ಪಾಲಿಸಲು ಈ ನಗರಗಳು ಮಾದರಿಯಾಗಿವೆ ಎಂದು ಪ್ರಶಸ್ತಿಗೆ ಪಾತ್ರವಾದ ನಗರಗಳ ಸಾಧನೆಯನ್ನು ಬಣ್ಣಿಸಲಾಗಿದೆ.

ಮುಂಬೈಗೆ ಬರ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ವ್ಯಕ್ತಿಯಿಂದ ಧೂಮಪಾನ: ಸಿಕ್ಕಿಬಿದ್ದ ಬಳಿಕ ಹುಚ್ಚು ಹುಚ್ಚಾಗಿ ಆಡ್ದ..!

ಬೆಂಗಳೂರಿಗೆ ಏಕೆ ಗೌರವ?:

ಬೆಂಗಳೂರಿಗೆ ತಂಬಾಕು ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳಿಗಾಗಿ, ಅದರಲ್ಲೂ ವಿಶೇಷವಾಗಿ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ನಿಷೇಧಿಸುವ ಮತ್ತು ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ನಿಷೇಧಕ್ಕೆ ಇರುವ ಹಾಲಿ ನಿಯಮಗಳನ್ನು ಕಟ್ಟಿನಿಟ್ಟಾಗಿ ಪಾಲನೆ ಮಾಡಿದ್ದಕ್ಕಾಗಿ ಪ್ರಶಸ್ತಿ ಪ್ರಕಟಿಸಲಾಗಿದೆ. ತಮ್ಮ ನಗರದ ಜನರ ಆರೋಗ್ಯ ಕಾಪಾಡಲು ಮೇಯರ್‌ಗಳು ಏನೆಲ್ಲಾ ಕ್ರಮ ಕೈಗೊಳ್ಳಬಹುದು ಎಂಬುದಕ್ಕೆ ಈ ನಗರಗಳ ಮೇಯರ್‌ಗಳು ಉದಾಹರಣೆಯಾಗುತ್ತದೆ ಎಂದ ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಡಾ.ಟೆಡ್ರೋಸ್‌ ಘೇಬ್ರಯೇಸಸ್‌ ಬಣ್ಣಿಸಿದ್ದಾರೆ.

ಹೃದಯರೋಗ, ಪಾಶ್ರ್ವವಾಯು, ಕ್ಯಾನ್ಸರ್‌, ಮಧುಮೇಹ ಮತ್ತು ಶ್ವಾಸಕೋಶ ಸಂಬಂಧಿ ಆರೋಗ್ಯ ಸಮಸ್ಯೆಗಳನ್ನು ಸಾಂಕ್ರಾಮಿಕವಲ್ಲ ರೋಗ ಎಂದು ಪರಿಗಣಿಸಲಾಗುತ್ತದೆ. ಇವು ಜಗತ್ತಿನ ಒಟ್ಟು ಸಾವಿನಲ್ಲಿ ಶೇ.80ರಷ್ಟು ಸಾವಿಗೆ ಕಾರಣವಾಗುತ್ತಿವೆ.

ಕಾರಿನೊಳಗೆ ಧೂಮಪಾನ ಮಾಡಿದ ಅಧಿಕಾರಿಗೆ ಬೆದರಿಕೆ ಹಾಕಿ ಹಣ,ಚಿನ್ನ ದೋಚಿದ ಬೈಕ್ ವಾಹನ ಸವಾರ!

click me!