ಮೋದಿ ಕ್ಯಾಬಿನೆಟ್‌ನಲ್ಲಿ 6 ಮಾಜಿ ಸಿಎಂ, 9 ಹೊಸ ಮುಖ; 72 ಸಚಿವರ ಪಟ್ಟಿ ಇಲ್ಲಿದೆ!

By Chethan Kumar  |  First Published Jun 9, 2024, 10:56 PM IST

ಪ್ರಧಾನಿ ನರೇಂದ್ರ ಮೋದಿ 3.0 ಸರ್ಕಾರ ರಚನೆಗೊಂಡಿದೆ. ಮೋದಿ ಪ್ರಮಾಣವಚನ ಬಳಿಕ ಒಟ್ಟು 72 ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ. 6 ಮಾಜಿ ಸಿಎಂ ಮೋದಿ ಕ್ಯಾಬಿನೆಟ್‌ನಲ್ಲಿದ್ದಾರೆ. 9 ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ.
 


ನವದೆಹಲಿ(ಜೂ.09) ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆಗೊಂಡಿದೆ. ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ಪ್ರಧಾನಿ ಮೋದಿ ಸೇರಿದಂತೆ 72 ಸಚಿವರು ಪ್ರಮಾಣವಚನ ಸಲ್ಲಿಸಿದ್ದಾರೆ. ಮೋದಿ ಕ್ಯಾಬಿನೆಟ್‌ನಲ್ಲಿ ಮಾಜಿ ಮುಖ್ಯಮಂತ್ರಿಗಳ ದಂಡೇ ಇದೆ. ಮೂರು ಬಾರಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿರುವ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹ್ವಾಣ್, ಹರ್ಯಾಣ ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್, ಉತ್ತರ ಪ್ರದೇಶ ಮಾಜಿ ಸಿಎಂ ರಾಜನಾಥ್ ಸಿಂಗ್, ಅಸ್ಸಾಂ ಮಾಜಿ ಮುಖ್ಯಮಂತ್ರಿ ಸೊರ್ಬಾನಂದ್ ಸೊನ್ವಾಲ್, ಎನ್‌ಡಿಎ ಮಿತ್ರ ಪಕ್ಷಗಳಿಂದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ, ಬಿಹಾರ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಜಿ ಇದೀಗ ಮೋದಿ ಕ್ಯಾಬಿನೆಟ್ ಸೇರಿದ್ದಾರೆ.

ಪ್ರಮುಖ ಖಾತೆಗಳನ್ನು ಬಿಜೆಪಿ ಉಳಿಸಿಕೊಂಡಿದೆ. ಹೀಗಾಗಿ ಬಿಜೆಪಿ ಸ್ಟಾರ್ ನಾಯಕರಾದ ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ, ಜೆಪಿ ನಡ್ಡಾ, ನಿರ್ಮಲಾ ಸೀತಾರಾಮನ್, ಜೈಶಂಕರ್, ಕಿರಿಣ್ ರಿಜಿಜು, ಜ್ಯೋತಿರಾಧಿತ್ಯ ಸಿಂಧಿಯಾ, ಹರ್ದಿಪ್ ಸಿಂಗ್ ಪುರಿ,  ಸೇರಿದಂತೆ ಕೆಲ ಪ್ರಮುಖ ನಾಯಕರು ಪ್ರಮಾಣವಚನ ಸ್ವೀಕರಿಸಿ ಸಂಪುಟ ಸೇರಿಕೊಂಡಿದ್ದಾರೆ. 

Tap to resize

Latest Videos

3ನೇ ಬಾರಿ ಪ್ರಧಾನಿಯಾದ ಮೋದಿ ತಿಂಗಳ ಸ್ಯಾಲರಿ ಎಷ್ಟು? ಸಿಗುವ ಸೌಲಭ್ಯವೇ ...

ಕ್ಯಾಬಿನೆಟ್ ಸಚಿವರಾಗಿ 30 ಮಂದಿ, ರಾಜ್ಯ ಖಾತೆ ಸಚಿವರಾಗಿ 36 ನಾಯಕರು ಹಾಗೂ ರಾಜ್ಯ ಖಾತೆ ಸ್ವತಂತ್ರ ಸಚಿವರಾಗಿ ಐವರು ಪ್ರಮಾಣವಚನ ಸ್ವೀಕರಿಸಿದ್ದಾರೆ.

ಸ್ವತಂತ್ರ ಉಸ್ತುವಾರಿ ರಾಜ್ಯ ಖಾತೆ ಸಚಿವರು
ಅರ್ಜುನ್ ರಾಮ್ ಮೇಘವಾಲ್
ಪ್ರತಾಪ್ ಜಾಧವ್
ಜಯಂತ್ ಚೌಧರಿ 
ಇಂದ್ರಜಿತ್ ಸಿಂಗ್ ರಾವ್
ಜಿತೇಂದ್ರ ಸಿಂಗ್
 
ರಾಜ್ಯ ಖಾತೆ ಸಚಿವರು(Mos)
ಪಂಕಜ್ ಚೌಧರಿ 
ಜಿತಿನ್ ಪ್ರಸಾದ್
ಶ್ರೀಪಾದ್ ಯೆಸ್ಸೋ ನಾಯ್ಕ್
ರಾಮನಾಥ್ ಠಾಕೂರ್
ಕಿಶನ್ ಪಾಲ್
ರಾಮದಾಸ್ ಅಠವಳೆ
ನಿತ್ಯಾನಂದ ರೈ
ವಿ ಸೋವಣ್ಣ
ಅನುಪ್ರಿಯಾ ಪಟೇಲ್
ಪೆಮ್ಮಸಾನಿ ಚಂದ್ರಶೇಖರ್
ಸೋಭಾ ಕರಂದ್ಲಾಜೆ
ಎಸ್‌ಪಿ ಸಿಂಗ್ ಭಗೇಲ್
 ಬಿಎಲ್ ಶರ್ಮಾ
ಶಂತನ್ ಠಾಕೂರ್
ಕೀರ್ತಿ ವರ್ಧನ್ ಸಿಂಗ್
ಸುರೇಶ್ ಗೋಪಿ
ಅಜ್ ತಮ್ತಾ
ಎಲ್ ಮುರುಗನ್
ಕಮಲೇಶ್ ಪಾಸ್ವಾನ್ ಬಂಡಿ ಸಂಜಯ್ ಕುಮಾರ್
ಭಗೀರಥ ಚೌಧರಿ
ಸತೀಸ್ ದುಬೆ
ರವನೀತ್ ಸಿಂಗ್
ದುರ್ಗಾ ದಾಸ್
ಸಂಜೇಯ್ ಸೇಠ್
ಸುಕಾಂತ್ ಮಜುಂದಾರ್
ರಕ್ಷಾ ನಿಖಿಲ್ ಖಡ್ಸೆ
ತೋಖಾನ್ ಸಾಹು
ಸಾವಿತ್ರಿ ಠಾಕೂರ್
ಬಿಆರ್‌ಎಸ್ ವರ್ಮಾ
ರಾಜ್ ಭೂಷಣ್ ಚೌಧರಿ
ಮರುಳೀಧರ್ ಮಹೋಲ್
ನಿಮುಬೆನ್ ಬಾಂಬ್ನಿಯಾ
ಹರ್ಷಾ ಮಲ್ಹೋತ್ರಾ
ಪಬಿತ್ರಾ ಮಾರ್ಗರಿಟಾ
ಜಾರ್ಜ್ ಕುರಿಯನ್ 

ಪ್ರಧಾನಿ ಮೋದಿ 3.O ಸರ್ಕಾರ, ರಾಜ್ಯ ಸಂಸದರ ಪೈಕಿ ಮೊದಲಿಗರಾಗಿ ಕುಮಾರಸ್ ...

click me!