
ಚೆನ್ನೈ (ಡಿ.19) ಚುನಾವಣಾ ಆಯೋಗ ಭಾರತದಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ( SIR) ಮಾಡುತ್ತಿದೆ. ಕಾಂಗ್ರೆಸ್ ಸೇರಿದಂತೆ ಹಲವು ಇಂಡಿಯಾ ಕೂಡದ ಮೈತ್ರಿ ಪಕ್ಷಗಳು SIR ವಿರೋಧಿಸಿದೆ. ಇದರ ನಡುವೆ ಹಲವು ರಾಜ್ಯಗಳಲ್ಲಿ SIR ನಡೆಯುತ್ತಿದೆ. ಇದೀಗ ತಮಿಳುನಾಡಿನಲ್ಲಿ SIR ಪ್ರಮುಖ ಘಟ್ಟವಾಗಿರುವ ಪಟ್ಟಿ ಹೊರಬಿದ್ದಿದೆ. ಅಚ್ಚರಿ ಅಂದರೆ ಬರೋಬ್ಬರಿ 90 ಲಕ್ಷ ಮತದಾರರ ಹೆಸರು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಈ ಕುರಿತ ಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಇದೇ ವೇಳೆ ತಪ್ಪಾಗಿ ಮತದಾರರ ಹೆಸರು ತೆಗೆದು ಹಾಕಿದ್ದರೆ ಮತ್ತೆ ಸೇರಿಸಲು ಅವಕಾಶವಿದೆ ಎಂದಿದೆ. ಆದರೆ 90 ಲಕ್ಷ ಮತದಾರರ ಹೆಸರು ಡಿಲೀಟ್ ಇದೀಗ ತಮಿಳುನಾಡಿನ ರಾಜಕೀಯ ಲೆಕ್ಕಚಾರವನ್ನೇ ಬದಲಾಯಿಸಲಿದೆ.
ತಮಿಳುನಾಡಿನಲ್ಲಿ ಇದುವರೆಗೆ (ಡಿ.19) 6,41,14,587 ಮತದಾರರಿಗೆ SIR ಫಾರ್ಮ್ ನೀಡಲಾಗಿತ್ತು. ಈ ಪೈಕಿ 5,43,76,755 ಮತದಾರರು ಫಾರ್ಮ್ ಭರ್ತಿ ಮಾಡಿ ಚುನಾವಣಾ ಆಯೋಗಕ್ಕೆ ನೀಡಿದೆ. ಇದು ಮೊದಲ ಹಂತದ SIR. ಇಲ್ಲೇ ಇಷ್ಟು ಲಕ್ಷ ಲಕ್ಷ ಮತದಾರರರು ಅರ್ಜಿ ಭರ್ತಿ ಮಾಡಿ ನೀಡುವಲ್ಲಿ ವಿಫಲರಾಗಿದ್ದಾರೆ. ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಮರಳಿ ನೀಡುವಲ್ಲಿ ವಿಫಲಾಗಿದ್ದಾರೆ. ಹೀಗಾಗಿ ಮೊದಲ ಹಂತದಲ್ಲಿ 90 ಲಕ್ಷ ಮತದಾರರ ಹೆಸರು ಪಟ್ಟಿಯಿಂದ ತೆಗೆದು ಹಾಕಲಾಗತ್ತದೆ. ಹೀಗೆ ತೆಗೆದು ಹಾಕಿದ ಹೆಸರಿನಲ್ಲಿ ನೈಜ ಮತದಾರರು ಇದ್ದರೆ ಸೂಕ್ತ ದಾಖಲೆ ಮೂಲಕ ತಕ್ಷಣವೇ ಸೇರಿಸಲಾಗುತ್ತದೆ ಎಂದು ಆಯೋಗ ಹೇಳಿದೆ.
ಸದ್ಯ ತಮಿಳುನಾಡಿನಲ್ಲಿ ಮೊದಲ ಹಂತದ SIR ಪ್ರಕ್ರಿಯೆ ಚಾಲ್ತಿಯಲ್ಲಿದೆ. ಸಂಪೂರ್ಣತಮಿಳುನಾಡಿನಲ್ಲಿ SIR ಪ್ರಕ್ರಿಯೆ ಪೂರ್ಣಗೊಳಿಸಿ ಚುನಾವಣಾ ಆಯೋಗ SIR ಕರಡು ಪ್ರತಿ ಪ್ರಕಟಿಸಲಿದೆ.ಇಲ್ಲಿ ಸ್ಪಷ್ಟವಾಗಿ ಯಾವ ಮತದಾರರ ಹೆಸರು ಪಟ್ಟಿಯಿಂದ ತೆಗೆದು ಹಾಕಲಾಗಿದೆ ಅನ್ನೋದು ಸ್ಪಷ್ಟವಾಗಿ ಆಯೋಗ ಹೇಳಲಿದೆ. ಈ ಪಟ್ಟಿಯಲ್ಲಿ ನೈಜ ಮತದಾರರ ಹೆಸರು ತೆಗೆದು ಹಾಕಿದ್ದರೆ ಸೇರಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಹೀಗೆ ಪಶ್ಚಿಮ ಬಂಗಾಳ, ರಾಜಸ್ಥಾನ ಹಾಗೂ ಗೋವಾದಲ್ಲಿ ಕರಡು ಪ್ರತಿ ಪ್ರಕಟಿಸಲಾಗಿದೆ. ಇದರ ಜೊತೆಗೆ ಕೇಂದ್ರಾಡಳಿತ ಪ್ರದೇಶವಾಗಿರುವ ಪುದುಚೇರಿ ಹಾಗೂ ಲಕ್ಷದ್ವೀಪದಲ್ಲೂ ಚುನಾವಣಾ ಆಯೋಗ ಕರಡು ಪಕಟಿಸಿದೆ.
ತಮಿಳುನಾಡು ಮೊದಲ ಹಂತದ SIR ಪರಿಷ್ಕರಣೆಯಲ್ಲಿ 97 ಲಕ್ಷ ಮತದಾರರ ಹೆಸರು ಡಿಲೀಟ್ ಮಾಡಲಾಗುತ್ತದೆ. ಈ ಪೈಕಿ ಚೆನ್ನೈನಲ್ಲೇ ಸಿಂಹಪಾಲು ಹೊಂದಿದೆ. ಚೆನ್ನೈನಲ್ಲಿ 14.25 ಲಕ್ಷ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲಾಗುತ್ತದೆ. ಮೃತಪಟ್ಟವರು, ಬೇರೆಡೆಗೆ ವರ್ಗಾವಣೆಗೊಂಡಿರುವ ಮತದಾರರು ಸೇರಿದಂತೆ ಭಾರತೀಯರಲ್ಲದವರು ಅಕ್ರಮವಾಗಿ ದಾಖಲೆ ಸೃಷ್ಟಿಸಿ ವೋಟರ್ ಐಡಿ ಗಿಟ್ಟಿಸಿಕೊಂಡವರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕಲಾಗುತ್ತದೆ.
ತಮಿಳುನಾಡಿನಲ್ಲಿ 97 ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಡಿಲೀಟ್ ಆದರೆ ರಾಜಕೀಯ ಲೆಕ್ಕಾಚಾರ ಬದಲಾಗಲಿದೆ. ಹೀಗಾಗಿ ಮುಂಬರುವ ಚುನಾವಣೆಗಳಲ್ಲಿ ಪ್ರಮುಕ ರಾಜಕೀಯ ಪಕ್ಷಗಳು ಹೊಸ ಮತದಾರರ ಪಟ್ಟಿಗೆ ಅನುಗುಣವಾಗಿ ರಾಜಕೀಯ ತಂತ್ರ ಹೂಡಬೇಕಿದೆ. ಹಳೇ ಪಟ್ಟಿ ಪ್ರಕಾರ ರಣತಂತ್ರ ಹೆಣೆದರೆ ಸೋಲಾಗುವ ಸಾಧ್ಯತೆ ಹೆಚ್ಚಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ