ಧೂಮಪಾನಿಗಳು, ಸಸ್ಯಾಹಾರಿಗಳಿಗೆ ಕೊರೋನಾ ಸಾಧ್ಯತೆ ಕಡಿಮೆ!

Published : Jan 18, 2021, 12:42 PM IST
ಧೂಮಪಾನಿಗಳು, ಸಸ್ಯಾಹಾರಿಗಳಿಗೆ  ಕೊರೋನಾ ಸಾಧ್ಯತೆ ಕಡಿಮೆ!

ಸಾರಾಂಶ

ಧೂಮಪಾನಿಗಳು ಹಾಗೂ ಸಸ್ಯಾಹಾರಿಗಳಲ್ಲಿ ಕೊರೋನಾ ಹರಡುವ ಅಪಾಯ ಕಮ್ಮಿ| ದೇಶಾದ್ಯಂತ ನಡೆಸಲಾದ ಸೀರೋ ಸಮೀಕ್ಷೆಯಲ್ಲಿ ಅಚ್ಚರಿಯ ಮಾಹಿತಿ ಬಹಿರಂಗ|

ನವದೆಹಲಿ(ನ.18): ಧೂಮಪಾನಿಗಳು ಹಾಗೂ ಸಸ್ಯಾಹಾರಿಗಳಲ್ಲಿ ಕೊರೋನಾ ಹರಡುವ ಅಪಾಯ ಕಮ್ಮಿ ಎಂದು ಭಾರತ ದೇಶಾದ್ಯಂತ ನಡೆಸಲಾದ ಸೀರೋ ಸಮೀಕ್ಷೆಯಲ್ಲಿ ತಿಳಿದುಬಂದಿದೆ.

ಇದೇ ವೇಳೆ, ‘ಒ’ ರಕ್ತದ ಗುಂಪಿನವರಿಗೆ ಕೊರೋನಾ ಸಾಧ್ಯತೆ ಕಡಿಮೆ. ‘ಎ’ ಹಾಗೂ ‘ಎಬಿ’ ರಕ್ತ ಗುಂಪಿನವರಿಗೆ ಕೊರೋನಾ ಅಪಾಯ ಹೆಚ್ಚು ಎಂದೂ ವೈಜ್ಞಾನಿಕ ಹಾಗೂ ಔದ್ಯಮಿಕ ಸಂಶೋಧನಾ ಸಂಸ್ಥೆ, ತನ್ನ 40 ಕಚೇರಿಗಳ ಮೂಲಕ ನಡೆಸಿದ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.

ವ್ಯಕ್ತಿಗಳ ರಕ್ತದ ಮಾದರಿ ಸಂಗ್ರಹಿಸಿ ಈ ಸಮೀಕ್ಷೆ ನಡೆಸಲಾಗುತ್ತದೆ. ದೇಶದ 10,427 ವ್ಯಕ್ತಿಗಳ ರಕ್ತ ಮಾದರಿ ಪಡೆದು, ಇವರಲ್ಲಿ ಕೋವಿಡ್‌ ಪ್ರತಿಕಾಯ ಉತ್ಪತ್ತಿ ಆಗಿವೆಯೇ ಎಂದು ಪರೀಕ್ಷಿಸಲಾಗಿದೆ. ಆಗ 1,058 (ಶೇ.10.14) ಜನರಲ್ಲಿ ಪ್ರತಿಕಾಯಗಳು ದೃಢಪಟ್ಟಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Asha Bhosle Networth: ಪ್ರಸಿದ್ಧ ಗಾಯಕಿ ಮಾತ್ರವಲ್ಲ ವಿದೇಶದಲ್ಲಿ ಯಶಸ್ವಿ ಉದ್ಯಮಿಯೂ ಹೌದು! ನಿವ್ವಳ ಆಸ್ತಿ ಎಷ್ಟು?
ಭಾರತೀಯರ ಬಳಿ ಇದೆ ವಿಶ್ವದ ಟಾಪ್ 10 ಬ್ಯಾಂಕ್‌ಗಳಲ್ಲಿ ಇರುವುದಕ್ಕಿಂತ ಹೆಚ್ಚು ಚಿನ್ನ: ಬಲಿಷ್ಠ ರಾಷ್ಟ್ರಗಳ ಜಿಡಿಪಿಯನ್ನೂ ಮೀರಿಸಿದ ಸಂಪತ್ತು