ಸಹೋದರಿ ಮದ್ವೆ: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ ಜಾಮೀನು

By Anusha KbFirst Published Dec 12, 2022, 9:55 PM IST
Highlights

ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆ ಪ್ರಕರಣದ ಆರೋಪಿ ಹಾಗೂ ಜೆಎನ್‌ಯು ವಿವಿಯ ಹಳೆ ವಿದ್ಯಾರ್ಥಿ ಉಮರ್ ಖಾಲಿದ್‌ಗೆ ದೆಹಲಿ ಕೋರ್ಟ್ 7 ದಿನಗಳ ಮಧ್ಯಂತರ ಜಾಮೀನು ನೀಡಿದೆ. ಸಹೋದರಿಯ ಮದುವೆಯಲ್ಲಿ ಭಾಗಿಯಾಗುವ ಸಲುವಾಗಿ ಕೋರ್ಟ್ ಈ ಜಾಮೀನು ಮಂಜೂರು ಮಾಡಿದೆ. 

ದೆಹಲಿ: ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆ ಪ್ರಕರಣದ ಆರೋಪಿ ಹಾಗೂ ಜೆಎನ್‌ಯು ವಿವಿಯ ಹಳೆ ವಿದ್ಯಾರ್ಥಿ ಉಮರ್ ಖಾಲಿದ್‌ಗೆ ದೆಹಲಿ ಕೋರ್ಟ್ 7 ದಿನಗಳ ಮಧ್ಯಂತರ ಜಾಮೀನು ನೀಡಿದೆ. ಸಹೋದರಿಯ ಮದುವೆಯಲ್ಲಿ ಭಾಗಿಯಾಗುವ ಸಲುವಾಗಿ ಕೋರ್ಟ್ ಈ ಜಾಮೀನು ಮಂಜೂರು ಮಾಡಿದೆ.  ಹೆಚ್ಚುವರಿ ಸೆಷನ್ ನ್ಯಾಯಾಲಯದ (Additional Sessions Judge) ನ್ಯಾಯಾಧೀಶ ಅಮಿತಾಭ್ ರಾವತ್ (Amitabh Rawat) ಅವರು ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ ಡಿಸೆಂಬರ್ 23 ರಿಂದ 30 ರವರೆಗೆ 7 ದಿನಗಳ ಮಧ್ಯಂತರ ಜಾಮೀನು ನೀಡಲಾಗಿದೆ. ಡಿಸೆಂಬರ್ 30 ರಂದು ಆತ ಮತ್ತೆ ಜೈಲಿಗೆ ಮರಳಬೇಕಿದೆ. ಅಲ್ಲದೇ ಈ ಮಧ್ಯಂತರ ಜಾಮೀನು ಅವಧಿಯನ್ನು ವಿಸ್ತರಿಸಲು ಕೋರ್ಟ್ ನಿರಾಕರಿಸಿದೆ. ತನ್ನ ಸಹೋದರಿಯ ಮದ್ವೆ ಇರುವ ಕಾರಣ ಡಿಸೆಂಬರ್ 20 ರಿಂದ ಜನವರಿ 3ರವರೆಗೆ ಎರಡು ವಾರಗಳ ಮಧ್ಯಂತರ ಜಾಮೀನು ನೀಡುವಂತೆ ಕೋರ್ಟ್ ಮೊರೆ ಹೋಗಿದ್ದರು.

ಉಮರ್ ಖಾಲಿದ್ 2020ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಮಾಸ್ಟರ್‌ಮೈಂಡ್ (mastermind) ಆಗಿದ್ದು, ಈ ಗಲಭೆಯಲ್ಲಿ 53 ಜನರು ಸಾವಿಗೀಡಾಗಿದ್ದು 700 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಭಯೋತ್ಪಾದನಾ ವಿರೋಧಿ ಹಾಗೂ ಕಾನೂನು ಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ  (UAPA) ಹಾಗೂ ಭಾರತೀಯ ದಂಡ ಸಂಹಿತೆಯ ಹಲವು ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.  ಕೇಂದ್ರ ಸರ್ಕಾರ ಜಾರಿಗೊಳಿಸಿದ ಪೌರತ್ವ ತಿದ್ದುಪಡಿ ಕಾಯ್ದೆ (CAA) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ ಕಾಯ್ದೆ (NRC) ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಸಂದರ್ಭದಲ್ಲಿ ಭಾರಿ ಹಿಂಸಾಚಾರ ನಡೆದು ಅನೇಕರು ಪ್ರಾಣ ಕಳೆದುಕೊಂಡಿದ್ದಲ್ಲದೇ ಹಲವರು ಗಾಯಗೊಂಡಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ಪೊಲೀಸರು 2020ರಲ್ಲಿ ಖಲೀದ್‌ನನ್ನು ಬಂಧಿಸಿದ್ದರು. ಇದಕ್ಕೂ ಮೊದಲು ಡಿಸೆಂಬರ್ 3 ರಂದು ನಡೆದ ಗಲಭೆ ಪ್ರಕರಣದಲ್ಲಿ ಖಲೀದ್‌ನನ್ನು ಖುಲಾಸೆ ಮಾಡಲಾಗಿದೆ.

Delhi Riots 2020: ದೆಹಲಿ ಗಲಭೆ ಪ್ರಕರಣದಲ್ಲಿ ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್, ಸೈಫಿ ಖುಲಾಸೆ

2020 Delhi Riots Case: ಗಲಭೆಗೆ ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್‌ ಖಾಲಿದ್‌ ಪಿತೂರಿ!

ಉಮರ್ ಖಾಲಿದ್‌ಗೆ ಬಿಗ್ ಶಾಕ್, ದೆಹಲಿ ಗಲಭೆ ಪ್ರಕರಣದಲ್ಲಿ ಜಾಮೀನು ಅರ್ಜಿ ತಿರಸ್ಕೃತ!

Delhi Riots : "ಬೆಂಕಿ ಹಚ್ಚೋಕೆ ನಾವು ಸಿದ್ಧ", ಉಮರ್ ಖಾಲಿದ್ ಬಗ್ಗೆ ಕೋರ್ಟ್ ನಲ್ಲಿ ಸಾಕ್ಷಿ ಸಮೇತ ವಿವರ ನೀಡಿದ ವಕೀಲರು!
 

click me!