ಟಾಪ್‌ 10 ಸ್ವಚ್ಛ ಗಾಳಿಯ ನಗರಗಳಲ್ಲಿ ರಾಜ್ಯದ 6 !

Kannadaprabha News   | Kannada Prabha
Published : Dec 08, 2025, 06:14 AM IST
Shillong

ಸಾರಾಂಶ

ನವೆಂಬರ್‌ ತಿಂಗಳಿನಲ್ಲಿ ಸ್ವಚ್ಚ ಪರಿಸರ ಮತ್ತು ಕಲುಷಿತ ಪರಿಸರ ಹೊಂದಿದ್ದ ದೇಶದ ಅಗ್ರ 10 ನಗರಗಳ ಪಟ್ಟಿಯೊಂದು ಬಿಡುಗಡೆಯಾಗಿದೆ. ಇದರಲ್ಲಿ ಕರ್ನಾಟಕದ 6 ನಗರ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ನವದೆಹಲಿ: ನವೆಂಬರ್‌ ತಿಂಗಳಿನಲ್ಲಿ ಸ್ವಚ್ಚ ಪರಿಸರ ಮತ್ತು ಕಲುಷಿತ ಪರಿಸರ ಹೊಂದಿದ್ದ ದೇಶದ ಅಗ್ರ 10 ನಗರಗಳ ಪಟ್ಟಿಯೊಂದು ಬಿಡುಗಡೆಯಾಗಿದೆ. ಇದರಲ್ಲಿ ಕರ್ನಾಟಕದ 6 ನಗರ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಕೊಪ್ಪಳ ರಾಜ್ಯದಲ್ಲೇ ನಂ.1 ಸ್ಥಾನದಲ್ಲಿದೆ. ಇನ್ನು ಟಾಪ್‌ 10 ಕಲುಷಿತ ನಗರಗಳ ಪಟ್ಟಿಯಲ್ಲಿ ರಾಜ್ಯದ ಯಾವುದೇ ನಗರ ಸ್ಥಾನ ಪಡೆದಿಲ್ಲ.

ಸೆಂಟರ್‌ ಫಾರ್‌ ರಿಸರ್ಚ್‌ ಆನ್‌ ಎನರ್ಜಿ ಆ್ಯಂಡ್‌ ಕ್ಲೀನ್‌ ಏರ್‌ (ಸಿಆರ್‌ಇಎ) ಸಿದ್ಧಪಡಿಸಿರುವ ವರದಿಗೆ 225 ನಗರಗಳನ್ನು ಪರಿಗಣಿಸಲಾಗಿದ್ದು, ಅದರಲ್ಲಿ 114 ನಗರಗಳು ಉತ್ತಮ ವಾಯು ಮಾನದಂಡ ಪೂರೈಸಿದೆ.

ಮೇಘಾಲಯದ ಶಿಲ್ಲಾಂಗ್‌ ಅತ್ಯಂತ ಸ್ವಚ್ಛ ನಗರಿ ಎನ್ನುವ ಖ್ಯಾತಿಯೊಂದಿಗೆ ಮೊದಲನೇ ಸ್ಥಾನದಲ್ಲಿದೆ. ಉಳಿದಂತೆ ಸಿಕ್ಕಿಂನ ಗ್ಯಾಂಗ್ಟಕ್‌ (2), ಕರ್ನಾಟಕದ ಕೊಪ್ಪಳ (3), ಚಾಮರಾಜನಗರ (4) , ತಮಿಳುನಾಡಿನ ಪಾಲ್ಕಲೈಪೆರೂರ್ (5), ಶಿವಮೊಗ್ಗ (6) ಕೇರಳದ ತಿರುವನಂತಪುರಂ(7), ಗದಗ (8), ಮೈಸೂರು (9), ಬಾಗಲಕೋಟೆ(10) ಅಗ್ರ 10ರಲ್ಲಿದೆ.

ಗಾಜಿಯಾಬಾದ್‌ ಕಳಪೆ:

ಉತ್ತರಪ್ರದೇಶದ ಗಾಜಿಯಾಬಾದ್‌ ದೇಶದ ಅತಿ ಕಲುಷಿತ ನಗರ ಎನ್ನುವ ಹಣೆಪಟ್ಟಿಯೊಂದಿಗೆ ಅಗ್ರಸ್ಥಾನದಲ್ಲಿದೆ. ಉಳಿದಂತೆ ನೋಯ್ಡಾ, ಬಹಾದ್ದೂರ್‌ಗಡ, ದೆಹಲಿ,ಹಾಪುರ್, ಗ್ರೇಟರ್‌ ನೋಯ್ಡಾ, ಬಾಘಪತ್, ಸೋನಿಪತ್, ಮೇರಠ್, ರೋಹ್ಟಕ್‌ ಅಗ್ರ 10ರಲ್ಲಿ ಸ್ಥಾನ ಪಡೆದಿವೆ.

ದೆಹಲಿಯಲ್ಲಿ ಮಲಿನತೆ ದುಪ್ಪಟ್ಟು:

ಅತ್ಯಂತ ಕೆಟ್ಟ ವಾಯು ಹೊಂದಿರುವ ನಗರ ಎನ್ನುವ ಕುಖ್ಯಾತಿ ಹೊಂದಿರುವ ದೆಹಲಿಯಲ್ಲಿ ವಾಯು ಮಾಲಿನ್ಯ ನವೆಂಬರ್‌ನಲ್ಲಿ ಅಕ್ಟೋಬರ್‌ ತಿಂಗಳಿಗಿಂತ ದುಪ್ಪಟ್ಟಾಗಿದೆ. ಇಲ್ಲಿ ಪಿಎಂ 2.5 ಸಾಂದ್ರತೆಯು 215 ಘನ ಮೈಕ್ರೋ ಮೀಟರ್‌ನಷ್ಟಿದೆ. ಆಕ್ಟೋಬರ್‌ನಲ್ಲಿ ಈ ಪ್ರಮಾಣ 107ರಷ್ಟಿತ್ತು.

ಟಾಪ್‌ 10 ಸ್ವಚ್ಛ ನಗರಿಗಳು

1. ಶಿಲ್ಲಾಂಗ್‌

2. ಗ್ಯಾಂಗ್ಟಕ್‌

3. ಪಾಲ್ಕಲೈಪೆರೂರ್

4. ಕೊಪ್ಪಳ

5. ಚಾಮರಾಜನಗರ

6. ಶಿವಮೊಗ್ಗ

7. ತಿರುವನಂತಪುರಂ

8. ಗದಗ

9. ಮೈಸೂರು

10. ಬಾಗಲಕೋಟೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ನೂ 3 ದಿನ ತಗ್ಗುವುದಿಲ್ಲ ಇಂಡಿಗೋಳು! - ನಿನ್ನೆ ಮತ್ತೆ 650 ವಿಮಾನ ರದ್ದು
ಮೆಹಬೂಬಾ...ಹಾಡಿಗೆ ನೃತ್ಯದ ವೇಳೆ ಗೋವಾ ಪಬ್‌ ದುರಂತ!