
ನವದೆಹಲಿ: ಭಾರತದ ಗಗನಯಾನಿ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ಐಎಸ್‌ಎಸ್)ಕ್ಕೆ ಕರೆದೊಯ್ಯಲಿದ್ದ ಆಕ್ಸಿಯೋಂ-4 ಮಿಷನ್ ಮತ್ತೆ ಮುಂದೂಡಿಕೆಯಾಗಿದೆ. ನಭಕ್ಕೆ ಜಿಗಿಯಲಿದ್ದ ಸ್ಪೇಸ್‌ಎಕ್ಸ್‌ನ ಫಾಲ್ಕನ್-9 ರಾಕೆಟ್‌ನಲ್ಲಿ ಸೋರಿಕೆ ಕಂಡುಬಂದಿದ್ದರಿಂದ ಈ ನಿರ್ಧಾರಕ್ಕೆ ಬರಲಾಗಿದೆ.
ಇದರಿಂದ, 41 ವರ್ಷಗಳ ಬಳಿಕ ಭಾರತೀಯನನ್ನು ಅಂತರಿಕ್ಷದಲ್ಲಿ ಹಾಗೂ ಮೊದಲ ಬಾರಿ ಐಎಸ್‌ಎಸ್‌ನಲ್ಲಿ ಕಾಣುವ ಕನಸಿಗೆ ಅಲ್ಪವಿರಾಮ ಬಿದ್ದಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸ್ಪೇಸ್‌ಎಕ್ಸ್, ‘ರಾಕೆಟ್‌ನ ಬೂಸ್ಟರ್‌ನಲ್ಲಿ ದ್ರವರೂಪದ ಆಮ್ಲಜನಕ ಸೋರಿಕೆಯಾಗುತ್ತಿರುವುದು ಕಂಡುಬಂದಿರುವ ಕಾರಣ, ಅದರ ರಿಪೇರಿಗಾಗಿ ಉಡಾವಣೆಯನ್ನು ತಡೆಹಿಡಿಯಲಾಗಿದೆ. ಈ ಕಾರ್ಯ ಪೂರ್ಣವಾಗುತ್ತಿದ್ದಂತೆ ಉಡ್ಡಯನದ ಹೊಸ ದಿನಾಂಕವನ್ನು ಘೋಷಿಸುತ್ತೇವೆ’ ಎಂದು ತಿಳಿಸಿದೆ.
‘ಉಡಾವಣೆಗೆ ಒತ್ತಡ ಸೃಷ್ಟಿಸುವ ಹಂತ (ಪ್ರೊಪಲ್ಷನ್)ದಲ್ಲಿ 7 ಸೆಕೆಂಡ್ ನಡೆಸಲಾದ ಹಾಟ್ ಟೆಸ್ಟ್ ವೇಳೆ ದೋಷ ಕಂಡುಬಂದಿತ್ತು. ಈ ಬಗ್ಗೆ ಇಸ್ರೋ ಆಕ್ಸಿಯೋಂ ಮತ್ತು ಸ್ಪೇಸ್‌ಎಕ್ಸ್ ಜತೆ ಮಾತುಕತೆ ನಡೆಸಿದ್ದು, ಸಮಸ್ಯೆಯನ್ನು ಸರಿಪಡಿಸಿ ಅಗತ್ಯವಿರುವ ಪರೀಕ್ಷೆಗಳನ್ನು ಮಾಡುವ ನಿರ್ಧಾರಕ್ಕೆ ಬರಲಾಯಿತು’ ಎಂದು ಇಸ್ರೋ ಅಧ್ಯಕ್ಷ ವ. ನಾರಾಯಣನ್ ಮಾಹಿತಿ ನೀಡಿದ್ದಾರೆ.
ಈ ಮೊದಲು, ಮಂಗಳವಾರ(ಜೂ.10ರಂದು) ಉಡಾವಣೆಯನ್ನು ನಿಗದಿಪಡಿಸಲಾಗಿತ್ತಾದರೂ, ಸೂಕ್ತ ವಾತಾವರಣದ ಕೊರತೆಯ ಕಾರಣ ಅದನ್ನು ಬುಧವಾರಕ್ಕೆ ಮುಂದೂಡಲಾಗಿತ್ತು. ಇದಕ್ಕೂ ಮೊದಲು ಹಲವು ಬಾರಿ ಈ ಯೋಜನೆ ಮುಂದೂಡಲ್ಪಟ್ಟಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ