ಕೇರಳಕ್ಕೀಗ ಝೀಕಾ ವೈರಸ್‌ ಭೀತಿ!

By Suvarna News  |  First Published Jul 9, 2021, 9:00 AM IST

* ಕೇರಳಕ್ಕೀಗ ಝೀಕಾ ವೈರಸ್‌ ಭೀತಿ

* ಗರ್ಭಿಣಿ ಮಹಿಳೆಯಲ್ಲಿ ಮೊದಲ ಕೇಸ್‌ ದಾಖಲು

* ಒಟ್ಟು 13 ಜನರ ಮಾದರಿ ಪರೀಕ್ಷೆಗೆ ರವಾನೆ


ತಿರುವನಂತಪುರಂ(ಜು.09): ಕೇರಳದಲ್ಲಿ ಕೊರೋನಾ ವೈರಸ್‌ ಪ್ರಕಣಗಳ ಏರುಗತಿಯ ಮಧ್ಯೆಯೇ ಝಿಕಾ ವೈರಸ್‌ ಹರಡುವ ಭೀತಿ ಎದುರಾಗಿದೆ. 24 ವರ್ಷದ ಗರ್ಭಿಣಿ ಮಹಿಳೆಯಲ್ಲಿ ಝೀಕಾ ವೈರಸ್‌ನ ಮೊದಲ ಪ್ರಕರಣ ದೃಢಪಟ್ಟಿದೆ. ಇದೇ ವೇಳೆ ಪುಣೆಯ ನ್ಯಾಷನಲ್‌ ಇನ್‌ಸ್ಟೀಟ್ಯೂಟ್‌ ಆಫ್‌ ವೈರಾಲಜಿಗೆ ಕಳುಹಿಸಿಕೊಡಲಾದ 19 ಮಾದರಿಗಳ ಪೈಕಿ 1 ಪಾಸಿಟಿವ್‌ ಎಂದು ಖಚಿತಪಟ್ಟಿದೆ. 13 ಮಾದರಿ ಝೀಕಾ ವೈರಸ್‌ ಪಾಸಿಟಿವ್‌ ಆಗಿರಬಹುದಾದ ಶಂಕೆ ಇದೆ. ಈ ಎಲ್ಲಾ ಪ್ರಕರಣಗಳು ತಿರುವನಂತಪುರಂನಲ್ಲೇ ದಾಖಲಾಗಿವೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.

"

Tap to resize

Latest Videos

ಏನಿದು ಝೀಕಾ ವೈರಸ್‌?

ಝೀಕಾ ವೈರಸ್‌ ಸೊಳ್ಳೆಗಳ ಮೂಲಕ ಹರಡುವ ಕಾಯಿಲೆಯಾಗಿದೆ. ಜ್ವರ, ತುರಿಕೆ, ಮೈಕೈ ನೋವು, ಕಣ್ಣಿನ ತುರಿಕೆ ಝೀಕಾ ವೈರಸ್‌ನ ಲಕ್ಷಣಗಳಾಗಿವೆ. ಸಾಮಾನ್ಯವಾಗಿ ಇವು 2ರಿಂದ 7 ದಿನದಲ್ಲಿ ವಾಸಿಯಾಗುತ್ತವೆ. ಹೆಚ್ಚಿನವರಲ್ಲಿ ಝೀಕಾ ವೈರಸ್‌ನ ರೋಗ ಲಕ್ಷಣಗಳು ಕಂಡುಬರುವುದಿಲ್ಲ. ಈ ವೈರಸ್‌ನಿಂದ ಸಾವಿನ ಸಾಧ್ಯತೆ ತೀರಾ ಕಡಿಮೆ. ಆದರೆ, ಗರ್ಭಿಣಿಯರಲ್ಲಿ ಈ ವೈರಸ್‌ ಮಾರಕವಾಗಿ ಪರಿಣಮಿಸುವ ಸಾಧ್ಯತೆ ಇದೆ.

ಝೀಕಾ ವೈರಸ್‌1947ರಲ್ಲಿ ಉಗಾಂಡದಲ್ಲಿ ಮಂಗಗಳಲ್ಲಿ ಮೊದಲು ಪತ್ತೆ ಆಗಿತ್ತು. ಬಳಿಕ 1952ರಲ್ಲಿ ಮೊದಲ ಬಾರಿಗೆ ಮಾನವರಲ್ಲಿ ಈ ವೈರಸ್‌ ಹರಿಡಿತ್ತು. ಆಫ್ರಿಕಾ, ಅಮೆರಿಕ, ಏಷ್ಯಾದ ರಾಷ್ಟ್ರಗಳಲ್ಲಿ ಈ ವೈರಸ್‌ ಪತ್ತೆ ಆಗಿವೆ. ಭಾರತದಲ್ಲಿ 2018ರಲ್ಲಿ ಮೊದಲ ಝೀಕಾ ವೈರಸ್‌ ಕೇಸ್‌ ಜೈಪುರದಲ್ಲಿ ಪತ್ತೆ ಆಗಿತ್ತು. ಜೈಪುರದಲ್ಲಿ ಝೀಕಾ ವೈರಸ್‌ನ 80 ಪ್ರಕರಣಗಳು ಪತ್ತೆ ಆಗಿದ್ದವು.

click me!