ಸುಪ್ರೀಂಕೋರ್ಟ್ ಇತಿಹಾಸದಲ್ಲೇ ಅಯೋಧ್ಯೆ ತೀರ್ಪು ಐತಿಹಾಸಿಕವಾದದ್ದು. ರಂಜನ್ ಗೋಗೋಯ್ ನೇತೃತ್ವದ ಪಂಚ ಸದಸ್ಯ ಪೀಠ ಅಯೋಧ್ಯಾ ತೀರ್ಪನ್ನು ನೀಡಿದ್ದು ನ್ಯಾ. ಚಂದ್ರಚೂಡ್ ಬರೆದಿದ್ದಾರೆ ಎನ್ನಲಾಗಿದೆ. ಬರವಣಿಗೆ ಶೈಲಿ ಚಂದ್ರಚೂಡ್ ರೀತಿಯಲ್ಲೇ ಇದೆ ಎಂದು ವಿಶ್ಲೇಷಿಸಲಾಗಿದೆ.
ನವದೆಹಲಿ (ನ. 11): ಅಯೋಧ್ಯೆ ತೀರ್ಪು ಸರ್ವಾನುಮತದ್ದಾಗಿತ್ತು. ಆದರೆ ಇತರ ನ್ಯಾಯಾಧೀಶರ ಅನುಮೋದನೆಯೊಂದಿಗೆ ಇದನ್ನು ಬರೆದವರು ನ್ಯಾ| ಡಿ.ವೈ. ಚಂದ್ರಚೂಡ ಒಬ್ಬರೇ ಎಂದು ವಿಶ್ಲೇಷಿಸಲಾಗಿದೆ.
ಮುಖ್ಯ ನ್ಯಾಯಾಧೀಶ ನ್ಯಾ| ರಂಜನ್ ಗೊಗೋಯ್ ಅವರೊಬ್ಬರೇ 1045 ಪುಟಗಳ ಷ್ಟಿರುವ ಒಟ್ಟಾರೆ ತೀರ್ಪಿನ ಆಯ್ದ ಮುಖ್ಯಾಂಶ ಗಳನ್ನು ಓದಿದರು. ಆದರೆ ಬರವಣಿಗೆ ಶೈಲಿ ಹಾಗೂ ಅಕ್ಷರಗಳ ಮಾದರಿಯನ್ನು ಗಮನಿಸಿದಾಗ ಅವು ಡಿ.ವೈ. ಚಂದ್ರಚೂಡ ಅವರಿಗೆ ಪ್ರಿಯವಾದ ಶೈಲಿ ಹಾಗೂ ಮಾದರಿಗಳಾಗಿವೆ.
ಶ್ರೀರಾಮನ ಪರವಾಗಿ ವಾದಿಸಿದ್ದ ಕನ್ನಡಿಗ ವಕೀಲ ಕೆ ಎನ್ ಭಟ್
ಬೇರೆ ಯಾವ ನ್ಯಾಯಾಧೀಶರೂ ಒಂದು ತೀರ್ಪು ಪ್ರಕಟಿಸುವಾಗ, ವಿಷಯಗಳನ್ನು ಪ್ರತ್ಯೇಕಿಸಿ ಅವುಗಳನ್ನು ಪ್ರತ್ಯೇಕ ಅಧ್ಯಾಯದಲ್ಲಿ ಬರೆಯುವುದಿಲ್ಲ. ಆದರೆ ಅಯೋಧ್ಯೆ ತೀರ್ಪು ೧೭ ಅಧ್ಯಾಯ (‘ಎ’ನಿಂದ ‘ಕ್ಯೂ’ವರೆಗೆ) ಒಳಗೊಂಡಿದೆ. ತೀರ್ಪನ್ನು ಅಧ್ಯಾಯಗಳಾಗಿ ವಿಂಗಡಿಸುವುದು ಚಂದ್ರಚೂಡ್ ಅವರ ಪ್ರಿಯವಾದ ಶೈಲಿ. ಅವರು ಶಬರಿಮಲೆ, ಖಾಸಗಿ ಹಕ್ಕು ಹಾಗೂ ಆಧಾರ್ ತೀರ್ಪು ನೀಡುವ ವೇಳೆ ಇದೇ ರೀತಿ ಪ್ರತ್ಯೇಕ ಅಧ್ಯಾಯಗಳಲ್ಲಿ ತೀರ್ಪು ಬರೆದಿದ್ದರು.
ಹೀಗಾಗಿ ನ್ಯಾ| ಚಂದ್ರಚೂಡ ಅವರೇ ಅಯೋಧ್ಯೆ ತೀರ್ಪು ಬರೆದಿದ್ದು ಎಂದು ವಿಶ್ಲೇಷಿಸಲಾಗಿದೆ. 1045 ಪುಟ ಗಳ ತೀರ್ಪಿನಲ್ಲಿ ಮುಖ್ಯ ಸರ್ವಾನುಮತ ತೀರ್ಪು 929 ಪುಟಗಳನ್ನು ಹೊಂದಿದೆ. ಕೊನೆಯ 116 ಪುಟಗಳು ‘ಅನುಬಂಧ’ (ಹೊಸದಾಗಿ ಸೇರಿಸಿದುದು) ಆಗಿವೆ. ಇದನ್ನು ಬರೆದಿದ್ದು ನ್ಯಾ| ಅಶೋಕ್ ಭೂಷಣ್ ಎನ್ನಲಾಗಿದೆ.
ಅಯೋಧ್ಯೆ ತೀರ್ಪಿನ ಇನ್ನೊಂದು ವಿಶೇಷ ಎಂದರೆ ನ್ಯಾಯಾಧೀಶರ ಪಂಚ ಸದಸ್ಯ ಪೀಠದಲ್ಲಿ ಕನ್ನಡದವರೇ ಆದ ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರೆ ಬಳಿಯ ಬೆಳುವಾಯಿಯ ನ್ಯಾ. ಎಸ್ ಅಬ್ದುಲ್ ನಜೀರ್ ಕೂಡಾ ಒಬ್ಬರು.
ರಾಮ ಮಂದಿರ ಕಿಚ್ಚು ಹಚ್ಚಿಸಿದ್ದೇ ಸಿಂಘಾಲ್, ಅಡ್ವಾಣಿ
ASi ನೀಡಿದ ವರದಿಯಂತೆ ಬಾಬರಿ ಮಸೀದಿ ಕೆಳಗೆ ರಾಮ ಮಂದಿರದ ಕುರುಹುಗಳಿದ್ದವಿ ಎಂಬ ವಿಚಾರಕ್ಕೆ ಸಂಬಂಧಿಸಿದಂಥೆ ಅರ್ಜಿದಾರರಿಗೆ ಕಠಿಣ ಪ್ರಶ್ನೆಗಳನ್ನು ಕೇಳಿದ ನ್ಯಾಯಾಧೀಶರಲ್ಲಿ ಇವರೂ ಒಬ್ಬರು. ಸಿಜೆಐ ಮಿಶ್ರಾ ಅಯೋಧ್ಯಾ ಪ್ರಕರಣ ಇತ್ಯರ್ಥಕ್ಕೆ ನೇಮಿಸಿದ ಮೂರು ನ್ಯಾಯಾಧೀಶರಲ್ಲಿ ಇವರೂ ಒಬ್ಬರು.