
ಲಖನೌ (ಅಕ್ಟೋಬರ್ 31, 2023): ಉತ್ತರ ಪ್ರದೇಶದ ನೋಯ್ಡಾದ ರೆಸಿಡೆನ್ಶಿಯಲ್ ಸೊಸೈಟಿಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಮತ್ತು ಕುಟುಂಬದ ನಡುವೆ ತಮ್ಮ ಸಾಕುನಾಯಿಯನ್ನು ಲಿಫ್ಟ್‌ನಲ್ಲಿ ಕರೆದೊಯ್ಯುವ ವಿಚಾರವಾಗಿ ವಾಗ್ವಾದ ನಡೆದಿದೆ. ನೋಯ್ಡಾದ ಸೆಕ್ಟರ್ 108 ರಲ್ಲಿ ಈ ಘಟನೆ ನಡೆದಿದ್ದು, ಸಂಪೂರ್ಣ ಘಟನೆ ಆವರಣದಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಹಾಗಾದ್ರೆ, ಈ ಘಟನೆಯಲ್ಲಿ ನಿಜಕ್ಕೂ ಆಗಿದ್ದೇನು ಅಂತೀರಾ.. ಬನ್ನಿ.. ಇಲ್ಲಿದೆ ಸಂಪೂರ್ಣ ವಿವರ.. ವಿಡಿಯೋದಲ್ಲಿ, ಇಬ್ಬರು ಮಹಿಳೆಯರು ತಮ್ಮ ಸಾಕು ನಾಯಿಯೊಂದಿಗೆ ಲಿಫ್ಟ್‌ನೊಳಗೆ ಕಾಣಿಸಿಕೊಂಡಿದ್ದಾರೆ. ಈ ಹಿನ್ನೆಲೆ ಒಬ್ಬ ವ್ಯಕ್ತಿ (ನಿವೃತ್ತ ಐಎಎಸ್ ಅಧಿಕಾರಿ) ಲಿಫ್ಟ್ ಅನ್ನು ಮುಚ್ಚಲು ಅಡ್ಡಿಪಡಿಸಿದ್ದು, ಮತ್ತು ಅವರು ಸಾಕುಪ್ರಾಣಿಯೊಂದಿಗೆ ಲಿಫ್ಟ್‌ನಿಂದ ಹೊರಹೋಗುವಂತೆ ಕೇಳಿದರು.
ಇದನ್ನು ಓದಿ: ಅತಿ ಕಡಿಮೆ ಬೆಲೆಯಲ್ಲಿ ಫ್ಲೈಟ್ ಟಿಕೆಟ್ ಖರೀದಿಸೋದು ಹೀಗೆ: ವಿಮಾನದ ಸಿಬ್ಬಂದಿಯಿಂದ್ಲೇ ರಹಸ್ಯ ಬಯಲು!
ಐಎಎಸ್ ಅಧಿಕಾರಿ ಲಿಫ್ಟ್‌ಗೆ ಅಡ್ಡಿಪಡಿಸುವುದನ್ನು ಮಹಿಳೆಯೊಬ್ಬರು ಚಿತ್ರೀಕರಿಸಲು ಪ್ರಾರಂಭಿಸಿದಾಗ ಅವರ ವಾದವು ಶೀಘ್ರದಲ್ಲೇ ಹಿಂಸಾತ್ಮಕ ತಿರುವು ಪಡೆದುಕೊಂಡಿದೆ. ಎರಡೂ ಕಡೆಯವರು ಹಿಂಸಾತ್ಮಕ ಕಾದಾಟದಲ್ಲಿ ತೊಡಗಿದಾಗ ಅಧಿಕಾರಿಯೂ ತನ್ನ ಫೋನ್ ತೆಗೆದುಕೊಂಡು ಸಂಪೂರ್ಣ ಸಂಚಿಕೆಯನ್ನು ಚಿತ್ರೀಕರಿಸಲು ಪ್ರಾರಂಭಿಸುತ್ತಾರೆ.
ಬಳಿಕ, ಮಹಿಳೆ ನಿವೃತ್ತ ಐಎಎಸ್ ಅಧಿಕಾರಿ ಫೋನ್ ಅನ್ನು ಕಸಿದುಕೊಳ್ಳೋದನ್ನು ನೋಡಬಹುದು. ಇದರಿಂದ ಸಿಟ್ಟಿಗೆದ್ದ ಅಧಿಕಾರಿ ಮಹಿಳೆಯ ಕೂದಲಿನಿಂದ ಹಿಡಿದು ಇಬ್ಬರು ಪರಸ್ಪರ ತಳ್ಳಾಡಿದ್ದಾರೆ. ಹಾಗೂ, ಒಬ್ಬರನೊಬ್ಬರು ಕಪಾಳಮೋಕ್ಷ ಮಾಡುವುದನ್ನೂ ನೋಡಬಹುದು.
ಇದನ್ನೂ ಓದಿ: ವಿಕಿಪೀಡಿಯಾ ತನ್ನ ಹೆಸರನ್ನು ಹೀಗೆ ಬದಲಾಯಿಸಿದ್ರೆ 1 ಬಿಲಿಯನ್ ಡಾಲರ್ ಕೊಡ್ತೀನಿ ಎಂದ ಎಲಾನ್ ಮಸ್ಕ್!
ಅಪಾರ್ಟ್‌ಮೆಂಟ್ ಸೊಸೈಟಿಯ ಇತರ ನಿವಾಸಿಗಳು ನೋಡ ನೋಡುತ್ತಿದ್ದಂತೆ ಎರಡೂ ಕಡೆಯವರು ವಾಗ್ವಾದ, ತಳ್ಳಾಟ, ಹೊಡೆದಾಟವನ್ನು ಮುಂದುವರಿಸಿದ್ದಾರೆ. ಸ್ವಲ್ಪ ಸಮಯದ ನಂತರ, ಮಹಿಳೆಯ ಪತಿ ಮಧ್ಯಪ್ರವೇಶಿಸಿ ನಿವೃತ್ತ ಐಎಎಸ್ ಅಧಿಕಾರಿಯನ್ನು ಥಳಿಸಿದ್ದಾರೆ. ನಂತರ, ಅಪಾರ್ಟ್‌ಮೆಂಟ್ ಭದ್ರತಾ ಸಿಬ್ಬಂದಿ ಮತ್ತು ಇತರ ಉಸ್ತುವಾರಿಗಳು ಘಟನಾ ಸ್ಥಳಕ್ಕೆ ಬಂದು ಲಿಫ್ಟ್‌ನ ಎಲ್ಲಾ ನಿವಾಸಿಗಳನ್ನು ಲಿಫ್ಟ್‌ನಿಂದ ಖಾಲಿ ಮಾಡಿಸುತ್ತಾರೆ.
ಈ ಮಧ್ಯೆ, ಘಟನೆಯ ಬಗ್ಗೆ ನಮಗೆ ಯಾವುದೇ ಔಪಚಾರಿಕ ದೂರು ಬಂದಿಲ್ಲ ಮತ್ತು ಎರಡೂ ಕಡೆಯವರ ನಡುವಿನ ಮಾತುಕತೆಯ ಬಳಿಕ ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂದೂ ಉfತತರ ಪ್ರದೇಶದ ನೋಯ್ಡಾ ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ