Latest Videos

ರೀಲ್ಸ್‌ಗಾಗಿ ನಡುರಸ್ತೆಯಲ್ಲಿ ಕಾರ್‌ ಸ್ಟಂಟ್‌ : 3 ಇನ್ಸ್ಟಾಗ್ರಾಮ್ ಹೀರೋಗಳ ಜೈಲಿಗಟ್ಟಿದ ಪೊಲೀಸರು

By Anusha KbFirst Published Oct 31, 2023, 12:44 PM IST
Highlights

 ಇನ್ಸ್ಟಾಗ್ರಾಮ್‌ನಲ್ಲಿ ಹೆಚ್ಚೆಚ್ಚು ಫಾಲೋವರ್ಸ್‌ಗಳನ್ನು ಗಳಿಸಲು ಹೋಗಿ ಗುರುಗ್ರಾಮದ ಮೂವರು ಯುವಕರು  ಈಗ ಕಂಬಿ ಹಿಂದೆ ಕುಳಿತಿದ್ದಾರೆ. 

ಗುರುಗ್ರಾಮ್‌: ಇನ್ಸ್ಟಾಗ್ರಾಮ್‌ನಲ್ಲಿ ಹೆಚ್ಚೆಚ್ಚು ಫಾಲೋವರ್ಸ್‌ಗಳನ್ನು ಗಳಿಸಲು ಹೋಗಿ ಗುರುಗ್ರಾಮದ ಮೂವರು ಯುವಕರು  ಈಗ ಕಂಬಿ ಹಿಂದೆ ಕುಳಿತಿದ್ದಾರೆ. ಈ ಮೂವರು ತರುಣರು ಗುರುಗ್ರಾಮದ ಗಾಲ್ಫ್‌ ಕೋರ್ಸ್‌ ರಸ್ತೆಯಲ್ಲಿ ರೀಲ್ಸ್‌ಗಾಗಿ ಭಯಾನಕ ಕಾರ್ ಸ್ಟಂಟ್ ಮಾಡಿದ್ದು, ಇದು ಆ ರಸ್ತೆಯಲ್ಲಿ ಟ್ರಾಫಿಕ್ ಜಾಮ್‌ಗೆ ಕಾರಣವಾಯ್ತು. ಅಲ್ಲದೇ ಇವರು ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಇವರೆಣಿಸಿದಷ್ಟೇ ವೇಗದಲ್ಲಿ ವೈರಲ್ ಕೂಡ ಆಯ್ತು. ಈ ವೈರಲ್ ವೀಡಿಯೋ ಗಮನಿಸಿದ ಪೊಲೀಸರು ( Gurugram police) ಈ ಮೂವರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. 

ಈ ವೀಡಿಯೋದಲ್ಲಿ ಕಾಣಿಸುವಂತೆ ಗಾಲ್ಫ್‌ ಕೋರ್ಸ್‌ ರಸ್ತೆಯಲ್ಲಿ (Golf Course Road) ಇತರ ಮೂರು ಕಾರುಗಳ ಜೊತೆ ಕೆಂಪು ಬಣ್ಣದ ಸ್ವಿಫ್ಟ್‌ ಕಾರನ್ನು ರೀವರ್ಸ್‌ ಗೇರ್‌ನಲ್ಲಿ ಓಡಿಸುವುದನ್ನು ಕಾಣಬಹುದಾಗಿದೆ. ಅಲ್ಲದೇ ಹಿನ್ನೆಲೆಯಲ್ಲಿ ಹರ್ಯಾಣಿ ಡಿಜೆ ಹಾಡು ಕೂಡ ಕೇಳಿಸುತ್ತಿದೆ. ಇದನ್ನು ನಂತರ ಇವರು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದೂ ಸ್ವಲ್ಪ ಹೊತ್ತಿನಲ್ಲಿ ವೈರಲ್‌ ಆಗಿದೆ. ಆದರೆ ಫಾಲೋವರ್ಸ್‌ಗಳನ್ನು ಇದು ಹೆಚ್ಚಿಸುವ ಬದಲು ಈ ಮೂವರನ್ನು ಕಂಬಿ ಹಿಂದೆ ಕೂರುವಂತೆ ಮಾಡಿದೆ.  ಈ ಸ್ಟಂಟ್‌ಗಾಗಿ ಈ ಕಾರಿನ ಜೊತೆ ಬಳಸಿದ್ದ ಇನ್ನೂ ಮೂರು ಕಾರುಗಳನ್ನು ಕೂಡ ಪೊಲೀಸರು ಸೀಜ್ ಮಾಡಿದ್ದಾರೆ. 

ಪೊಲೀಸರಿಂದ ತಪ್ಪಿಸಿಕೊಳ್ಳಲು ಕೆರೆಗೆ ಹಾರಿ ಈಜಿ ಪರಾರಿಯಾದ ಡ್ರಗ್ ಪೆಡ್ಲರ್

ಈ ಸ್ಟಂಟ್‌ಗಾಗಿ ಸ್ವಿಫ್ಟ್‌ ಕಾರನ್ನು ಮಾರ್ಪಡಿಸಲಾಗಿದ್ದು, ಬಿಳಿ ಬಣ್ಣದಲ್ಲಿದ್ದ ಸ್ವಿಫ್ಟ್ ಕಾರನ್ನು (Swift car) ಕೆಂಪು ಬಣ್ಣಕ್ಕೆ ಮಾರ್ಪಡಿಸಲಾಗಿತ್ತು. ಅಲ್ಲದೇ ವಾಹನದಲ್ಲಿದ್ದವರು ಅತೀ ವೇಗದ ಜೊತೆ ಅಜಾಗರೂಕವಾಗಿ ವಾಹನ ಚಲಾಯಿಸಿದ್ದರು. ಅವರು ರೀಲ್ಸ್‌ಗಾಗಿ ಕಾರ್‌ನಲ್ಲಿ ಸ್ಟಂಟ್ ಮಾಡ್ತಿದ್ರು ಎಂದು ಸಹಾಯಕ ಪೊಲೀಸ್ ಕಮೀಷನರ್ ಕಪಿಲ್ ಅಹ್ಲಾವತ್ ಹೇಳಿದ್ದಾರೆ. 

ಭಾರತದಿಂದಲೂ ಇಸ್ರೇಲ್‌ ರೀತಿ ಸ್ವದೇಶಿ 'ಐರನ್‌ ಡೋಮ್‌': ಡಿಆರ್‌ಡಿಒದಿಂದ 5 ವರ್ಷಗಳಲ್ಲಿ ನಿರ್ಮಾಣ

ಈ ರೀತಿ ಘಟನೆ ಗುರುಗ್ರಾಮ್‌ನಲ್ಲಿ ಹೊಸದೇನು ಅಲ್ಲ, ನಗರದ ರಸ್ತೆಗಳು ಆಗಾಗ ಈ ರೀತಿ ಅಪಾಯಕಾರಿ ಸ್ಟಂಟ್‌ಗಳಿಗೆ ಸಾಕ್ಷಿಯಾಗುತ್ತದೆ.  ಇತ್ತೀಚೆಗಷ್ಟೇ ಚಲಿಸುತ್ತಿರುವ ಕಾರೊಂದರ ರೂಫ್ ಮೇಲೆ ಪಟಾಕಿ ಸಿಡಿಸುತ್ತಿರುವ  ಘಟನೆಯೊಂದು ಇಲ್ಲಿ ನಡೆದಿತ್ತು. ಯುವ ಸಮೂಹಕ್ಕೆ ಈ ರೀತಿಯ ಸ್ಟಂಟ್‌ಗಳನ್ನು ರಸ್ತೆಯಲ್ಲಿ ಮಾಡದಂತೆ ಕಮೀಷನರ್ ಅಹ್ಲಾವತ್ ಮನವಿ ಮಾಡಿದ್ದು, ಇದು ಅವರಿಗೆ ಮಾತ್ರ ಹಾನಿ ಮಾಡುವುದಿಲ್ಲ, ಇತರರನ್ನು ಅಪಾಯಕ್ಕೆ ದೂಡುತ್ತದೆ ಎಂದು ಹೇಳಿದ್ದಾರೆ. 

click me!