
ನವದೆಹಲಿ(ಜ.12): ಒಂದು ತಿಂಗಳ ಅಂತರದಲ್ಲಿ ಎರಡು ಬಾರಿ ಕೊರೋನಾ ಲಸಿಕೆ ಪಡೆಯುವ ಅನಿವಾರ್ಯತೆಯನ್ನು ತಪ್ಪಿಸಲು ವಿಜ್ಞಾನಿಗಳು ಹೊಸ ಲಸಿಕೆಯೊಂದರ ಶೋಧದಲ್ಲಿ ನಿರತರಾಗಿದ್ದಾರೆ. ಈ ಲಸಿಕೆಯನ್ನು ಒಂದು ಬಾರಿ ಪಡೆದರೆ ಸಾಕು. ಅಲ್ಲದೆ ಈ ಲಸಿಕೆ ಈಗ ಅನುಮತಿ ಪಡೆದುಕೊಂಡಿರುವ ಲಸಿಕೆಗಳಿಗಿಂತ ಅಗ್ಗವಾಗಿದ್ದು, ಸಾಮಾನ್ಯ ಉಷ್ಣಾಂಶದಲ್ಲೇ ಶೇಖರಿಸಿಡಬಹುದಾಗಿದೆ.
ಎಸಿಎಸ್ ಸೆಂಟ್ರಲ್ ಸೈನ್ಸ್ ಜರ್ನಲ್‌ನಲ್ಲಿ ಹೊಸ ಲಸಿಕೆಯ ಕುರಿತು ಅಧ್ಯಯನ ವರದಿ ಪ್ರಕಟವಾಗಿದೆ. ಇಲಿಗಳಲ್ಲಿನ ಕೊರೋನಾ ವೈರಸ್ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಸೃಷ್ಟಿಸುವಲ್ಲಿ ಈ ಲಸಿಕೆ ಯಶಸ್ವಿಯಾಗಿದೆ ಎಂದು ಅಮೆರಿಕದ ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯದ ಪೀಟರ್ ಕಿಮ್ ಅವರು ಅಧ್ಯಯನ ವರದಿ ಪ್ರಕಟಿಸಿದ್ದಾರೆ.
ಕೊರೋನಾ ವೈರಸ್‌ನಲ್ಲಿರುವ ಸ್ಪೈಕ್ ಪ್ರೋಟಿನ್‌ನ ಕೆಳಗಿನ ಒಂದು ಭಾಗವನ್ನು ತೆಗೆದು ಈ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ. ಕಬ್ಬಿಣಾಂಶದ ಪ್ರೋಟಿನ್ ಆಗಿರುವ ಫೆರ್ರಿಟಿನ್‌ನ ನ್ಯಾನೋಕಣಗಳ ಜತೆ ಅದನ್ನು ಸೇರಿಸಲಾಗಿದೆ. ದೇಹ ಸೇರುತ್ತಿದ್ದಂತೆ ರೋಗ ನಿರೋಧಕ ಪ್ರೋಟಿನ್‌ಗಳನ್ನು ಇದು ಒದಗಿಸುತ್ತದೆ ಎಂದು ವಿವರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ