ಕೇರಳದಲ್ಲಿ ಸೋಂಕು ಹೆಚ್ಚಳ: 3ನೇ ಅಲೆ ಸುಳಿವು?

By Suvarna NewsFirst Published Jul 9, 2021, 9:38 AM IST
Highlights

* ದೈನಂದಿನ ಸೋಂಕು, ಸಾವಲ್ಲೂ ಏರಿಕೆ

* ಕೇರಳದಲ್ಲಿ ಸೋಂಕು ಹೆಚ್ಚಳ: 3ನೇ ಅಲೆ ಸುಳಿವು?

* 10 ದಿನದಲ್ಲಿ ಸಕ್ರಿಯ ಕೇಸ್‌ 12,000 ಹೆಚ್ಚಳ

ತಿರುವನಂಥಪುರಂ(ಜು.09): 2ನೇ ಅಲೆ ಮುಗಿಯಿತು ಎಂದು ನಿಟ್ಟುಸಿರು ಬಿಡುವ ಮುನ್ನವೇ ಮೂರನೇ ಅಲೆ ಆರಂಭದ ಭೀತಿ ಉಂಟಾಗಿದೆ. ಹೌದು ಕೇರಳದಲ್ಲಿ ಸಕ್ರಿಯ ಸೋಂಕಿನ ಪ್ರಮಾಣ ಕೇವಲ 10 ದಿನಗಳಲ್ಲಿ 12,000 ಹೆಚ್ಚಾಗಿದೆ. ಜೂ.28ರಂದು ಕೇರಳದಲ್ಲಿ 96,012 ಸಕ್ರಿಯ ಕೇಸ್‌ ಇತ್ತು. ಜೂ.8ರ ವೇಳೆ ಅದೀಗ 1.10ಲಕ್ಷಕ್ಕೆ ಏರಿಕೆಯಾಗಿದೆ.

ಜು.5ರಿಂದ ಮೂರೇ ದಿನದ ಅಂತದಲ್ಲಿ 7,300 ಸಕ್ರಿಯ ಪ್ರಕರಣಗಳು ಹೆಚ್ಚಾಗಿವೆ. ಅಷ್ಟೇ ಅಲ್ಲದೆ ರಾಜ್ಯದ ದೈನಂದಿನ ಸೋಂಕು ಪ್ರಮಾಣವೂ ದ್ವಿಗುಣವಾಗುತ್ತಿದೆ. ಜೂ.28ರಂದು 8,063 ಪ್ರಕರಣಗಳು ದೃಢಪಟ್ಟಿದ್ದವು, ಆದರೆ ಗುರುವಾರ ಒಂದೇ ದಿನ 13,772 ಕೇಸ್‌ ಪತ್ತೆಯಾಗಿದೆ. ಕಳೆದ 10 ದಿನಗಳಲ್ಲಿ ರಾಜ್ಯದಲ್ಲಿ 1.23 ಲಕ್ಷ ಪ್ರಕರಣಗಳು ದೃಢಪಟ್ಟಿವೆ.

ಜೊತೆಗೆ ಸಾವಿನ ಪ್ರಮಾಣವೂ ದ್ವಿಗುಣವಾಗುತ್ತಿದೆ. ಜೂ.28ರಿಂದೀಚೆಗೆ 1119 ಸಾವು ಸಂಭವಿಸಿದೆ. ಗುರುವಾರ ಒಂದೇ ದಿನ 57 ಮಂದಿ ಮೃತಪಟ್ಟಿದ್ದಾರೆ. ಕೇವಲ 2 ತಿಂಗಳಲ್ಲಿ ಕೋವಿಡ್‌ ಸೋಂಕಿಗೆ ಬಲಿಯಾದವರ ಸಂಖ್ಯೆ ದುಪ್ಪಟ್ಟಾಗಿದೆ. ಮೇ 6ರಂದು ರಾಜ್ಯದಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 6,339 ಇತ್ತು. ಆದರೆ ಜೂ.16ರ ವೇಳೆ ಈ ಸಂಖ್ಯೆ 11,508ಕ್ಕೆ ಏರಿಕೆಯಾಗಿದೆ. ಈಗ ಒಟ್ಟು ಆವಿನ ಪ್ರಮಾಣ 14,250ಕ್ಕೆ ತಲುಪಿದೆ.

click me!