
ನವದೆಹಲಿ(ಮೇ.29) ಕೋರ್ಟ್ ಸಾಕ್ಷಿ ಕೇಳುತ್ತೆ, ಕೊನೆಗೆ ಸತ್ಯದ ಪರವಾಗಿ ತೀರ್ಪು ನೀಡುತ್ತೆ. ಕೋರ್ಟ್‌ನಲ್ಲಿ ಸುಳ್ಳು ಹೇಳಲು ಅವಕಾಶವಿಲ್ಲ, ಹೇಳಿದರೆ ಸಾಕ್ಷಿ ಸಮೇತಾ ಬಟಾ ಬಯಲಾಗಲಿದೆ. ಇದೀಗ ಸುಪ್ರೀಂ ಕೋರ್ಟ್ ಜಸ್ಟೀಸ್ ಪಿವಿ ಸಂಜಯ್ ಕುಮಾರ್, ಅರ್ಜಿ ವಿಚಾರಣೆ ವೇಳೆ ಲಾಯರ್‌ಗೆ ನೀಡಿದ ಸಲಹೆಯೊಂದು ಭಾರಿ ಚರ್ಚೆಯಾಗುತ್ತದೆ. ಲಾಯರ್ ಇಷ್ಟು ಪ್ರಮಾಣಿಕರಾಗಿಬಾರದು. ಸಣ್ಣ ಸಣ್ಣ ಸುಳ್ಳು ಹೇಳಬಹುದು ಎಂದು ನ್ಯಾಯಾಧೀಶರು ಸಲಹೆ ನೀಡಿದ್ದಾರೆ. ಲಾಯರ್‌ಗೆ ಸುಳ್ಳು ಹೇಳಲು ಹೇಳಿದ ಪ್ರಸಂಗ ಸ್ವಾರಸ್ಯಕರವಾಗಿದೆ. ಆದರೆ ಹಲವು ವೇದಿಕೆಗಳಲ್ಲಿ ಈ ಸಲಹೆ ಚರ್ಚೆಯಾಗುತ್ತಿದೆ.
ಏನಿದು ಘಟನೆ?
ಒಂದು ಕೇಸ್ ನಂಬರ್ ಕೂಗಿ ಕೇಳಿದ ಬಳಿಕ ಪ್ರಕರಣಕ್ಕೆ ಸಂಬಂಧಪಟ್ಟ ವಕೀಲರು ಹಾಜರಾಗುತ್ತಾರೆ. ಬಳಿಕ ವಿಚಾರಣೆಗಳು ನಡೆಯುತ್ತದೆ.ಒಂದು ಪ್ರಮುಖ ಕೇಸ್ ವಿಚಾರವಾಗಿ ಹಿರಿಯ ವಕೀಲರು ಹಾಜರಾಗಬೇಕಿತ್ತು. ಆದರೆ ಹೈಕೋರ್ಟ್‌ನಲ್ಲಿ ಮತ್ತೊಂದು ಕೇಸ್ ಇದ್ದ ಕಾರಣ ಹರಿಯ ವಕೀಲ ತನ್ನ ಜ್ಯೂನಿಯರ್ ವಕೀಲರನ್ನು ಸುಪ್ರೀಂ ಕೋರ್ಟ್‌ಗೆ ಕಳುಹಿಸಿದ್ದರು. ಇತ್ತ ಸುಪ್ರೀಂ ಕೋರ್ಟ್‌ನಲ್ಲಿ ಜಸ್ಟೀಸ್ ಪಿವಿ ಸಂಜಯ್ ಕುಮಾರ್ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿತ್ತು. ಕೇಸ್ ನಂಬರ್ ಕೂಗಿ ವಿಚಾರಣೆ ಜಸ್ಟೀಸ್ ಸಂಜಯ್ ಕುಮಾರ್ ಸಜ್ಜಾಗಿದ್ದರು. ಆದರೆ ಹಿರಿಯ ವಕೀಲರು ಇನ್ನು ಆಗಮಿಸಿದ ಕಾರಣ ಕೊನೆಯಲ್ಲಿ ಕೇಸ್ ವಿಚಾರಣೆ ಮಾಡಲು ಜೂನಿಯರ್ ವಕೀಲರು ಮನವಿ ಮಾಡಿದ್ದಾರೆ. ಕೇಸ್ ಪಾಸ್ ಎಂದಿದ್ದಾರೆ. ಇದರಂದೆ ಕೇಸ್ ಪಾಸ್ ಮಾಡಿ ಮತ್ತೊಂದು ಅರ್ಜಿ ವಿಚಾರಣೆ ಮಾಡಿದ್ದಾರೆ.
ಇತರ ಕೇಸ್ ವಿಚಾರಣೆ ಬಳಿಕ ಮತ್ತೆ ಪಾಸ್ ಮಾಡಿದ ಕೇಸ್ ಕೂಗಿದ್ದಾರೆ. ಈ ಸಮಯಕ್ಕೂ ಹಿರಿಯ ವಕೀಲರಿಗೆ ಹಾಜರಾಗಲು ಸಾಧ್ಯವಾಗಿಲ್ಲ. ಹೀಗಾಗಿ ಕೋರ್ಟ್ ಹಾಲ್‌ನಲ್ಲಿದ್ದ ಜ್ಯೂನಿಯರ್ ವಕೀಲರು ಎದ್ದು ನಿಂತು, ಅಸಲಿ ಕಾರಣವನ್ನು ಪ್ರಾಮಾಣಿಕವಾಗಿ ನೀಡಿದ್ದಾರೆ. ಹಿರಿಯ ವಕೀಲರು ಹೈಕೋರ್ಟ್‌ನಲ್ಲಿರುವ ಪ್ರಕರಣದಲ್ಲಿ ಬ್ಯೂಸಿ ಇದ್ದಾರೆ. ಹೀಗಾಗಿ ಹಾಜರಾಗಲು ಸಾಧ್ಯವಾಗಿಲ್ಲ ಎಂದಿದ್ದಾರೆ.
ತುಂಬಾ ಪ್ರಾಮಾಣಿಕರಾಗಬೇಡಿ
ಜ್ಯೂನಿಯರ್ ವಕೀಲರು ಮಾತು ಕೇಳಿದ ಜಸ್ಟೀಸ್ ಪಿವಿ ಸಂಜಯ್ ಕುಮಾರ್ ಕೆಲ ಸಲಹೆ ನೀಡಿದ್ದಾರೆ. ನೀವು ತುಂಬಾ ಪ್ರಾಮಾಣಿಕರಾಗಬೇಡಿ. ಇದು ಭವಿಷ್ಯದಲ್ಲಿ ಇದನ್ನು ಕಲಿತುಕೊಳ್ಳಿ. ನೀವು ಯಾವತ್ತೂ ಸುಪ್ರೀಂ ಕೋರ್ಟ್‌ನಲ್ಲಿ ನಿಮ್ಮ ಸೀನಿಯರ ವಕೀರಲು ಹೈಕೋರ್ಟ್‌ನಲ್ಲಿ ತುಂಬಾ ಬ್ಯೂಸಿ ಇದ್ದಾರೆ ಎಂದು ಹೇಳಬೇಡಿ. ನಮ್ಮ ಇಗೋ ತುಂಬಾ ದುರ್ಬಲ. ಇಷ್ಟು ಪ್ರಮಾಣಿಕರಾಗಿ ಹೇಳುವುದು ಉತ್ತಮವಲ್ಲ. ಸಣ್ಣ ಸಣ್ಣ ಸುಳ್ಳು ಹೇಳಬಹುದು ಎಂದು ನ್ಯಾಯಧೀಶ ಪಿವಿ ಸಂಜಯ್ ಕುಮಾರ್ ಹೇಳಿದ್ದಾರೆ.
ಇದೇ ವೇಳೆ ದ್ವಿಸದಸ್ಯ ಪೀಠದಲ್ಲಿ ಮತ್ತೊಬ್ಬರು ಜಡ್ಜ್ ವಿಕ್ರಮ್ ನಾಥ್ , ಕಿರಿಯ ವಕೀಲರಿಗೆ ಸಲಹೆ ನೀಡಿದ್ದಾರೆ. ನಿಮ್ಮ ಹಿರಿಯ ವಕೀಲರು ಇದನ್ನೆಲ್ಲಾ ಕಲಿಸಿರಬೇಕು ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ